2014ರಲ್ಲಿ ಮುಜಾಫರ್‌ಪುರದಲ್ಲಿ ಗಲಭೆ ನಡೆದಿತ್ತು. ಇದರಿಂದ ನೂರಾರು ಜನರು ಶಿಬಿರದಲ್ಲಿ ಉಳಿಯಬೇಕಾಯಿತು. ಅದೇ ದಿನ ಅಖಿಲೇಶ್ ಸರ್ಕಾರ್ ಸೈಫಾಯಿ ಮಹೋತ್ಸವವನ್ನೂ ಆಯೋಜಿಸಿದ್ದರು. ಆಲಿಯಾ ಭಟ್, ಸಲ್ಮಾನ್ ಖಾನ್ (Salman Khan), ಮಾಧುರಿ ದೀಕ್ಷಿತ್ (Madhuri Dixit) ಅವರನ್ನು ಆಹ್ವಾನಿಸಿದ್ದರು . ಶಿಬಿರದಲ್ಲಿ ಒಂದು ಕಡೆ ಜನರು ಶೀತ (Cold) ಮತ್ತು ಅನಾರೋಗ್ಯದಿಂದ ನರಳುತ್ತಿದ್ದರೆ, ಮತ್ತೊಂದೆಡೆ ದೊಡ್ಡ ಬಾಲಿವುಡ್ ತಾರೆಯರು ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದರು. ಇದರಿಂದಾಗಿ ಜನರು ತುಂಬಾ ಕೋಪಗೊಂಡರು. ಈ ಕುರಿತು ಮಾಧ್ಯಮದವರು ಆಲಿಯಾಳನ್ನು ಪ್ರಶ್ನಿಸಿದಾಗ ಅವರು ಮಾತನಾಡಲು ನಿರಾಕರಿಸಿದರು. ಇದರಿಂದಾಗಿ ಅವರು ಟೀಕೆಗಳನ್ನು ಎದುರಿಸಬೇಕಾಯಿತು. ವಿಷಯ ಹದಗೆಡುವುದನ್ನು ಕಂಡು ಮಹೇಶ್ ಭಟ್ ಮುಂದೆ ಬಂದು ಎಲ್ಲರ ಕ್ಷಮೆ ಕೇಳಿದರು.