ಇಮ್ರಾನ್ ಹಶ್ಮಿ ಜತೆಗಿನ ಕಿಸ್ಸಿಂಗ್ ಸೀನ್ ಮೆಲುಕು ಹಾಕಿದ ನಟಿ

Published : Dec 10, 2023, 04:08 PM IST

ಬಾಲಿವುಡ್ ನಟ ಗ್ಯಾಂಗ್‌ಸ್ಟಾರ್ ಸಿನಿಮಾ ಖ್ಯಾತಿ ಇಮ್ರಾನ್ ಹಶ್ಮಿ, ಬಾಲಿವುಡ್‌ನ ಕಿಸ್ಸರ್ ಬಾಯ್ ಎಂದೇ ಫೇಮಸ್‌, ಹಲವು ಸಿನಿಮಾಗಳಲ್ಲಿ ನಟಿರೊಂದಿಗೆ ಗಾಢವಾಗಿ ಚುಂಬಿಸಿದ ಖ್ಯಾತಿ ಇವರದು. ಆದರೆ ಈ ನಟನೊಂದಿಗಿನ ಕಿಸ್ಸಿಂಗ್ ಸೀನ್ ದೃಶ್ಯಾವಳಿಯನ್ನು ನಟಿ ತನುಶ್ರೀ ದತ್ ನೆನಪು ಮಾಡಿಕೊಂಡಿದ್ದಾರೆ. ಇಮ್ರಾನ್ ಹಶ್ಮಿ ಕಿಸ್ಸಿಂಗ್ ಬಗ್ಗೆ ತನುಶ್ರೀ ದತ್ ಹೇಳಿಕೆ ಈಗ ವೈರಲ್ ಆಗುತ್ತಿದೆ. 

PREV
17
 ಇಮ್ರಾನ್ ಹಶ್ಮಿ ಜತೆಗಿನ ಕಿಸ್ಸಿಂಗ್ ಸೀನ್ ಮೆಲುಕು ಹಾಕಿದ ನಟಿ

ತನುಶ್ರೀ ದತ್ ನಟ ಇಮ್ರಾನ್ ಹಶ್ಮಿ ಜೊತೆ ಅಶಿಕಿ ಬನಯಾ ಅಪ್ನೆ, ಚಾಕೋಲೇಟ್‌ ಡೀಪ್ ಡಾರ್ಕ್ ಸೀಕ್ರೇಟ್ ಹಾಗೂ ಗುಡ್‌ಬಾಯ್ ಬ್ಯಾಡ್ ಬಾಯ್ ಈ ಮೂರು ಸಿನಿಮಾಗಳಲ್ಲಿ ನಟಿಸಿದ್ದರು. ಆದರೂ ಈ ನಟಿ ತನ್ನ ಸಹ ನಟ ಇಮ್ರಾನ್ ಹಶ್ಮಿ ತುಂಬಾ ಆರಾಮದಾಯಕ ಕಿಸ್ಸರ್ ಅಲ್ಲ ಎಂದು ಹೇಳಿಕೊಂಡಿದ್ದಾರೆ. 

27

ಅವರೊಂದಿಗಿನ ಕಿಸ್ಸಿಂಗ್ ಸೀನ್‌ಗಳು ಬಹಳ ವಿಚಿತ್ರವಾಗಿತ್ತು, ಕಂಪರ್ಟ್ ಆಗಿರಲಿಲ್ಲ ಎಂದು ತನುಶ್ರೀ ದತ್ ಹೇಳಿಕೊಂಡಿದ್ದಾರೆ. ಆಶಿಕಿ ಅಪ್ನೆ ಬನಯಾ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ತನುಶ್ರೀ ದತ್, ಫಿಲ್ಮಿಗ್ಯಾನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ಇಮ್ರಾನ್ ಹಶ್ಮಿ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.

37

ನನ್ನ ಪಾಲಿಗೆ ಇಮ್ರಾನ್ ಮೊದಲ ದಿನದಿಂದಲೂ ಓರ್ವ ನಟ, ನಾನು ಆತನೊಂದಿಗೆ ಮೂರು ಸಿನಿಮಾಗಳಲ್ಲಿ ನಟಿಸಿದ್ದೇನೆ. ಚಾಕೋಲೇಟ್ ಸಿನಿಮಾದಲ್ಲಿ ನಮ್ಮಿಬ್ಬರ ಕಿಸ್ಸಿಂಗ್ ಸೀನ್ ಕೂಡ ಇತ್ತು. ಆದರೆ ಅವರು ಸಿನಿಮಾದಿಂದ ಆ ಸೀನ್ ಅನ್ನು ಕತ್ತರಿಸಿದ್ದರು. ಮೊದಲ ಬಾರಿಗೆ ಇಮ್ರಾನ್ ಹಶ್ಮಿ ಜೊತೆ ಕಿಸ್ಸಿಂಗ್ ಸೀನ್‌ ಬಹಳ ಅಸಹ್ಯ ಹಾಗೂ ಒಂತರ ವಿಚಿತ್ರವಾಗಿತ್ತು. ನನಗೆ ಆರಾಮದಾಯಕವಾಗಿರಲಿಲ್ಲ,

