ತೆಲುಗಿನಲ್ಲಿ ತಮನ್ನಾ `ಗುರ್ತುಂಡ ಸೀತಕಲ' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾಗೆ ಕನ್ನಡ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡದ ಲವ್ ಮಾಕ್‌ಟೇಲ್ ಸಿನಿಮಾದ ರಿಮೇಕ್ ಇದಾಗಿದ್ದು ತಮನ್ನಾ ಜೊತೆ ದಕ್ಷಿಣದ ನಟ ಸತ್ಯ ದೇವ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಈ ಸಿನಿಮಾ ಜೊತೆಗೆ ಬೋಲಾ ಶಂಕರ್ ಸೇರಿದಂತೆ ಇನ್ನು ಅನೇಕ ಸಿನಿಮಾಗಳಿವೆ.