ಕಪಿಲ್ ಶರ್ಮಾ ಕನಸು ನನಸು ಮಾಡಿದ ಡಿಪ್ಪಿ, ಸೆಟ್ಟೇರಿದ Comedy Movie

First Published | Sep 3, 2022, 5:06 PM IST

ಅಂತೂ ಇಂದೂ ಹಾಸ್ಯನಟ ಕಪಿಲ್ ಶರ್ಮಾ ಅವರ ಕನಸು (Dream) ಈಡೇರಲಿದೆ. ಅವರು ತಮ್ಮ ಕ್ರಶ್‌ (Crush) ಹಾಗೂ ಫೇವರೇಟ್‌ ನಟಿ ಜೊತೆ ಕೆಲಸ ಮಾಡಲು ರೆಡಿಯಾಗಿದ್ದಾರೆ. ಕಪಿಲ್ ತಮ್ಮ ಮುಂಬರುವ ಸಿನಿ ಪ್ರಾಜೆಕ್ಟ್ 'ಮೆಗಾ ಬ್ಲಾಕ್ಬಸ್ಟರ್' ನ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಇದನ್ನು ಘೋಷಿಸಿದರು. ನಟಿ ದೀಪಿಕಾ ಪಡುಕೋಣೆ ಈ ಪ್ರೊಜೆಕ್ಟಿನಲ್ಲಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.ದಕ್ಷಿಣದ ನಟಿ ರಶ್ಮಿಕಾ ಮಂದಣ್ಣ, ತ್ರಿಶಾ ಕೃಷ್ಣನ್ ಮತ್ತು ಕಾರ್ತಿಯನ್ನು ಹೊರತುಪಡಿಸಿ, ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ಸೌರವ್ ಗಂಗೂಲಿ ಕೂಡ ಈ ಯೋಜನೆ ಭಾಗವಾಗಲಿದ್ದಾರೆ. ಆದಾಗ್ಯೂ, ಈ ಯೋಜನೆಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಈ ಪ್ರಾಜೆಕ್ಟ್ ಟ್ರೈಲರ್ ಸೆಪ್ಟೆಂಬರ್ 4 ರಂದು ಬಿಡುಗಡೆಯಾಗಲಿದೆ.

ಇದರ ಪೋಸ್ಟರ್ ಮತ್ತು ಮಾಹಿತಿಯನ್ನು ಮೊದಲು ದೀಪಿಕಾ ಪಡುಕೋಣೆ ಹಂಚಿಕೊಂಡಿದ್ದಾರೆ.  'ಸರ್‌ಪ್ರೈಸ್‌, ಟ್ರೈಲರ್ ಸೆಪ್ಟೆಂಬರ್ 4 ರಂದು ಬಿಡುಗಡೆಯಾಗಲಿದೆ' ಎಂದು ಅವರು ಬರೆದಿದ್ದಾರೆ. ಇದರೊಂದಿಗೆ, ದೀಪಿಕಾ ತನ್ನ  'ಮೆಗಾ ಬ್ಲಾಕ್ಬಸ್ಟರ್' ಲುಕ್‌ನ ಬಹಿರಂಗಪಡಿಸಿದರು, ಇದರಲ್ಲಿ ಅವಳು ಗುಲಾಬಿ ಬಣ್ಣದ ಸೂಟ್ ಧರಿಸಿದ್ದಾರೆ. 

ಸಾಮಾಜಿಕ ಮಾಧ್ಯಮದಲ್ಲಿ (Social Media) ತಮ್ಮ ಲುಕ್‌ನ ಪೋಸ್ಟರ್ ಅನ್ನು ಹಂಚಿಕೊಂಡ, ಕಪಿಲ್ ಶರ್ಮಾ, ಫೋಟೋದಲ್ಲಿ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡರು. ಟೀ ಶರ್ಟ್ ಮತ್ತು ನೀಲಿ ಅರ್ಧ ತೋಳುಗಳು ಸ್ಲೀವ್ ಜಾಕೆಟ್ ಧರಿಸಿರುವುದನ್ನು ಕಾಣಬಹುದು.

