ಜೊತೆಯಾಗಿ ಫುಟ್ಬಾಲ್‌ ಮ್ಯಾಚ್‌ಗೆ ಆಗಮಿಸಿದ ಆಲಿಯಾ ಭಟ್, ರಣಬೀರ್ ಕಪೂರ್ ದಂಪತಿ

First Published | Oct 9, 2023, 5:06 PM IST

ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯವೊಂದರಲ್ಲಿ, ಬಾಲಿವುಡ್‌ನ ಫೇಮಸ್‌ ಜೋಡಿ ಆಲಿಯಾ ಭಟ್ (Alia Bhatt) ಮತ್ತು  ರಣಬೀರ್ ಕಪೂರ್  (Ranbir Kapoor)ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಪವರ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಫುಟ್‌ಬಾಲ್ ಪಂದ್ಯಕ್ಕೆ  ಗ್ಲಾಮರ್ ಅನ್ನು ಸೇರಿಸಿದ್ದಾರೆ. ಈ ಜೋಡಿ ನೀತಾ ಅಂಬಾನಿ ಜೊತೆ ಸ್ಪೋರ್ಟಿ ಉಡುಗೆಯಲ್ಲಿ ಪೋಸ್ ನೀಡಿದ್ದು ಫೋಟೋಗಳು ವೈರಲ್‌ ಆಗಿವೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಯಾವಾಗಲೂ ತಮ್ಮ ವೈಯಕ್ತಿಕ ಜೀವನದ ಸ್ನೀಕ್ ಪೀಕ್‌ಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಫ್ಯಾಶನ್, ಸ್ಟೈಲ್ ಮತ್ತು ಸಂತೋಷಕರವಾದ ಕ್ಷಣಗಳನ್ನು ಅಭಿಮಾನಿಗಳು ಎಂಜಾಯ್‌ ಮಾಡುತ್ತಾರೆ.

ರಣಬೀರ್ ಮತ್ತು ಆಲಿಯಾ ಮುಂಬೈನಲ್ಲಿ ನಡೆದ ಫುಟ್‌ಬಾಲ್ ಪಂದ್ಯವೊಂದರಲ್ಲಿ ಸಂಪೂರ್ಣ ಹೊಸ ಕ್ಯಾಶುವಲ್ ಸ್ಪೋರ್ಟಿ ಲುಕ್‌ನಲ್ಲಿ ಅಡರೋಬಲ್‌ ಜೆರ್ಸಿಯಲ್ಲಿ ಕೂಲ್ ಫ್ಯಾಶನ್ ಸ್ಟೇಟ್‌ಮೆಂಟ್ ಅನ್ನು ಮಾಡಿದ್ದಾರೆ. 

Tap to resize

ಇಂಡಿಯನ್ ಸೂಪರ್ ಲೀಗ್ ಪಂದ್ಯವನ್ನು ಮುಂಬೈ ಸಿಟಿ ಎಫ್‌ಸಿ ಮತ್ತು ಕೇರಳ ಬ್ಲೇಸರ್ ಎಫ್‌ಸಿ ನಡುವೆ ಆಯೋಜಿಸಲಾಗಿತ್ತು ಮತ್ತು ದೇಶದ ಅನೇಕ ಸೆಲೆಬ್ರಿಟಿಗಳು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.
 

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿರಾಮ ತೆಗೆದುಕೊಂಡರು, ಕೇರಳದ ವಿರುದ್ಧ ಕ್ರೀಡಾಂಗಣದಲ್ಲಿ ಆಡುತ್ತಿರುವ ತಮ್ಮ ತಂಡವನ್ನು ಬೆಂಬಲಿಸಿದರು. 

ಆಲಿಯಾ ಮತ್ತು ರಣಬೀರ್‌ ಇಂಡಿಯನ್ ಸೂಪರ್ ಲೀಗ್‌ನೊಂದಿಗೆ ಸಂಬಂಧ ಹೊಂದಿರುವ ನೀತಾ ಅಂಬಾನಿ ಮತ್ತು ಒಲಿಂಪಿಕ್ ಅಧ್ಯಕ್ಷರಂತಹ ಪ್ರಮುಖ ವ್ಯಕ್ತಿಗಳೊಂದಿಗೆ ಪಾಪರಾಜಿಗಳಿಗೆ ಪೋಸ್ ನೀಡಿದರು,

ಆಲಿಯಾ ಭಟ್  ಬೆಲ್‌ ಬಾಟಮ್‌ ನೀಲಿ ಡೆನಿಮ್ ಅನ್ನು ಹೊಂದಿಕೆಯಾಗುವ ನೀಲಿ ಟಿ-ಶರ್ಟ್ ಜೊತೆ ಬಿಳಿ ಸ್ನೀಕರ್ಸ್‌ ಧರಿಸಿದ್ದರೆ,  ಕಪ್ಪು ಕಾರ್ಗೋ ಪ್ಯಾಂಟ್, ಕಪ್ಪು ಟಿ-ಶರ್ಟ್ ಮತ್ತು ಕ್ಯಾಪ್ ಧರಿಸಿ ಸ್ಪೋರ್ಟಿ ಮತ್ತು ಕ್ಯಾಶುಯಲ್ ಲುಕ್‌ ಮೋರೆ ಹೋಗಿದ್ದ ರಣಬೀರ್ ಕಪೂರ್ ಕೂಡ ಬಿಳಿ ಸ್ನೀಕರ್ಸ್‌ನೊಂದಿಗೆ ತಮ್ಮ ಉಡುಪನ್ನು ಪೂರ್ಣಗೊಳಿಸಿದರು

Latest Videos

click me!