ಸೂಪರ್‌ಸ್ಟಾರ್ಸ್ ಸಿನಿಮಾ ಸೋಲಿಸಿದ ಕಡಿಮೆ ಬಜೆಟ್‌ನ ಬಾಲಿವುಡ್‌ ಚಿತ್ರಗಳಿವು

First Published | Jun 11, 2022, 6:17 PM IST

ಶುಕ್ರವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ನುಶ್ರತ್ ಭರುಚಾ (Nushrat Bharucha) ಅವರ ಚಿತ್ರ ಜನ್ಹಿತ್ ಮೇ ಜಾರಿ (Janhit Mein Jaari) ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಚಿತ್ರ ಉತ್ತಮ ಪ್ರದರ್ಶನ ಕಾಣಲಿದೆ ಎಂಬುದು ವಿಮರ್ಶಕರ ನಂಬಿಕೆ. ಚಿತ್ರದಲ್ಲಿ ನುಸ್ರತ್ ಕಾಂಡೋಮ್ ಮಾರಾಟ ಮಾಡುವ ಸೇಲ್ಸ್ ಗರ್ಲ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ ಮತ್ತು ಅವರ ಪಾತ್ರವು ಸಾಕಷ್ಟು ಪ್ರಶಂಸೆಗೆ ಒಳಗಾಗುತ್ತಿದೆ. ನಿರ್ದೇಶಕ ಜೈ ಬಸಂತು ಸಿಂಗ್ ಅವರ ಈ ಚಿತ್ರದ ಬಜೆಟ್ ಕೇವಲ 25 ಕೋಟಿ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಅಕ್ಷಯ್ ಕುಮಾರ್(Akshay Kumar) ಅವರ ಬಿಗ್ ಬಜೆಟ್ ಚಿತ್ರ ಸಾಮ್ರಾಟ್ ಪೃಥ್ವಿರಾಜ್ ಬಾಕ್ಸ್ ಆಫೀಸ್‌ನಲ್ಲಿ ತೋಪು ಹಿಡಿದಿದೆ. ಸೂಪರ್‌ಸ್ಟಾರ್‌ಗಳ ಭಾರೀ ಸಿನಿಮಾಗಳನ್ನು ಸೋಲಿಸಿದ ಕಡಿಮೆ ಬಜೆಟ್‌ನ ಬಾಲಿವುಡ್‌ ಚಿತ್ರಗಳ ವಿವರ ಇಲ್ಲಿದೆ.

ಇದೇ ರೀತಿ ಇದಕ್ಕೂ ಮೊದಲು ಸಹ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್, ಅಜಯ್ ದೇವಗನ್ ಮುಂತಾದವರ ದೊಡ್ಡ ಬಜೆಟ್ ಚಿತ್ರಗಳನ್ನು ಪ್ರೇಕ್ಷಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅನೇಕ ಕಡಿಮೆ ಬಜೆಟ್ ಚಲನಚಿತ್ರಗಳು ಅದ್ಭುತ ದಾಖಲೆಗಳನ್ನು ನಿರ್ಮಿಸಿವೆ. ದಿಗ್ಗಜರ ದೊಡ್ಡ ಬಜೆಟ್ ಚಿತ್ರಗಳನ್ನು ಹಿಂದಿಕ್ಕಿರುವ ಬಾಲಿವುಡ್‌ನ ಕಡಿಮೆ ಬಜೆಟ್ ಚಿತ್ರಗಳು ಇವು 

2019 ರಲ್ಲಿ, ಆಯುಷ್ಮಾನ್ ಖುರಾನಾ ಮತ್ತು ನುಶ್ರತ್ ಭರುಚಾ ಅವರ ಚಿತ್ರ ಡ್ರೀಮ್ ಗರ್ಲ್ ಬಾಕ್ಸ್ ಆಫೀಸ್‌ನಲ್ಲಿ  ಹಿಟ್‌ ಎಂದು ಸಾಬೀತಾಗಿದೆ. 36 ಕೋಟಿ ಬಜೆಟ್‌ನಲ್ಲಿ ಮೂಡಿಬಂದಿರುವ ಈ ಚಿತ್ರ 139 ಕೋಟಿ ಗಳಿಕೆ ಮಾಡಿತ್ತು.

