ಆ್ಯಂಕರ್ ಸುಮಾ-ರಾಜೀವ್ ವಿಚ್ಛೇದನ: ತಂದೆ-ತಾಯಿ ಡಿವೋರ್ಸ್ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಮಗ ರೋಶನ್

Published : Dec 13, 2025, 01:57 PM IST

ಸುಮಾ ಅವರ ಮಗ ರೋಶನ್ ಕನಕಾಲ 'ಮೋಗ್ಲಿ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. 'ಮೋಗ್ಲಿ' ಚಿತ್ರದ ಪ್ರಚಾರದ ಭಾಗವಾಗಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು, ಅದರಲ್ಲಿ ಸುಮಾ ಮತ್ತು ರಾಜೀವ್ ಅವರ ವಿಚ್ಛೇದನದ ಬಗ್ಗೆಯೂ ವಿವರಿಸಿದ್ದಾರೆ.

PREV
14
ಸುಮಾ ಅವರ ಮಗ ರೋಶನ್

ತೆಲುಗಿನ ಟಾಪ್ ಆ್ಯಂಕರ್ ಸುಮಾ ಅವರ ಮಗ ರೋಶನ್ ಕನಕಾಲ 'ಮೋಗ್ಲಿ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಂದರ್ಶನವೊಂದರಲ್ಲಿ, ತಂದೆ-ತಾಯಿ ಸುಮಾ ಮತ್ತು ರಾಜೀವ್ ಅವರ ವಿಚ್ಛೇದನದ ವದಂತಿಗಳ ಬಗ್ಗೆ ಮಾತನಾಡಿದ್ದಾರೆ.

24
ಓದಿಗಿಂತ ಸಿನಿಮಾ ಮೇಲೆ ಆಸಕ್ತಿ

ಆ್ಯಂಕರ್ ಸುಮಾ ಮತ್ತು ನಟ ರಾಜೀವ್ ಕನಕಾಲ ಮಗನಾಗಿ ರೋಶನ್‌ಗೆ ಈಗಾಗಲೇ ಗುರುತಿದೆ. ಆದ್ರೆ ಸ್ವಂತ ಗುರುತು ಬೇಕು ಅನ್ನೋದು ಅವರ ಆಸೆ. ಚಿಕ್ಕಂದಿನಿಂದಲೂ ಓದಿಗಿಂತ ಸಿನಿಮಾ ಮೇಲೆಯೇ ಹೆಚ್ಚು ಆಸಕ್ತಿ ಇತ್ತು. ಕಷ್ಟಪಟ್ಟು ಇಂಟರ್ ಮುಗಿಸಿ, ಅಮ್ಮನ ಒತ್ತಾಯಕ್ಕೆ ದೂರ ಶಿಕ್ಷಣದಲ್ಲಿ ಬಿಕಾಂ ಮಾಡಿದ್ದಾಗಿ ಹೇಳಿದ್ದಾರೆ. ತಾತ ದೇವದಾಸ್ ಕನಕಾಲ ಬಳಿ ನಟನೆ ಕಲಿತಿದ್ದಾರಂತೆ.

34
ಕರ್ಮದ ಫಲ ಸಿಕ್ಕೇ ಸಿಗುತ್ತದೆ

ಮೂರು ವರ್ಷಗಳ ಹಿಂದೆ ತಂದೆ-ತಾಯಿ ವಿಚ್ಛೇದನದ ಸುದ್ದಿ ಕೇಳಿ ಮನೆಯಲ್ಲಿ ಎಲ್ಲರೂ ಭಾವುಕರಾಗಿದ್ದರು, ಅಮ್ಮ ಸುಮಾ ಕೂಡ ತುಂಬಾ ಎಮೋಷನಲ್ ಆಗಿದ್ದರು. ಆದರೆ ಮನೆಯ ಪರಿಸ್ಥಿತಿ ನಮಗೆ ಮಾತ್ರ ಗೊತ್ತು. ಆ ಸಮಯದಲ್ಲಿ ಅಪ್ಪ-ಅಮ್ಮ ಒಟ್ಟಿಗೆ ಇದ್ದರು. ಈ ವದಂತಿ ಹಬ್ಬಿಸಿದವರಿಗೆ ಕರ್ಮದ ಫಲ ಸಿಕ್ಕೇ ಸಿಗುತ್ತದೆ ಎಂದು ರೋಶನ್ ಹೇಳಿದ್ದಾರೆ.

44
ಮನಮುಟ್ಟುವ ಪ್ರೇಮಕಥೆ

ರೋಶನ್ ಕನಕಾಲ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರ 'ಮೋಗ್ಲಿ'. ಇದು ಡಿಸೆಂಬರ್ 13 ರಂದು ಬಿಡುಗಡೆಯಾಗಿದೆ. ಸಾಕ್ಷಿ ಮಡೋಲ್ಕರ್ ನಾಯಕಿ, ಸರೋಜ್ ಕುಮಾರ್ ಖಳನಾಯಕ. ಇದು ಮನಮುಟ್ಟುವ ಪ್ರೇಮಕಥೆಯಾಗಿದ್ದು, ಆಕ್ಷನ್ ದೃಶ್ಯಗಳೂ ಇವೆ. ಕಾಲಭೈರವ ಸಂಗೀತ ನೀಡಿದ್ದು, ಸಂದೀಪ್ ರಾಜ್ ನಿರ್ದೇಶಿಸಿದ್ದಾರೆ.

Read more Photos on
click me!

Recommended Stories