ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಮಗಳ ಮದುವೆ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಇಂದು (ಜೂನ್ 11) ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರು ಹಜರಿದ್ದು ಸಂಗೀತ ಮಾಂತ್ರಿಕನ ಮಗಳಿಗೆ ಶುಭಹಾರೈಸಿದ್ದಾರೆ.
ಇಂದು (ಜೂನ್ 11) ಚೆನ್ನೈನಲ್ಲಿ ನಡೆದ ಅದ್ದೂರಿ ಆರತಕ್ಷತೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಎ ಆರ್ ರೆಹಮಾನ್ ಪುತ್ರಿ ಖತಿಜಾ ರೆಹಮಾನ್ ಮೇ ತಿಂಗಳ ಪ್ರಾರಂಭದಲ್ಲಿ ವೈವಾಹಿಕಜೀವನಕ್ಕೆ ಕಾಲಿಟ್ಟಿದ್ದರು.
ಖತೀಜಾ, ರಿಯಾಸ್ದೀನ್ ಶೇಖ್ ಮೊಹಮ್ಮೊದ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಲ್ಲಿ ಇಬ್ಬರ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೀಗ ಮದುವೆಯಾಗಿ ತಿಂಗಳ ಬಳಿಕ ಅದ್ದೂರಿ ಆರತಕ್ಷತೆ ಸಮಾರಂಭ ಹಮ್ಮಿಕೊಂಡಿದ್ದು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.
ಖತಿಜಾ ರೆಹಮಾನ್ ಆರತಕ್ಷತೆ ಸಮಾರಂಭದಲ್ಲಿ ಸಂಗೀತ ಗಣ್ಯರು, ಕಲಾವಿದರು, ತಮಿಳುನಾಡು ಮುಖ್ಯಮಂತ್ರಿ ಸೇರಿದಂತೆ ಅನೇಕರು ಹಾಜರಿದ್ದರು. ಖ್ಯಾತ ನಿರ್ದೇಶಕ ಮಣಿತ್ನಂ ಮತ್ತುು ಸುಹಾನಿ ದಂಪತಿ ಖತಿಜಾ ಮದುವೆಯಲ್ಲಿ ಕಾಣಿಸಿಕೊಂಡರು.
ಕಾಶ್ಮೀರ್ ಫೈನ್ಸ್ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಕೂಡ ರೆಹಮಾನ್ ಮಗಳ ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನು ಸೋನು ನಿಗಮ್ ಸೇರಿದಂತೆ ಅನೇಕ ಸಂಗೀತ ಗಣ್ಯರು ಹಾಜರಿದ್ದರು. ಬಾಲಿವುಡ್‌ನಿಂದನೂ ಅನೇಕರು ಗಣ್ಯರು ಖತಿಜಾ ಆರತಕ್ಷತೆ ಸಮಾರಂಭಕ್ಕೆ ಹಾಜರಾಗಿ ನವ ಜೋಡಿಗೆ ಶುಭಹಾರೈಸಿದರು.
ಖತಿಜಾ ರೆಹಮಾನ್ ಪತಿ ರಿಯಾಸ್ದೀನ್ ಶೇಖ್ ಮೊಹಮ್ಮದ್ ಕೂಡ ಸಂಗೀತ ಹಿನ್ನಲೆ ಇರುವವರು. ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ರೆಹಮಾನ್ ಅವರ ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ರಿಯಾಸ್ದೀನ್ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