ಇತ್ತೀಚಿಗಷ್ಟೆ ಜೈಲರ್ ಸಿನಿಮಾತಂಡ ಶಿವರಾಜ್ ಕುಮಾರ್ ಲುಕ್ ರಿವೀಲ್ ಮಾಡಿತ್ತು. ಈ ಮೂಲಕ ರಜನಿಕಾಂತ್ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ ಎನ್ನುವುದನ್ನು ಸಿನಿಮಾತಂಡ ಅಧಿಕೃತಗೊಳಿಸಿದೆ. ಶಿವಣ್ಣ ಗಂಭೀರವಾಗಿ ಕುಳಿತಿರುವ ಲುಕ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಯೋಗಿ ಬಾಬು, ರಮ್ಯಾ ಕೃಷ್ಣ, ವಿನಾಯಕನ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.