47

ಆದರೆ ಎರಡನೇ ಬಾರಿಗೆ ಇಷ್ಟೊಂದು ಕಿರಿಕಿರಿ ಅನಿಸಲಿಲ್ಲ,  ಏಕೆಂದರೆ ವೈಯಕ್ತಿಕವಾಗಿ ನಿಜ ಬದುಕಿನಲ್ಲಿ ನಾವು ಪರಸ್ಪರ ಕೆಮೆಸ್ಟ್ರಿ ಹೊಂದಿರಲಿಲ್ಲ,. ಆದರೆ ಇಮ್ರಾನ್ ಹಶ್ಮಿಗೆ ಕಿಸ್ಸರ್ ಬಾಯ್ ಇಮೇಜ್ ಇದ್ದರೂ ಕೂಡ ಆತನೊಂದಿಗೆ ಕಿಸ್ಸಿಂಗ್ ದೃಶ್ಯ ಆರಾಮದಾಯಕವಾಗಿರಲಿಲ್ಲ, ಹಾಗೆಯೇ ನನಗೂ ಕೂಡ ಕಿಸ್ಸಿಂಗ್‌ನಲ್ಲಿ ಕಂಪರ್ಟ್ ಎನಿಸುತ್ತಿರಲಿಲ್ಲ ಎಂದು ತನುಶ್ರೀ ದತ್ ಹೇಳಿಕೊಂಡಿದ್ದಾರೆ.

57

ಇಮ್ರಾನ್ ಹಶ್ಮಿ ಕೂಡ  ತಮಗೆ ಅಂಟಿದ ಈ ಬಾಲಿವುಡ್‌ನ ಕಿಸ್ಸರ್ ಬಾಯ್ ಕಳಂಕದ ಬಗ್ಗೆ ಈ ಹಿಂದೆಯೂ ಮಾತನಾಡಿದ್ದು, ಈ ಕಳಂಕವನ್ನು ದೂರ ಮಾಡುವ ಆಸೆ ಇದೆ ಎಂದು ಹೇಳಿಕೊಂಡಿದ್ದರು. 

67

ಸಲ್ಮಾನ್ ಖಾನ್‌ ಕತ್ರೀನಾ ಕೈಫ್‌ ನಟನೆ ಟೈಗರ್ 3ಯ ಮುಖ್ಯ ಭೂಮಿಕೆಯಲ್ಲಿರುವ ಇಮ್ರಾನ್ ಹಶ್ಮಿ, ನೀವು ಕಮರ್ಷಿಯಲ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದರೆ ಎಲ್ಲಾ ನಟರಿಗೆ ಇಂತಹ ಯಾವುದಾದರೊಂದು ಶಾಶ್ವತವಾದ ಬಲೆ (ಟ್ಯಾಗ್‌ಲೈನ್) ಸುತ್ತಿಕೊಳ್ಳುತ್ತದೆ. ನೀವು ಕೆಲವೊಂದು ಪಾತ್ರ ಅಥವಾ ನಾಯಕನ ಪಾತ್ರದಿಂದ ಹೆಸರಾಗುತ್ತೀರಿ. ಹಾಗೆಯೇ ನನಗೆ ಈ ಪಟ್ಟ ಸಿಕ್ಕಿದೆ.  ನೀವು ಇದನ್ನು ಹೇಗೆ ಬೇಕಾದರೂ ಕರೆಯಿರಿ  ಆದರೆ ಇದೊಂದು ಅಸಂಬದ್ಧ ಹೆಸರು.

77

ಇದು ನಿಜವಾಗಿಯೂ ನನ್ನ ಪಾಲಿಗೆ ಒಂದು ಜೋಕ್ ಎನಿಸಿದೆ ಆದರೆ ಕೆಲವೊಂದು ಕಾರಣದಿಂದ ಜನರೊಂದಿಗೆ ಅದು ಮಿಳಿತವಾಗಿದೆ. ಇದು ಪತ್ರಕರ್ತರಿಂದ ಸಿನಿಮಾ ನೋಡುವ ಜನರಿಂದ ನನಗೆ ಬಂದಂತಹ ಪಟ್ಟ, ಆದರೆ ನಾನು ಅದರಿಂದ ಲಾಭ ಪಡೆಯಲಿಲ್ಲ ಎಂದಲ್ಲ, ಇದರಿಂದ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆ ಪ್ರದರ್ಶನವನ್ನೂ ಕಂಡಿವೆ ಎಂದು ಹಶ್ಮಿ ತಮಗಂಟಿದ ಈ ಕಿಸ್ಸರ್ ಬಾಯ್ ಪಟ್ಟದ ಬಗ್ಗೆ ಹೇಳಿಕೊಂಡಿದ್ದರು. 

click me!

Recommended Stories