ಅಮಿತಾಬ್ ಬಚ್ಚನ್ ಅವರ ದೀಪಾವಳಿ ಪಾರ್ಟಿಯಲ್ಲಿ ಗಮನ ಸೆಳೆದ ಐಶ್ವರ್ಯಾ ರೈ

Published : Oct 25, 2022, 04:39 PM IST

ಸುಮಾರು 2-3 ವರ್ಷಗಳ ನಂತರ ಅಮಿತಾಬ್ ಬಚ್ಚನ್ (Amitabh Bachchan) ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ, ಅವರು ಉದ್ಯಮದ ಕೆಲವು ವಿಶೇಷ ಸ್ನೇಹಿತರನ್ನು ಆಹ್ವಾನಿಸಿದರು. ಈ ಸಂದರ್ಭದಲ್ಲಿ, ಬಚ್ಚನ್ ಸೊಸೆ ಐಶ್ವರ್ಯ ರೈ (Aishwariya Rai) ಗಾಢ ಕೆಂಪು ಬಣ್ಣದ ಸೂಟ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡರು. ಐಶ್ವರ್ಯಾ ರೈ ಬಿಂದಿ ಧರಿಸಿ ಹಣೆ ಮೇಲೆ ಕೂದಲು ತೆರೆದುಕೊಂಡಿರುವ ಲುಕ್ ವೈರಲ್ ಆಗುತ್ತಿದೆ. ಬಚ್ಚನ್ ಅವರ ದೀಪಾವಳಿ ಪಾರ್ಟಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಾರೆ.

PREV
18
ಅಮಿತಾಬ್ ಬಚ್ಚನ್ ಅವರ ದೀಪಾವಳಿ ಪಾರ್ಟಿಯಲ್ಲಿ ಗಮನ ಸೆಳೆದ ಐಶ್ವರ್ಯಾ ರೈ

ಬಾಲಿವುಡ್ ಬಿಗ್ ಬಿ ಅಭಿಷೇಕ್ ಬಚ್ಚನ್ ಮತ್ತು ಪತ್ನಿ ಐಶ್ವರ್ಯಾ ರೈ ಬಾಲಿವುಡ್ ಸೆಲೆಬ್ರಿಟಿಗಳಿಗೆ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಮಾವನೊಂದಿಗೆ ಐಶ್ವರ್ಯಾ ಅತಿಥಿಯನ್ನು ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಅಭಿಷೇಕ್ ನೀಲಿ ಕುರ್ತಾ ಧರಿಸಿದ್ದರು.  
 

28

ಅಮಿತಾಭ್ ಬಚ್ಚನ್ ತಮ್ಮ ದೀಪಾವಳಿ ಪಾರ್ಟಿಯನ್ನು ತುಂಬಾ ಖಾಸಗಿಯಾಗಿ ಇಟ್ಟುಕೊಂಡಿದ್ದರು. ಇದರಲ್ಲಿ ಅವರು ತಮ್ಮ ವಿಶೇಷ ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಶ್ವೇತಾ ಬಚ್ಚನ್ ಕೂಡ ಕಾಣಿಸಿಕೊಂಡಿದ್ದಾರೆ.


 


 

38

ರೀಮಾ ಜೈನ್ ಮತ್ತು ಕುನಾಲ್ ಕಪೂರ್ ಕೂಡ ಬಚ್ಚನ್ ಅವರ ದೀಪಾವಳಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.  ರೀಮಾ ಅವರು ಬಿಗ್‌ ಬಿ ಅವರಿಗೆ ಸಂಬಂಧದಲ್ಲಿ  ಬೀಗರಾಗಬೇಕು ಮತ್ತು ಕುನಾಲ್ ಅವರ ಅಳಿಯ ಆಗುತ್ತಾರೆ.

48

ದೀಪಾವಳಿ ಪಾರ್ಟಿಗಾಗಿ ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್ ಜೊತೆ ಆಗಮಿಸಿದ್ದರು. ಈ ದಂಪತಿ  ಪುತ್ರ ಸಿಕಂದರ್ ಖೇರ್ ಜೊತೆಗಿದ್ದರು.


 

58

ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಅಜ್ಜ ದೀಪಾವಳಿ ಪಾರ್ಟಿಯಲ್ಲಿ ಪ್ರಕಾಶಮಾನವಾದ ಹಸಿರು ಸೂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ನವ್ಯಾ ತೆರೆದ ಕೂದಲಿನಲ್ಲಿ ಸುಂದರವಾಗಿ ಕಾಣುತ್ತಿದ್ದರು.

 

68

ಕುನಾಲ್ ಕಪೂರ್ ಕೂಡ ಬಚ್ಚನ್ ಅವರ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಹಿರಿಯ ನಟ ಶಶಿ ಕಪೂರ್ ಅವರ ಮಗ. ಸಂಬಂಧದಲ್ಲಿ ಶ್ವೇತಾ ಬಚ್ಚನ್ ಕುನಾಲ್ ಅವರ ಅತ್ತಿಗೆಯಾಗುತ್ತಾರೆ.

78

ದೀಪಾವಳಿಯ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ತಮ್ಮ ಪ್ರತೀಕ್ಷಾ ಬಂಗಲೆಯಲ್ಲಿ ಲಕ್ಷ್ಮಿ ಪೂಜೆ ಮಾಡಿದರು. ಇಡೀ ಕುಟುಂಬ ಒಂದೇ ಕಾರಿನಲ್ಲಿ ಪೂಜೆಗೆ ಬಂದಿತ್ತು.


 

88

ಬಿಗ್ ಬಿ ಅವರ ಬಂಗಲೆ ಪ್ರತೀಕ್ಷಾವನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಅವರ ಬಂಗಲೆಯ ಲೈಟ್‌ಗಳಲ್ಲಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
 

Read more Photos on
click me!

Recommended Stories