Akshay Kumar In Samanthas House: ಮಧ್ಯರಾತ್ರಿ ಸಮಂತಾ ಮನೆಗೆ ಬಂದ ಅಕ್ಷಯ್ ಕುಮಾರ್ !

First Published | Jan 13, 2022, 4:45 PM IST

ದಕ್ಷಿಣದ ನಟಿ ಸಮಂತಾ ರುತ್ ಪ್ರಭು(Samantha Ruth Prabhu) ವಿಚ್ಛೇದನದಿಂದಾಗಿ ಸಾಕಷ್ಟು ಚರ್ಷೆಯಲ್ಲಿದ್ದಾರೆ.  ಫ್ಯಾಮಿಲಿ ಮ್ಯಾನ್ ಎಂಬ ವೆಬ್ ಸರಣಿಯ ಮೂಲಕ ಸಮಂತಾ ಹಿಂದಿಯಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಮಂತಾ ಈಗ  ಬಾಲಿವುಡ್‌ನಲ್ಲೂ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ, ಅಕ್ಷಯ್ ಕುಮಾರ್ (Akshay Kumar) ಜೊತೆ ಸಮಂತಾ ಜಾಹಿರಾತನಲ್ಲಿ ಕಾಣಿಸಿಕೊಂಡಿದ್ದಾರೆ.
ಇದರಲ್ಲಿ ಅಕ್ಷಯ್ ಕುಮಾರ್ ಮಧ್ಯರಾತ್ರಿಯಲ್ಲಿ ಟಾರ್ಚ್‌ ಹಿಡಿದು  ಸಮಂತಾ ಮನೆಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು.

ವಾಸ್ತವವಾಗಿ ಈ ಜಾಹೀರಾತಿನಲ್ಲಿ ಅಕ್ಷಯ್ ಕುಮಾರ್ ರಾತ್ರಿಯ ಕತ್ತಲೆಯಲ್ಲಿ ಸಮಂತಾ ಮನೆಗೆ ಪ್ರವೇಶಿಸುತ್ತಾರೆ. ಅಷ್ಟರಲ್ಲಿ ಕ್ರಿಸ್ಪ್ಸ್ ಪ್ಯಾಕೆಟ್ ನೋಡುತ್ತಾರೆ. ಅಕ್ಷಯ್ ಆ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಓಡಿಹೋಗಲು ಪ್ರಾರಂಭಿಸಿದಾಗ ಸಮಂತಾ ಅಲ್ಲಿಗೆ ತಲುಪುತ್ತಾರೆ.  

ಸಮಂತಾ ಅಕ್ಷಯ್ ಕುಮಾರ್‌ನಿಂದ ಪ್ಯಾಕೆಟ್ ಅನ್ನು ಕಸಿದುಕೊಂಡು ಇಷ್ಟೂ ರುಚಿಯಾದ ಕುರ್ಕುರೆ ಒಬ್ಬನೇ ತಿನ್ನುತ್ತೀಯಾ ಎಂದು ಕೇಳುತ್ತಾರೆ. ಸಮಂತಾ ಪ್ಯಾಕೆಟ್ ಅನ್ನು ತೆರೆದು ಅಕ್ಷಯ್‌ಗೆ ನೀನೂ ತಿನ್ನು ಎಂದು ಹೇಳುತ್ತಾರೆ. 

Tap to resize

ಇದರಲ್ಲಿ ಅಕ್ಷಯ್ ಕುಮಾರ್ ಮಧ್ಯರಾತ್ರಿಯಲ್ಲಿ ಟಾರ್ಚ್‌ ಹಿಡಿದು  ಸಮಂತಾ ಮನೆಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಇದು ಇಂಟ್ರೆಸ್ಟಿಂಗ್ ಆಗಿ ಮೂಡಿಬಂದಿದೆ.

ಪ್ಯಾಕೆಟ್ ಖಾಲಿ ಮಾಡಿ  ಅಕ್ಷಯ್ ಹೊರಡಲು ಪ್ರಾರಂಭಿಸಿದಾಗ ಅರೇ ನಿಲ್ಲು , ಗಾಡಿ ಕರೆದಿದ್ದೇನೆ ಎಂದು ಸಮಂತಾ ಹೇಳುತ್ತಾರೆ. ಇದನ್ನು ಕೇಳಿದ ಅಕ್ಷಯ್ ಶಾಕ್ ಆಗುತ್ತಾರೆ. ಇದಾದ ನಂತರ ಹೊರಗೆ ಪೊಲೀಸ್ ಕಾರಿನ ಸದ್ದು ಕೇಳಿಸುತ್ತದೆ.

ಈ ಜಾಹೀರಾತನ್ನು ನೋಡಿದ ಸಮಂತಾ ಮತ್ತು ಅಕ್ಷಯ್ ಕುಮಾರ್ ಅಭಿಮಾನಿಗಳು ಟ್ವಿಟರ್‌ನಲ್ಲಿ ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇವರಿಬ್ಬರೂ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವಂತೆ ಹಲವು ಅಭಿಮಾನಿಗಳು ವಿನಂತಿಸುತ್ತಿದ್ದಾರೆ. 

ಸಮಂತಾ ರುತ್ ಪ್ರಭು ಅವರು ಅಕ್ಟೋಬರ್ 2021 ರಲ್ಲಿ ತಮ್ಮ ವಿಚ್ಛೇದನದ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡುವ ಮೂಲಕ ದೃಢಪಡಿಸಿದ್ದಾರೆ. ವಿಚ್ಛೇದನದ ನಂತರ ನಾಗ ಚೈತನ್ಯ ಸಮಂತಾಗೆ  ಜೀವನಾಂಶವಾಗಿ 200 ಕೋಟಿ ರೂ.ಗಳನ್ನು ಆಫರ್ ಮಾಡಿದರು, ಆದರೆ ಅವರು ಅದನ್ನು ತಿರಸ್ಕರಿಸಿದರು. 

ಸಮಂತಾ ಮತ್ತು ನಾಗ ಚೈತನ್ಯ ಅಕ್ಟೋಬರ್ 6, 2017 ರಂದು ಗೋವಾದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಮದುವೆಯ ನಂತರ ಸಮಂತಾ ತನ್ನ ಸರ್‌ನೇಮ್‌ ಅಕ್ಕಿನೇನಿ ಎಂದು ಬದಲಾಯಿಸಿಕೊಂಡರು.

ಆದಾಗ್ಯೂ, ಪ್ರತ್ಯೇಕತೆಯ ವರದಿಗಳ ಮಧ್ಯೆ, ಮತ್ತೊಮ್ಮೆ ಹೆಸರನ್ನು ಸಮಂತಾ ರುತ್ ಪ್ರಭು ಎಂದು ಬದಲಾಯಿಸಿದರು. ತಮ್ಮ ವಿವಾಹ ವಾರ್ಷಿಕೋತ್ಸವದ ನಾಲ್ಕು ದಿನ  ಮೊದಲು ದಂಪತಿಗಳು ತಾವು ಬೇರೆಯಾಗಿರುವುದಾಗಿ ಘೋಷಿಸಿದರು.

Latest Videos

click me!