Tap to resize

ಆಯುಷ್ಮಾನ್ ಖುರಾನಾ ಮತ್ತು ಯಾಮಿ ಗೌತಮ್ ಅವರ 2012 ರ ಚಲನಚಿತ್ರ ವಿಕ್ಕಿ ಡೋನರ್ ಥಿಯೇಟರ್‌ಗಳಲ್ಲಿ ಸದ್ದು ಮಾಡಿ, ಇನ್ನೊಂದು ಸಣ್ಣ ಬಜೆಟ್‌ನ ಸಿನಿಮಾ. ಕೇವಲ 10 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 41 ಕೋಟಿ ಗಳಿಸಿದೆ.

2017ರಲ್ಲಿ ಬಂದ ಬರೇಲಿ ಕಿ ಬರ್ಫಿ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಚಿತ್ರದಲ್ಲಿ ರಾಜ್‌ಕುಮಾರ್ ರಾವ್, ಕೃತಿ ಸನನ್ ಜೊತೆಗೆ ಆಯುಷ್ಮಾನ್ ಖುರಾನಾ ಮುಖ್ಯ ಭೂಮಿಕೆಯಲ್ಲಿದ್ದರು. 20 ಕೋಟಿ ಬಜೆಟ್‌ನಲ್ಲಿ ಚಿತ್ರ 50 ಕೋಟಿ ಗಳಿಸಿದೆ.

ಭೂಮಿ ಪೆಡ್ನೇಕರ್ ಮತ್ತು ಆಯುಷ್ಮಾನ್ ಖುರಾನಾ ಅವರ ಚಿತ್ರ ಶುಭ ಮಂಗಲ್ ಜ್ಯಾದಾ ಸಾವಧಾನ್ ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿತು. 2017 ರಲ್ಲಿ ಬಂದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 41 ಕೋಟಿ ಗಳಿಸಿತು. ಆದರೆ ಚಿತ್ರದ ಬಜೆಟ್ 25 ಕೋಟಿ ಆಗಿತ್ತು.

ಇರ್ಫಾನ್ ಖಾನ್‌ ಅವರ ಹಿಂದಿ ಮೀಡಿಯಂ ಚಿತ್ರವೂ ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿತು. 2017 ರ ಚಿತ್ರದಲ್ಲಿ, ಇರ್ಫಾನ್ ಜೊತೆಗೆ ಪಾಕಿಸ್ತಾನಿ ನಾಯಕಿ ಸಬಾ ಕಮರ್ ಇದ್ದರು. 23 ಕೋಟಿ ಬಜೆಟ್‌ನ ಈ ಚಿತ್ರ 63 ಕೋಟಿ ಗಳಿಸಿದೆ.

ತಬು, ರಾಧಿಕಾ ಆಪ್ಟೆ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ಅಂಧಾಧುನ್ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿತ್ತು. 32 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 73 ಕೋಟಿ ಗಳಿಸಿದೆ.

ಕಾರ್ತಿಕ್ ಆರ್ಯನ್, ನುಶ್ರತ್ ಭರುಚಾ ಮತ್ತು ಸನ್ನಿ ಸಿಂಗ್ ನಟಿಸಿದ ಸೋನಿ ಕೆ ಟಿಟು ಕಿ ಸ್ವೀಟಿ ಕೂಡ ಸಾಕಷ್ಟು ಎಂಟರ್ಟೈನ್‌ಮೆಂಟ್‌ ಚಿತ್ರವಾಗಿತ್ತು. 40 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ 108 ಕೋಟಿ ಗಳಿಸಿದೆ.

ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಅಭಿನಯದ ರಾಝಿ ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಸಖತ್‌ ರೆಸ್ಪಾನ್ಸ್ ಸಿಕ್ಕಿದೆ  2018ರಲ್ಲಿ ಬಂದ ಈ ಚಿತ್ರ 40 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಆದರೆ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 123 ಕೋಟಿ ಗಳಿಸಿತು.

ಆಯುಷ್ಮಾನ್ ಖುರಾನಾ ಮತ್ತು ಸನ್ಯಾ ಮಲ್ಹೋತ್ರಾ ಅವರ ಬದಾಯಿ ಹೋ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ದಾಖಲೆಯನ್ನು ಮಾಡಿದೆ. 2018ರಲ್ಲಿ ಬಂದ ಈ ಚಿತ್ರದ ವಿಷಯ ಆವರಿಸಿಕೊಂಡಿತ್ತು. ಕೇವಲ 30 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 136 ಕೋಟಿ ಗಳಿಸಿದೆ.

Latest Videos

click me!