ಟ್ಯಾಲೆಂಟೆಡ್‌ ಅಕ್ಷಯ್ ಖನ್ನನ ಕೆರಿಯರ್‌ನಲ್ಲಿ ಫ್ಲಾಪ್‌ ಸಿನಿಮಾಗಳೇ ಹೆಚ್ಚು

First Published Nov 19, 2022, 4:24 PM IST

ನಿರ್ದೇಶಕ ಅಭಿಷೇಕ್ ಪಾಠಕ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ದೃಶ್ಯಂ 2'  (Drishyam 2) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಜಯ್ ದೇವಗನ್(Ajay Devgn), ಶ್ರಿಯಾ ಸರನ್ (Shriya Saran), ಟಬು (Tabu), ರಜತ್ ಕಪೂರ್ (Rajat Kapoor) , ಇಶಿತಾ ದತ್ತಾ (Ishita Dutta) ಮತ್ತು ಮೃಣಾಲ್ ಜಾಧವ್ ಅವರೊಂದಿಗೆ ಈ ಬಾರಿ ಚಿತ್ರದ ಪ್ರಮುಖ ಪಾತ್ರದಲ್ಲಿ ಅಕ್ಷಯ್ ಖನ್ನಾ (Akshaye Khanna) ಇದ್ದಾರೆ. ಚಿತ್ರದಲ್ಲಿ ಐಜಿ ತರುಣ್ ಅಹ್ಲಾವತ್ ಪಾತ್ರವನ್ನು ನಿರ್ವಹಿಸುವ ಪಾತ್ರದಲ್ಲಿ ಅಕ್ಷಯ್‌ ಖನ್ನಾ ಕಾಣಿಸಿಕೊಂಡಿದ್ದಾರೆ. ವಿಮರ್ಶೆಗಳ ಪ್ರಕಾರ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಅಂದಹಾಗೆ, 25 ವರ್ಷಗಳ ಚಿತ್ರರಂಗದಲ್ಲಿ ಅಕ್ಷಯ್ ಖನ್ನಾ ಅವರಿಗೆ ಸ್ವಂತವಾಗಿ ಒಂದೇ ಒಂದು ಹಿಟ್ ಚಿತ್ರ ನೀಡಲು ಸಾಧ್ಯವಾಗಲಿಲ್ಲ. ಅವರ ಒಂದು ಚಿತ್ರವು ಬ್ಲಾಕ್‌ಬಸ್ಟರ್ ಆಗಿದೆ ಮತ್ತು 6 ಚಿತ್ರಗಳು ಹಿಟ್ ಆಗಿವೆ, ಆದರೆ ಅವು ಬಹು ತಾರಾಗಣವಾಗಿದ್ದವು ಅಥವಾ ಅವುಗಳ ಕ್ರೆಡಿಟ್ ಚಿತ್ರದ ನಾಯಕ ನಟನಿಗೆ ಸಲ್ಲುತ್ತದೆ. ಉಳಿದವು ಕೆಲವು ಸರಾಸರಿ, ಕೆಲವು ಫ್ಲಾಪ್  ಆಗಿವೆ  ಅದರಲ್ಲಿ 13 ಡಿಸಾಸ್ಟರ್ ಒಳಗೊಂಡಿವೆ.  

'ಬಾರ್ಡರ್' ಅಕ್ಷಯ್ ಖನ್ನಾ ಅವರ ಏಕೈಕ ಬ್ಲಾಕ್ ಬಸ್ಟರ್ ಚಿತ್ರವಾಗಿದ್ದು, ಜೆ.ಪಿ. ದತ್ತಾ ಅವರ ಈ ಮೂವಿ ಬಹುತಾರಾ ಚಿತ್ರವಾಗಿತ್ತು.1997 ರ ಈ ಚಿತ್ರದ ಯಶಸ್ಸಿನ ಕ್ರೆಡಿಟ್ ಸನ್ನಿ ಡಿಯೋಲ್ ಅವರಿಗೆ ಸಲ್ಲುತ್ತದೆ, ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಅವರ ನಟನೆಯು ಪ್ರೇಕ್ಷಕರ ಹೃದಯವನ್ನು ಗೆದ್ದಿದೆ.

ಅಕ್ಷಯ್ ಖನ್ನಾ ಅವರ 6 ಚಿತ್ರಗಳು ಹಿಟ್ ಆಗಿದ್ದವು. ಅವುಗಳಲ್ಲಿ 1999 ರ ಚಲನಚಿತ್ರ ತಾಲ್ ಒಂದು. ಸುಭಾಷ್ ಘಾಯ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ಅನಿಲ್ ಕಪೂರ್-ಐಶ್ವರ್ಯ ರೈ ನಟಿಸಿದ್ದಾರೆ. ಹಂಗಾಮಾ (2003) ಮತ್ತು ಹಲ್ಚಲ್ (2004) ಪ್ರಿಯದರ್ಶನ್ ನಿರ್ದೇಶಿಸಿದ ಮಲ್ಟಿಸ್ಟಾರರ್ ಹಾಸ್ಯ ಚಲನಚಿತ್ರಗಳು.

