ನಂದಮೂರಿ ಬಾಲಕೃಷ್ಣರ ಅಖಂಡ 2 ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಆದರೆ, ಇದರ ತೆಲುಗು ಆವೃತ್ತಿ ಗುರುವಾರವೇ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಶುಕ್ರವಾರ ತೆರೆಕಂಡಿದೆ. ಅಖಂಡ 2 ಕಲೆಕ್ಷನ್ ವಿಚಾರಕ್ಕೆ ಬಂದರೆ, ಗುರುವಾರ ತೆರೆಕಂಡ ತೆಲುಗು ವರ್ಷನ್ 7.8 ಕೋಟಿ ರೂ. ಗಳಿಸಿದೆ. ತೆಲುಗು ಆವೃತ್ತಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.