ಫೇಮಸ್‌ ಸಿನೆಮಾ ರೈಟರ್‌ ಆಗೋಕು ಮುಂಚೆ ವೇಶ್ಯೆ, ಬಾರ್ ಡ್ಯಾನ್ಸರ್ ಆಗಿದ್ದ ಈಕೆಯ ಕಥೆಯೇ ಸಿನೆಮಾವಾಗಿ ಹಿಟ್ ಆಯ್ತು!

First Published Dec 10, 2023, 5:21 PM IST

ಚಲನಚಿತ್ರದ ಅತ್ಯಂತ ಅವಿಭಾಜ್ಯ ಅಂಗಗಳಲ್ಲಿ ಸ್ಕ್ರಿಪ್ಟ್  ಕೂಡ ಒಂದು. ಸಿನೆಮಾದಲ್ಲಿ ಬರಹಗಾರರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಸ್ಕ್ರಿಪ್ಟ್ ಬಲವಾಗಿದ್ದಷ್ಟೂ ಚಿತ್ರ ಹೆಚ್ಚು ಮನರಂಜನೆ ನೀಡುತ್ತದೆ.  ಈಕೆ ಸ್ಟಾರ್ ಬರಹಗಾರ್ತಿ. ಈಕೆಯ ನಿಜ ಜೀವನದ ಕಥೆಯು ಸ್ಪೂರ್ತಿದಾಯಕ ಚಲನಚಿತ್ರಕ್ಕಿಂತ ಕಡಿಮೆಯಿಲ್ಲ. 

ಈಕೆ ಪ್ರಸಿದ್ಧ ರೈಟರ್‌ ಇಮ್ರಾನ್ ಹಶ್ಮಿ ಮತ್ತು ಆದಿತ್ಯ ರಾಯ್ ಕಪೂರ್‌ಗೆ ದೊಡ್ಡ ಹಿಟ್‌ಗಳನ್ನು ನೀಡಿದಾಕೆ. ವೋ ಲಮ್ಹೆ, ಮರ್ಡರ್ 2, ಜನ್ನತ್ 2, ಆಶಿಕಿ 2, ಜಿಸ್ಮ್ 2, ಮತ್ತು ರಾಜ್ 3D ಸೇರಿದಂತೆ ಬ್ಲಾಕ್‌ಬಸ್ಟರ್‌ ಸಿನೆಮಾಗಳ ಹಿಂದೆ ಈಕೆಯ ಬರಹವಿದೆ. ಆಕೆಯೇ  ಶಗುಫ್ತಾ ರಫೀಕ್ .

 'ಆಶಿಕಿ-2' ಸಿನಿಮಾ ಬರಹಗಾರ್ತಿ ಶಿಗುಫ್ತಾ ರಫಕಿ ಬಡತನದ ಕುಟುಂಬದಿಂದ ಬಂದಾಕೆ.  ಅನಿವಾರ್ಯ ಕಾರಣಕ್ಕೆ ಕೆಲ ವರ್ಷಗಳ ಕಾಲ ವೇಶ್ಯೆಯಾಗಿದ್ದರಂತೆ, ಆ ನಂತರ ಬಾರ್‌ ಡ್ಯಾನ್ಸರ್‌ ಆಗಿದ್ದರಂತೆ. 

Latest Videos


ತಂದೆ-ತಾಯಿ ಯಾರೆಂದು ತಿಳಿಯದ ಶಗುಫ್ತಾಳನ್ನು ಯಾರೋ ಹೆಣ್ಣು ಮಗಳೊಬ್ಬಳು ಸಾಕಿದ್ದರು. ಆಕೆಗೆ ಕೊಲ್ಕತ್ತದ ವ್ಯಕ್ತಿ ಜೊತೆ ಅಕ್ರಮ ಸಂಬಂಧವಿತ್ತು. ಆದರೆ ಆ ವ್ಯಕ್ತಿ ಅಕಾಲಿಕ ಮರಣ ಹೊಂದಿದರು. ಶಗುಫ್ತಾ ಹಾಗೂ ಸಾಕು ತಾಯಿ ಒಂದು ಹೊತ್ತು ಊಟಕ್ಕೂ ಕಷ್ಟ ಪಡುವ ಪರಿಸ್ಥಿತಿ ಎದುರಾಯ್ತು. ಬಡತನವನ್ನು ಎದುರಿಸಲು ಶಗುಫ್ತಾ 11ನೇ ವಯಸ್ಸಿಗೆ ಬಾರ್‌ ಡ್ಯಾನ್ಸರ್ ಆಗಿ ಕುಣಿಯಲು ಪ್ರಾರಂಭಿಸಿದರು.  

ಬಾರ್‌ ಡ್ಯಾನ್ಸರ್‌ ಆಗಿ ಜೀವನ ನಡೆಸುತ್ತಿದ್ದ ಶಗುಫ್ತಾ 16ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಧಾರಣ ಸಿರಿವಂತನಾಗಿದ್ದ ವ್ಯಕ್ತಿ ದಿನೇ ದಿನೆ ಶಗುಫ್ತಾಳನ್ನು ಹಿಂಸಿಸಲು ಆರಂಭಿಸಿದ ಕಾರಣ ಶಿಗುಫ್ತಾ ಆತನನ್ನು ತೊರೆದರು.

