ಮುಂಬೈನಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥ ಸಮಾರಂಭದಲ್ಲಿ ಆಮೀರ್ ಕಾನ್ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಹಾಜರಿದ್ದರು. ಇರಾ ಖಾನ್ ಕೆಂಪು ಬಣ್ಣದ ಗೌನ್ ನಲ್ಲಿ ಕಂಗೊಳಿಸಿದ್ದರು. ಇರಾ ನಿಶ್ಚಿತಾರ್ಥದ ಸಮಾರಂಭದಲ್ಲಿ ಇರಾ ತಾಯಿ ರೀನಾ ದತ್ತಾ, ಆಮೀರ್ ಖಾನ್ ಎರಡನೇ ಮಾಜಿ ಪತ್ನಿ ಕಿರಣ್ ರಾವ್, ಆಮೀರ್ ಖಾನ್ ಸೋದರಳಿಯ ಇಮ್ರಾನ್ ಖಾನ್ ಹಾಗೂ ಆಮೀರ್ ಖಾನ್ ತಾಯಿ ಜೀನತ್ ಹುಸೇನ್ ಸೇರಿದಂತೆ ಇಡೀ ಕುಟುಂಬ ಹಾಜರಿತ್ತು.