ಇದರ ಹೊರತಾಗಿ, ಅಕ್ಷಯ್‌ ಖನ್ನಾ ಅವರ ಅಬ್ಬಾಸ್ ಮಸ್ತಾನ್ ನಿರ್ದೇಶನದ '36 ಚೈನಾ ಟೌನ್' (2006) ನ ನಾಯಕ ನಟ ಶಾಹಿದ್ ಕಪೂರ್. ಅಬ್ಬಾಸ್ ಮಸ್ತಾನ್ ನಿರ್ದೇಶಿಸಿದ 'ರೇಸ್' (2008) ಕ್ರೆಡಿಟ್ ಅದರ ನಾಯಕ ಸೈಫ್ ಅಲಿ ಖಾನ್‌ಗೆ ಸಲ್ಲುತ್ತದೆ. ಫರಾ ಖಾನ್ ನಿರ್ದೇಶನದ ತೀಸ್ ಮಾರ್ ಖಾನ್ (2010) ಚಿತ್ರದ ನಾಯಕ ನಟ ಅಕ್ಷಯ್ ಕುಮಾರ್.

ಅಕ್ಷಯ್ ಖನ್ನಾ ಅವರ 4 ಚಿತ್ರಗಳು ಸರಾಸರಿ ಪ್ರದರ್ಶನ ನೀಡಿವೆ. ಇವುಗಳಲ್ಲಿ 'ಭಾಯ್-ಭಾಯ್' (1997), 'ದಿಲ್ ಚಾಹ್ತಾ ಹೈ' (2001), 'ಹುಮ್ರಾಜ್' (2002), 'ಡಿಶೂಮ್' (2016) ಸೇರಿವೆ. 4 ಚಿತ್ರಗಳು ಫ್ಲಾಪ್‌ನಿಂದ ತಪ್ಪಿಸಿಕೊಂಡಿವೆಆದರೆ ಅವುಗಳ ಪ್ರದರ್ಶನವು ಸರಾಸರಿಗಿಂತ ಕಡಿಮೆ ಇತ್ತು. 'ಆ ಅಬ್ ಲೌತ್ ಚಲೇನ್' (1999), 'ದೀವಾಂಗಿ' (2002), 'ಮೇರೆ ಬಾಪ್ ಪೆಹ್ಲೆ ಆಪ್' (2008) ಮತ್ತು 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' (2019).
 

ಇನ್ನೂ ಅಕ್ಷಯ್ ಖನ್ನಾ ಅಭಿನಯದ  ಸೋತಿರುವ ಚಿತ್ರಗಳೆಂದರೆ 'ಹಿಮಾಲಯ ಪುತ್ರ' (1997), 'ಮೊಹಬ್ಬತ್' (1997), 'ಲಾವರಿಸ್' (1999), 'LOC ಕಾರ್ಗಿಲ್' (2003), 'ಬಿಫೋರ್ ಮ್ಯಾರೇಜ್' (2006), 'ಆಜಾ ನಚ್ಲೆ' (2007), ' ನೋ ಪ್ರಾಬ್ಲಂ (2010), 'ಮಾಮ್' (2017), 'ಇತ್ತೆಫಾಕ್' (2017), 'ಸೆಕ್ಷನ್ 375' (2019).

ಅಕ್ಷಯ್ ಖನ್ನಾ ಅವರು ತಮ್ಮ ವೃತ್ತಿ ಜೀವನದಲ್ಲಿ ಡಿಸಾಸ್ಟರ್ ಸಿನಿಮಾಗಳ ಸಂಖ್ಯೆ ಹೆಚ್ಚಿದೆ.  ಅವರ ಸುಮಾರು 13 ಸಿನಿಮಾಗಳಲ್ಲಿ ಹತ್ತು ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಅವುಗಳ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೀಗೆವೆ  'ಡೋಲಿ ಸಾಜಾ ಕೆ ರಖನಾ' ರೂ 2.35 ಕೋಟಿ, 'ಕುದ್ರತ್' (1998) ರೂ 1.29 ಕೋಟಿ, 'ದಹಕ್' (1999) ರೂ 72.50 ಲಕ್ಷ, 'ಬಾರ್ಡರ್ ಹಿಂದೂಸ್ತಾನ್ ಕಾ' (2003) ರೂ 59 ಲಕ್ಷ, 'ದೀವಾರ್: ಲೆಟ್ಸ್ ಬ್ರಿಂಗ್ 'ಹೀರೋಸ್ ಹೋಮ್' (2004) ರೂ 13.24 ಕೋಟಿ, 'ಆಪ್ ಕಿ ಖಾತಿರ್' (2006) ರೂ 6.38 ಕೋಟಿ, 'ಸಲಾಮ್-ಎ-ಇಷ್ಕ್' (2007) ರೂ 22.68 ಕೋಟಿ, 'ನಕಾಬ್' (2007) ರೂ 12.69 ಕೋಟಿ, 'ಗಾಂಧಿ ಮೈ ಫಾದರ್' (2007) ರೂ 3.41 ಕೋಟಿ, 'ಶಾರ್ಟ್ ಕಟ್: ದಿ ಕಾನ್ ಈಸ್ ಆನ್' (2009) ರೂ 7.68 ಕೋಟಿ, 'ಆಕ್ರೋಷ್' (2010) ರೂ 13.07 ಕೋಟಿ, 'ಗಲ್ಲಿ ಗಲ್ಲಿ ಚೋರ್ ಹೈ' (2012) ರೂ 3.71 ಕೋಟಿ ಮತ್ತು ' ಸಬ್ ಕುಶಾಲ್ 'ಮಂಗಲ್' (2020) 59 ಲಕ್ಷ ರೂ.

click me!