ವಿಶ್ವಕಪ್‌ ಗೆದ್ದರೆ ಬೆತ್ತಲಾಗುತ್ತೇನೆಂದು ಹೇಳಿದ್ದ ಪೂನಂ ಪಾಂಡೆ ಎಲ್ಲೂ ಸುದ್ದಿಯಲ್ಲಿಲ್ಲ ಯಾಕೆ?

First Published | Oct 9, 2023, 12:27 PM IST

ಪೂನಮ್ ಪಾಂಡೆ ಬಾಲಿವುಡ್ ನಟಿ ಮತ್ತು ಮಾಡೆಲ್, ಅತ್ಯಂತ ವಿವಾದಿತ ನಟಿ ಎಂದೇ ಈಕೆಯನ್ನು ಕರೆಯುತ್ತಾರೆ. ತನ್ನ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹಾಟ್‌ ತಾರೆ. ಭಾರತ ವಿಶ್ವಕಪ್‌ ಗೆದ್ದರೆ ಬೆತ್ತಲಾಗುತ್ತೇನೆಂದು ಹೇಳಿ ಸುದ್ದಿಯಾಗಿದ್ದಳು. 2023 ರ ವಿಶ್ವಕಪ್‌ ನಡೆಯುತ್ತಿದ್ದು, ಈ ಸಲ ಭಾರತ ಆತಿಥ್ಯ ವಹಿಸಿಕೊಂಡಿದೆ.

ಬಿಹಾರದಲ್ಲಿ ಜನಸಿದ ಈಕೆ ಮುಂಬೈನಲ್ಲಿ ಬೆಳೆದು ನಂತರ ಪಿಯುಸಿವರೆಗೆ ವಿಧ್ಯಾಭ್ಯಾಸ ಮುಗಿಸಿ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಈಗ  ಪಾಂಡೆಗೆ 32 ವರ್ಷ.

2010 ರ ಗ್ಲಾಡ್ರಾಗ್ಸ್ ಸ್ಫರ್ಧೆಯಲ್ಲಿ ಟಾಪ್ 8 ಸ್ಫರ್ಧಿಯಾಗಿ ಫ್ಯಾಷನ್ ಮ್ಯಾಗಜೀನ್ ಕವರ್ ಪೇಜನಲ್ಲಿ ಕಾಣಿಸಿಕೊಂಡರು. 2011 ರಲ್ಲಿ ಸುಮಾರು 29 ಕ್ಯಾಲೆಂಡರಗಳಿಗೆ ಪೋಟೋಶೂಟ್ ಮಾಡಿಸಿ, ಟಾಪ್‌ ರೂಪದರ್ಶಿಯಾಗಿದ್ದರು. 2012 ರ ಕಿಂಗಫಿಷರ್ ಕ್ಯಾಲೆಂಡರ್ ನಲ್ಲಿ ಕೂಡ ಕಾಣಿಸಿಕೊಂಡರು.

Tap to resize

ಸೋಷಿಯಲ್‌ ಮೀಡಿಯಾದಲ್ಲಿ ಸದಾ ತಮ್ಮ ಬೋಲ್ಡ್‌ ಲುಕ್‌ ಮೂಲಕವೇ ಸುದ್ದಿಯಲ್ಲಿರುವ ಪೂನಂ ಪಾಂಡೆ ಕನ್ನಡದಲ್ಲಿ ಹಳ್ಳಿ ಹೈದ ಪ್ಯಾಟೆಗೆ ಬಂದ ಖ್ಯಾತಿಯ ದಿವಂಗತ ನಟ ರಾಜೇಶ್ ರ  ಲವ್ ಇಸ್ ಪಾಯಿಸನ್  ಎಂಬ ಚಿತ್ರದ ಒಂದು ಹಾಡಿನಲ್ಲಿ ನೃತ್ಯ ಮಾಡಿದ್ದಾರೆ.

2011ರಲ್ಲಿ ಮೊತ್ತ ಮೊದಲ ಬಾರಿ ಪೂನಂ ಪಾಂಡೆ ಹೆಸರು ಮಿಂಚಿನ ಸಂಚಲ ಸೃಷ್ಟಿಸಿತ್ತು. ಎಂಎಸ್‌ ಧೋನಿ ಸಾರಥ್ಯದ ಟೀಮ್ ಇಂಡಿಯಾ 2011 ವಿಶ್ವಕಪ್ ಗೆದ್ದರೆ ತಾನು ಸಾರ್ವಜನಿಕವಾಗಿ ಬೆತ್ತಲಾಗುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ಭಾರಿ ಸುದ್ದಿಯಾಗಿ ಪಡ್ಡೆಗಳ ನಿದ್ರೆ ಕೆಡಿಸಿದ್ದರು. ಆ ವರ್ಷ ಟೀಂ ಇಂಡಿಯಾ ವಿಶ್ವಕಪ್ ಗೆದ್ದಿತು. 

ಇದಾದ ಬಳಿಕ ಬಿಸಿಸಿಐ ಅನುಮತಿ ನೀಡದ ಕಾರಣ ತನ್ನ ಮಾತು ನಡೆಸಿಕೊಡಲು ಆಗಲಿಲ್ಲ ಎಂದು ಹೇಳಿಕೆ ಕೊಟ್ಟರು. ಆದರೂ ಆಕೆ  ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದಳು. ಅಲ್ಲಿ ಪಾಂಡೆ ರಾತ್ರಿಯಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಬೆತ್ತಲೆಯಾಗಿ ಕಾಣಿಸಿದ್ದಳು. 

