ಇಂಟರ್ನೆಟ್ ಗೆದ್ದ ಕರೀನಾ ದೀಪಾವಳಿ ಪೋಸ್ಟ್, ಅಷ್ಟಕ್ಕೂ ಏನಿದೆ ಅದರಲ್ಲಿ ?

Published : Oct 25, 2022, 04:03 PM IST

ಭಾರತೀಯರಿಗೆ ದೀಪಾವಳಿಯ ಪ್ರಮುಖ ಆಚರಣೆ. ಬಾಲಿವುಡ್ ತಾರೆಯರು ದೀಪಗಳ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಆ ಸಮಯದ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. Instagramನಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟಿ ಕರೀನಾ ಕಪೂರ್ ಖಾನ್ (Kareena Kapoor) ದೀಪಾವಳಿ ಆಚರಿಸಿದ ತಮ್ಮ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ. ಕರೀನಾರ ಪೋಟೋಗಳು ಸಖತ್‌ ವೈರಲ್‌ ಆಗಿದ್ದು ನೆಟಿಜನ್ಸ್‌ ಫುಲ್‌ ಫಿದಾ ಆಗಿದ್ದಾರೆ.

PREV
16
 ಇಂಟರ್ನೆಟ್ ಗೆದ್ದ ಕರೀನಾ ದೀಪಾವಳಿ ಪೋಸ್ಟ್, ಅಷ್ಟಕ್ಕೂ ಏನಿದೆ  ಅದರಲ್ಲಿ ?

ಬಾಲಿವುಡ್‌ ನಟಿ ಕರೀನಾ ಕಪೂರ್‌ ಅವರ ಪತಿ ಸೈಫ್ ಅಲಿ ಖಾನ್ ಮತ್ತು ಮಕ್ಕಳಾದ ತೈಮೂರ್ ಮತ್ತು ಜೆಹ್ ಜೊತೆ ತಮ್ಮ ಮನೆಯಲ್ಲಿಯೇ ದೀಪಾವಳಿ ಆಚರಿಸಿದರು.
 

26

ಬೆಬೊ ಅವರು ತಮ್ಮ ಮನೆಯಲ್ಲಿ ದೀಪಾವಳಿ ಆಚರಿಸಿದ ಫೋಟೋಗಳನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಪತಿ ಮತ್ತು ಮಕ್ಕಳು ಒಂದೇ ರೀತಿಯ ಕಪ್ಪು ಕುರ್ತಾ ಮತ್ತು ಬಿಳಿ ಪೈಜಾಮಾ ಸೆಟ್‌ಗಳನ್ನು ಧರಿಸಿದ್ದರೆ, ನಟಿ ಕೆಂಪು ಉಡುಪನ್ನು ಧರಿಸಿದ್ದರು.

36

ತೈಮೂರ್ ಮತ್ತು ಜೆಹ್ ಕಿಟಕಿಯಿಂದ ಹೊರಗೆ ನೋಡುತ್ತಿರುವ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕರೀನಾ ಮತ್ತು ಸೈಫ್ ಅಲಿ ಖಾನ್ ಫೋಟೋಗೆ ಪೋಸ್ ನೀಡಿದರು.


 

46

ಆದರೆ, ಕರೀನಾರ ಪೋಸ್ಟ್‌ನ ಕೊನೆಯ ಫೋಟೋವು ಅಭಿಮಾನಿಗಳು ಮತ್ತು ಇಂಟರ್ನೆಟ್ ಬಳಕೆದಾರರ ಹೃದಯವನ್ನು ಗೆದ್ದಿದೆ.  ಫುಲ್‌ ಫ್ಯಾಮಿಲಿಯ  ಫೋಟೋವನ್ನು ಪಡೆಯಲು ಪ್ರಯತ್ನಿಸುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಜೆಹ್, ನೆಲದ ಮೇಲೆ ಮಲಗಿರುವಾಗ ಅಳುತ್ತಿರುವುದು ಕಂಡು ಬಂದಿದೆ. 

56

ಕರೀನಾ ಕಪೂರ್ ಖಾನ್ ಅವರು ಸೈಫ್ ಅಲಿ ಖಾನ್ ಮತ್ತು ತೈಮೂರ್ ಅವರೊಂದಿಗೆ ಪೋಸ್ ನೀಡುತ್ತಿರುವ ಅಡರೋಬಲ್‌ ಫೋಟೋ ವನ್ನು ಹಂಚಿಕೊಂಡಿದ್ದಾರೆ, ಆದರೆ ಬೇಬಿ ಜೆಹ್ ನೆಲದ ಮೇಲೆ ಮಲಗಿ ಅಳುತ್ತಿರುವುದು ಕಂಡುಬಂದಿದೆ. ಪೋಟೋದ ಕ್ಯಾಪ್ಷನ್‌ನಲ್ಲಿ ಕರೀನಾ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ

66
Diwali celebration

ಪುಟಾಣಿ ಜೆಹ್‌ ಕ್ಯೂಟ್‌ನೆಸ್‌ ಎಲ್ಲರ ಗಮನ ಸೆಳೆಯಿತು. ಕರೀನಾ ಅವರ ಅತ್ತಿಗೆ ಸಬಾ ಅಲಿ ಖಾನ್, ಕರೀನಾ ಅವರ ಕಸಿನ್‌ ಜಹಾನ್ ಕಪೂರ್ ಫೋಟೋಗೆ ಕಾಮೆಂಟ್‌ ಮಾಡಿದ್ದಾರೆ. ಇದರ ಜೊತೆಗೆ ಅಭಿಮಾನಿಗಳು ಸಹ ಜೆಹ್‌ ಮೇಲೆ ಪ್ರೀತಿಯ ಮಳೆ ಸುರಿಸಿದ್ದಾರೆ.

Read more Photos on
click me!

Recommended Stories