Tap to resize

ಬಾಲಿವುಡ್, ದಕ್ಷಿಣ ಮತ್ತು ಕ್ರಿಕೆಟ್ ಸ್ಟಾರ್ಸ್‌ನ (Cricketers) ಈ ಸಂಯೋಜನೆಯನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಪ್ರಾಜೆಕ್ಟ್‌ ಬಗ್ಗೆ ಇನ್ನೂ ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲದ ಕಾರಣ, ಪ್ರತಿಯೊಬ್ಬರೂ ಸೆಪ್ಟೆಂಬರ್ 4ಗಾಗಿ ಕಾಯುತ್ತಿದ್ದಾರೆ, ಈ ಚಿತ್ರಕ್ಕಾಗಿ ಅವರು ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಅನೇಕ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕಪಿಲ್ ಶರ್ಮಾ ತಮ್ಮ ಡ್ರೀಮ್ ಗರ್ಲ್ ದೀಪಿಕಾ ಪಡುಕೋಣೆ ಜೊತೆ ಚಿತ್ರವೊಂದನ್ನು ಮಾಡಬೇಕೆಂಬ ಕನಸನ್ನು ಬಹಳ ದಿನಗಳಿಂದ ಇಟ್ಟುಕೊಂಡಿದ್ದರು. ಇದಕ್ಕೀ ಮುಹೂರ್ತ ಕೂಡಿ ಬಂದಿದ್ದು, ಕ್ರಿಕೆಟರ್ಸ್ ಹಾಗೂ ಇತರೆ ದಕ್ಷಿಣ ಭಾರತೀಯ ತಾರೆಯರೂ ಕೈ ಜೋಡಿಸಿದ್ದು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ. 

ದೀಪಿಕಾ ಪಡುಕೋಣೆ ಹಾಸ್ಯನಟ ಕಪಿಲ್ ಶರ್ಮಾ ಅವರ ನೆಚ್ಚಿನ ನಟಿ. ಕಪಿಲ್ ಕೂಡ ತನ್ನ ಕಾಮಿಡಿ ಶೋನಲ್ಲಿ ದೀಪಿಕಾ ಅವರೊಂದಿಗೆ ಫ್ಲರ್ಟ್‌ ಮಾಡುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. 

ಕಪಿಲ್ ಅವರು ನಿರ್ದೇಶಕ ನಂದಿತಾ ದಾಸ್ ಅವರ ಚಲನಚಿತ್ರ ಜ್ವಿಗಾಟೊದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜೊತೆ ಶಹಾನಾ ಗೋಸ್ವಾಮಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ, ಕಪಿಲ್ ಪುಡ್‌ ಡೆಲೆವರಿ ಹುಡುಗನ (Food Delivery Boy) ಪಾತ್ರದಲ್ಲಿದ್ದಾರೆ ಮತ್ತು ಕಥೆ ಈ ಪಾತ್ರದ ಹೋರಾಟವನ್ನು ಹೇಳುತ್ತದೆ. ಟೊರೊಂಟೊ ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ಬಿಡುಗಡೆಯಾಗಲಿದೆ. ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 18 ರವರೆಗೆ ನಡೆಯಲಿದೆ. 

ಇದಲ್ಲದೆ, ಕಪಿಲ್ ತನ್ನ ಹಾಸ್ಯ ಕಾರ್ಯಕ್ರಮದ 'ದಿ ಕಪಿಲ್ ಶರ್ಮಾ ಶೋ' ನ 4 ನೇ ಸೀಸನ್‌ನೊಂದಿಗೆ ಟಿವಿಯಲ್ಲಿ ಪುನರಾಗಮನ ಮಾಡಲು ಹೊರಟಿದ್ದಾರೆ. ಇದು ಸೆಪ್ಟೆಂಬರ್ 10 ರಿಂದ ದೂರದರ್ಶನದಲ್ಲಿ ಪ್ರಸಾರವಾಗಲಿದೆ.

Latest Videos

click me!