ಇನ್ನು 2012 ರಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 5 ಗೆದ್ದ ನಂತರ  ನಗ್ನ ಪೋಸ್ ನೀಡಿದಳು. ಪೂನಂ ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದಳು. ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಲ್ಲಿ ಪ್ರಾರಂಭಿಸಿದ ನಂತರ Google ನಿಂದ ನಿಷೇಧಿಸಲಾಯ್ತು ಮತ್ತು ಪ್ರಸ್ತುತ ಆಕೆಯ ಅಧಿಕೃತ ಸೈಟ್‌ನಲ್ಲಿ ಮಾತ್ರ ಲಭ್ಯವಿದೆ. 

ಪೂನಂ ಪಾಂಡೆ ತನ್ನ ಗೆಳೆಯನೊಂದಿಗೆ ಇದ್ದ ಲೈಂಗಿಕತೆಯ  ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದಳು, ವ್ಯಾಪಕ ವಿರೋಧದ ನಂತರ ಅದನ್ನು ಅಳಿಸಿ ಹಾಕಿದಳು.

 2013 ರಲ್ಲಿ ನಶಾ ಚಿತ್ರದ ನಾಯಕಿಯಾಗಿ ನಟಿಸಿದರು, ತನ್ನದೇ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿರುವ  ಶಿಕ್ಷಕಿ ಪಾತ್ರ ಇದಾಗಿತ್ತು. 

ಜನವರಿ 18, 2022 ರಂದು, ಅನೇಕ ಬಾಲಿವುಡ್ ತಾರೆಯರನ್ನು ಒಳಗೊಂಡಿರುವ ಪ್ರಮುಖ ಪೋರ್ನ್ ಫಿಲ್ಮ್ ರಾಕೆಟ್‌   ಹಗರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂತು, ಭಾರತದ ಸುಪ್ರೀಂ ಕೋರ್ಟ್ ಆಕೆಗೆ ಬಂಧನದಿಂದ ರಕ್ಷಣೆ ನೀಡಿತು.

ಜನವರಿ 18, 2022 ರಂದು, ಅನೇಕ ಬಾಲಿವುಡ್ ತಾರೆಯರನ್ನು ಒಳಗೊಂಡಿರುವ ಪ್ರಮುಖ ಪೋರ್ನ್ ಫಿಲ್ಮ್ ರಾಕೆಟ್‌   ಹಗರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂತು, ಭಾರತದ ಸುಪ್ರೀಂ ಕೋರ್ಟ್ ಆಕೆಗೆ ಬಂಧನದಿಂದ ರಕ್ಷಣೆ ನೀಡಿತು.

ಪಾಂಡೆ ತನ್ನ ದೀರ್ಘಕಾಲದ ಗೆಳೆಯ ಸ್ಯಾಮ್ ಬಾಂಬೆಯನ್ನು 1 ಸೆಪ್ಟೆಂಬರ್ 2020 ರಂದು ವಿವಾಹವಾದರು. COVID-19 ಸಾಂಕ್ರಾಮಿಕ ರೋಗದಿಂದಾಗಿ ಮದುವೆಯು ಖಾಸಗಿಯಾಗಿ ನಡೆದಿತ್ತು. ಆಪ್ತ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಅವರು ಮುಂಬೈನ ಮನೆಯಲ್ಲಿ ವಿವಾಹವಾದರು.

ಮದುವೆಯಾಗಿ ಹತ್ತೇ ದಿನಕ್ಕೆ ಅಂದರೆ ಸೆಪ್ಟೆಂಬರ್ 11 ರಂದು, ಪಾಂಡೆ ಗಂಡ ತನ್ನ ಮೇಲೆ ಕಿರುಕುಳ, ಬೆದರಿಕೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಬಾಂಬೆ ವಿರುದ್ಧ ದೂರು ದಾಖಲಿಸಿದರು. ಮಂಗಳವಾರ ಸೆಪ್ಟೆಂಬರ್ 23 ರಂದು ಗೋವಾದಲ್ಲಿ ಸ್ಯಾಮ್ ಬಾಂಬೆಯನ್ನು ಬಂಧಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು.

ಹಸಿಬಿಸಿ ವಿಡಿಯೋಗಳನ್ನು, ಮಾದಕ ಫೋಟೋಗಳನ್ನು ಅಪ್​ಲೋಡ್​  ಮಾಡುವ ಪೂನಂ ಪಾಂಡೆ ಇಂಗ್ಲೆಂಡ್​ ಮೂಲದ ಓನ್ಲಿಫ್ಯಾನ್ಸ್​ ಜಾಲತಾಣದಲ್ಲಿ  ಖಾತೆ ಹೊಂದಿದ್ದಾರೆ. ಅಲ್ಲಿ ಅವರು ಹಾಕುವ ವಿಡಿಯೋಗಳನ್ನು ನೋಡಬೇಕು ಎಂದರೆ ಜನರು ಹಣ ನೀಡಬೇಕು. ಆ ಮೂಲಕ ಪಡ್ಡೆ ಹುಡುಗರನ್ನು ಓನ್ಲಿಫ್ಯಾನ್ಸ್​ ಜಾಲತಾಣದತ್ತ ಸೆಳೆದುಕೊಳ್ಳಲು ಆಗಾಗ ಪೂನಂ ಪಾಂಡೆ ತನ್ನ ಮಾದಕ ಫೋಟೋ ಹಾಕುತ್ತಾರೆ. ಅದರಿಂದಲೂ ಆಕೆಗೆ ಆದಾಯವಿದೆ. ಸದ್ಯ ಎಂದಿನಂತೆ ಮಾಡೆಲಿಂಗ್‌, ನಟನೆ ಮಾಡುತ್ತಿದ್ದಾರೆ.
 

Latest Videos

click me!