ಗಂಡನಿಂದ ದೂರಾದ ಬಳಿಕ ಶಗುಫ್ತಾ 17ನೇ ವಯಸ್ಸಿಗೆ ವೇಶ್ಯಾವಾಟಿಕೆಗೆ ಇಳಿಯುವಂತೆ ಮಾಡಿತ್ತು ಜೀವನ. ಮನೆಯವರನ್ನು ಸಾಕಲು 10 ವರ್ಷಗಳ ಕಾಲ ಮೈ ಮಾರಿಕೊಂಡಿದ್ದರು. ಜೊತೆಗೆ  ಮತ್ತೆ ಬಾರ್‌ ಡ್ಯಾನ್ಸರ್‌ ಆಗಿ ಕೆಲಸ ಆರಂಭಿಸಿದರು. ಈ ಮೂಲಕ 700 ರೂ ದುಡಿಯುತ್ತಿದ್ದರು.

25ನೇ ವಯಸ್ಸಿಗೆ ಯಾರೋ ಒಬ್ಬರ  ಸಹಾಯ ಪಡೆದು ದುಬೈಗೆ ತೆರಳಿ ಅಲ್ಲಿಯೂ ವೇಶ್ಯಾವಾಟಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ದುಬೈನಲ್ಲಿ ತನಗಿಂತಲೂ  20 ವರ್ಷದ ಹಿರಿಯ ವ್ಯಕ್ತಿ ಜೊತೆ ಶಗುಫ್ತಾ ಮದುವೆಯಾಗಲು ನಿರ್ಧರಿಸಿದ್ದರು. ಹೀಗಾದರೂ  ಜೀವನದಲ್ಲಿ ನೆಲೆ ಸಿಗುತ್ತದೆ ಎಂದು ಶಗುಫ್ತಾ ಮದುವೆಗೆ ಒಪ್ಪಿಕೊಂಡರು ಆದರೆ ದುರಾದೃಷ್ಟ ಆ ವ್ಯಕ್ತಿ  ಮೃತಪಟ್ಟರು.

ಎಲ್ಲದರಿಂದಲೂ ಬೇಸತ್ತ ಶಗುಫ್ತಾ ಮತ್ತೆ ಬಾರ್‌ ಡ್ಯಾನ್ಸರ್‌ ಆಗಲು ಮುಂಬೈಗೆ ಮರಳುತ್ತಾರೆ. ಅಲ್ಲಿ ತನ್ನ  ಜೀವನವನ್ನು ಕಥೆ ರೂಪದಲ್ಲಿ ಬರೆಯಲು ಪ್ರಾರಂಭಿಸುತ್ತಾರೆ. ತನ್ನ ಕಥೆಯನ್ನು ಹಿಡಿದುಕೊಂಡು ವಿನೇಶ್‌ ಸ್ಟುಡಿಯೋಸ್‌ ಗೆ ಹೋಗುತ್ತಾರೆ. ಅಲ್ಲಿ ಮಹೇಶ್‌ ಭಟ್‌ ಆಕೆಯ ಪ್ರತಿಭೆ ಗುರುತಿಸಿ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ.  

ಅಲ್ಲಿಂದ ಶುರುವಾಯ್ತು  ಶಗುಫ್ತಾ ಸಿನಿ ಜರ್ನಿ. ಇದುವರೆಗೂ 20    ಸಿನಿಮಾಗಳಿಗೆ ಕಥೆ- ಚಿತ್ರಕಥೆ, ಡೈಲಾಗ್‌ ಬರೆದಿದ್ದಾರೆ ಹಾಗೂ ಒಂದು ತೆಲುಗು, ಬೆಂಗಾಳಿ ಸಿನಿಮಾಕ್ಕೂ ಕಥೆ ಬರೆದಿದ್ದಾರೆ. ತನ್ನ ಸಿನಿಮಾಗಳು ಹಿಟ್‌ ಆಗುತ್ತಿದಂತೆ ಶಿಗುಫ್ತಾ ನಿರ್ದೇಶನ ಶುರು ಮಾಡಿಕೊಂಡು ಮೂರು ಸಿನಿಮಾಗಳಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಒಟ್ಟಾರೆ ಬಾಲಿವುಡ್‌ನಲ್ಲಿ ಶಗುಫ್ತಾ ಬರೆಯುವ ಚಿತ್ರಕಥೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದೆ. ಕೋಟಿಗೆ ಮಾರಾಟವಾಗುವ ಇವರ ಕಥೆಗಳನ್ನು ಪಡೆಯಲು ನಿರ್ದೇಶಕರು ಹಾಗೂ ನಟರು ಕಾಯುತ್ತಿದ್ದಾರೆ.

click me!