ಪಾರದರ್ಶಕ ಉಡುಗೆಯಲ್ಲಿ Bipasha Basu ಫೋಟೋ ಶೂಟ್‌ ವೈರಲ್

Published : Sep 03, 2022, 05:22 PM IST

ಬಾಲಿವುಡ್‌ ನಟಿ ಬಿಪಾಶಾ ಬಸು ತಮ್ಮ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಈ ನಡುವೆ ಅವರು ಮತ್ತೊಮ್ಮೆ ತಮ್ಮ ಪ್ರೆಗ್ನೆಂಸಿ ಪೋಟೋ ಶೂಟ್‌ಗೆ ಪೋಸ್‌ ನೀಡಿದ್ದಾರೆ.ಬಿಪಾಶಾ ಬಸು ಪಾರದರ್ಶಕ ಉಡುಗೆಯಲ್ಲಿ (Transparent Dress) ಬೇಬಿ ಬಂಪ್ (Baby Bump) ಅನ್ನು ತೋರಿಸಿದ್ದಾರೆ. ಬ್ಲ್ಯಾಕ್‌ ಟ್ರಾನ್ಸ್‌ಪರೆಂಟ್‌ ಡ್ರೆಸ್‌ನ ಅವರ ಬೋಲ್ಡ್‌ ಫೋಟೋಗಳು ವೈರಲ್‌ ಆಗಿವೆ. 

PREV
17
 ಪಾರದರ್ಶಕ ಉಡುಗೆಯಲ್ಲಿ Bipasha Basu ಫೋಟೋ ಶೂಟ್‌ ವೈರಲ್
bipasha basu

ಇತ್ತೀಚೆಗಷ್ಟೇ ಬಿಪಾಶಾ ಬಸು ತಮ್ಮ ಪ್ರೆಗ್ನೆಂಸಿ ಬಗ್ಗೆ  ಘೋಷಿಸಿದ್ದರು.  ಶುಕ್ರವಾರ, ಸೆಪ್ಟೆಂಬರ್ 2 ರಂದು, ನಟಿ ಮತ್ತೊಮ್ಮೆ ತಮ್ಮ ಫೋಟೋಶೂಟ್ ಒಂದರ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ಅವರು ತನ್ನ ಬೇಬಿ ಬಂಪ್‌ನ್ನು ತೋರಿಸಿದ್ದಾರೆ. 

27

ಬಿಪಾಶಾ ಬಸು ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಫೋಟೋದಲ್ಲಿ, ಅವರು ಕಪ್ಪು ಬಟ್ಟೆಯನ್ನು ಧರಿಸಿದ್ದಾರೆ, ಅದರಲ್ಲಿ ಅವರ ಬೇಬಿ ಬಂಪ್ ಗೋಚರಿಸುತ್ತದೆ. ಕಪ್ಪು ಹಿನ್ನೆಲೆಯಲ್ಲಿ ಕ್ಲಿಕ್ಕಿಸಿದ ಫೋಟೋಗಳು ಬಿಪಾಶಾ ಅವರ ಗ್ಲಾಮರ್ ಲುಕ್ (Glamour Look) ಅನ್ನು ಹೆಚ್ಚಿಸುತ್ತಿವೆ.


 

37

ಈ ಹಿಂದೆ ಹಂಚಿಕೊಂಡ ಫೋಟೋದಲ್ಲಿ, ಬಿಪಾಶಾ ಮತ್ತು ಕರಣ್ ಇಬ್ಬರೂ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಬಿಪಾಶಾ ಬಾಡಿಕಾನ್ ಟಾಪ್ ಧರಿಸಿದ್ದರೆ, ಕರಣ್ ಡೆನಿಮ್‌ಗಳೊಂದಿಗೆ ಬೇಸಿಕ್ ಟಿ-ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು.


 

47

ಇತ್ತೀಚೆಗೆ, ಬಿಪಾಶಾ ಬಸು ಕೆಲವು ಮೆಟರ್ನಿಟಿ ಫೋಟೋಶೂಟ್ (Maternity Photoshoot) ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಅವರ ನಟ ಪತಿ ಕರಣ್ ಸಿಂಗ್ ಗ್ರೋವರ್ ಕೂಡ ಕಾಣಿಸಿಕೊಂಡಿದ್ದಾರೆ. 

57

ಇದಲ್ಲದೇ, ಬಿಪಾಶಾ ಬಸು ಅವರು ಉದ್ದನೆಯ ಬಿಳಿ ಶರ್ಟ್ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ ಹೊಂದಿಕೆಯಾಗುವ ಉಡುಗೆಯನ್ನು ಧರಿಸಿದ್ದ ಕರಣ್ ಸಿಂಗ್ ಗ್ರೋವರ್ ಬಿಪಾಶಾ ಅವರ ಬೇಬಿ ಬಂಪ್‌ಗೆ ಕಿಸ್‌ ಮಾಡುತ್ತಿದ್ದಾರೆ. ಈ ಫೋಟೋಗಳಿಗಾಗಿ ದಂಪತಿ ತುಂಬಾ ಕೆಟ್ಟದಾಗಿ ಟ್ರೋಲ್ ಆಗಿದ್ದರು.

67

ಆದರೆ, ಬಿಪಾಸಾ ಬಸು ಕೂಡ ಟ್ರೋಲರ್‌ಗಳ ವಿರುದ್ಧ ಪ್ರತಿಕ್ರಿಯಿಸಿದ್ದಾರೆ. ತನ್ನ ಮೆಟರ್ನಿಟಿ ಶೂಟ್‌ಗಾಗಿ ತನ್ನನ್ನು ಪ್ರಶ್ನಿಸಿದ ಟ್ರೋಲ್‌ಗಳಿಗೆ ಉತ್ತರಿಸಿದ ಬಿಪಾಶಾ, ಮಗುವಿನ ಬಂಪ್ ಅನ್ನು ತೋರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು

77

ಬಿಪಾಶಾ ಬಸು ಮತ್ತು ಕರಣ್ ಸಿಂಗ್  ಅವರು ಮೆಟರ್ನಿಟಿ ಶೂಟ್ ಮಾಡಲು ಬಯಸಿದ್ದರು ಮತ್ತು ಅವರು ತನ್ನ ಬೇಬಿ ಬಂಪ್ ಅನ್ನು ತೋರಿಸಲು ಬಯಸಿದ್ದರು, ಅದು ಯಾರಿಗೂ ತೊಂದರೆಯಾಗಬಾರದು, ತನ್ನ ಗರ್ಭಾವಸ್ಥೆಯ ಪ್ರತಿ ಕ್ಷಣವನ್ನು ಬದುಕಲು ಬಯಸುತ್ತಾರೆ ಎಂದು ಅವರು ಹೇಳಿದರು.

Read more Photos on
click me!

Recommended Stories