ಸೊಸೆ ಐಶ್ವರ್ಯಾರನ್ನ ಅನ್‌ಫಾಲೋ ಮಾಡಿದ ವದಂತಿಗಳ ನಡುವೆ ಬಿಗ್‌ ಬಿ ರಹಸ್ಯ ಪೋಸ್ಟ್!

First Published | Dec 10, 2023, 5:32 PM IST

ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ರೈ  (Aishwarya Rai) ಅವರನ್ನು ಅಮಿತಾಬ್ ಬಚ್ಚನ್ (Amitabh Bachchan ) ಅನ್‌ಫಾಲೋ ಮಾಡಿದ್ದಾರೆಯೇ? ಈ ವದಂತಿಗಳ ನಡುವೆ ಬಿಗ್ ಬಿ ರಹಸ್ಯ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಏನಾಗಿದೆ ಮಾಮ ಮತ್ತು ಸೊಸೆ ನಡುವೆ?

ಅಮಿತಾಭ್ ಬಚ್ಚನ್ ಅವರು ಐಶ್ವರ್ಯಾ ರೈ ಅವರನ್ನು  ಅನ್‌ಫಾಲೋ ಮಾಡಿದ್ದಾರೆ  ಎಂಬ ವದಂತಿಗಳ ನಡುವೆ ಬಿಗ್‌ ಅವರು ಎಕ್ಸ್‌ ಫ್ಲಾಟ್‌ಫಾರ್ಮ್‌ನಲ್ಲಿ  ರಹಸ್ಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Tap to resize

ಕೆಲವು ವರದಿಗಳ ಪ್ರಕಾರ, ದಿ ಆರ್ಚೀಸ್ ಪ್ರೀಮಿಯರ್‌ ನಂತರ ಅಮಿತಾಬ್  ಬಚ್ಚನ್‌  ಸೊಸೆ ಐಶ್ವರ್ಯಾ ಅವರನ್ನು ಅನುಸರಿಸುತ್ತಿಲ್ಲ.

ಆದರೆ ಈ ಮೊದಲು  ಅಮಿತಾಬ್ ಬಚ್ಚನ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸೊಸೆ ಐಶ್ವರ್ಯಾ ರೈ ಅವರನ್ನು ಅನುಸರಿಸುತ್ತಿದ್ದರೆ  ಎಂಬುದು ಖಚಿತವಾಗಿ ನಿರೂಪಿಸಲು  ಸಾಧ್ಯವಾಗಿಲ್ಲ.

ಅಷ್ಟೇ ಅಲ್ಲ, ಅಮಿತಾಬ್‌ ಬಚ್ಚನ್‌ ಮತ್ತು ಬಚ್ಚನ್ ಕುಟುಂಬವು ಐಶ್ವರ್ಯಾ ಅವರನ್ನು ಅನ್ ಫಾಲೋ ಮಾಡಿದ್ದಾರೆ ಎಂಬ ವದಂತಿ ಮತ್ತು ಆರೋಪಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ. 

ಈ ಎಲ್ಲಾ ಊಹಾಪೋಹಗಳ ನಡುವೆ ಅಮಿತಾಬ್‌ ಅವರು ರಹಸ್ಯವಾದ ಹೇಳಿಕೆಯನ್ನು ಪ್ರಕಟಿಸಿದ್ದಾರೆ . ಶನಿವಾರದಂದು, ನಟ Xನಲ್ಲಿ  (ಹಿಂದೆ ಟ್ವಿಟರ್)  ಕೌನ್ ಬನೇಗಾ ಕರೋಡ್ಪತಿಯ ಸೆಟ್‌ನಲ್ಲಿರುವ ಫೋಟೋವನ್ನು ವಿಚಿತ್ರವಾದ ಹೇಳಿಕೆಯೊಂದಿಗೆ ಪ್ರಕಟಿಸಿದರು.

ಅಮಿತಾಭ್  ಕಪ್ಪು ಬಿಳುಪು ಫೋಟೋ ಅನ್ನು ಪೋಸ್ಟ್ ಮಾಡಿ,  'ಎಲ್ಲವೂ ಹೇಳಿಯಾಗಿದೆ ಎಲ್ಲವೂ ಮುಗಿದಿದೆ.  ಆದ್ದರಿಂದ ಮಾಡಿರುವುದನ್ನು ಮಾಡಿ ಮತ್ತು ಮಾಡುವುದನ್ನು ಮಾಡಿ' ಎಂದು ಬಿಗ್‌ ಬಿ ಬರೆದಿದ್ದಾರೆ.

ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ವಿರಾಟ್ ಕೊಹ್ಲಿ, ಶ್ವೇತಾ ಬಚ್ಚನ್ ನಂದಾ, ಮತ್ತು ನವ್ಯಾ ನವೇಲಿ ನಂದಾ ಸೇರಿದಂತೆ  74 ಜನರನ್ನು ಅಮಿತಾಬ್‌ ಇನ್‌ಸ್ಟಾಗ್ರಾಮ್‌ನಲ್ಲಿ  ಫಾಲೋ ಮಾಡುತ್ತಾರೆ

 ಮತ್ತೊಂದೆಡೆ, ಐಶ್ವರ್ಯಾ ರೈ ಅವರು ತನ್ನ ಪತಿ ಅಭಿಷೇಕ್ ಬಚ್ಚನ್‌ ಅವರನ್ನು ಮಾತ್ರ  Instagram ನಲ್ಲಿ ಅನುಸರಿಸುತ್ತಾರೆ.

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು, ಅಮಿತಾಬ್ ಮತ್ತು ಐಶ್ವರ್ಯಾ ಮೊದಲಿನಿಂದಲೂ ಒಬ್ಬರನ್ನೊಬ್ಬರು ಅನುಸರಿಸಲಿಲ್ಲ ಎಂದು ನಂಬುತ್ತಾರೆ.

ಈ ಎಲ್ಲಾ ವರದಿಗಳಿಗೆ ಮೊದಲು ,ಅಗಸ್ತ್ಯ ನಂದಾ ಅವರ ಮೊದಲ ಚಿತ್ರ ದಿ ಆರ್ಚೀಸ್‌ನ ಉದ್ಘಾಟನಾ ಸಮಾರಂಭದಲ್ಲಿ ಇಡೀ ಬಚ್ಚನ್ ಕುಟುಂಬ ಸಂತೋಷದಿಂದ ಒಟ್ಟಿಗೆ ಫೋಟೋಗೆ ಪೋಸ್‌ ನೀಡಿದ್ದರು.

Latest Videos

click me!