ಅಣ್ಣಯ್ಯ ಚಿತ್ರದ ನಟಿ Madhoo Shah ಈಗ ಹೇಗಾಗಿದ್ದಾರೆ ನೋಡಿ

Published : Mar 26, 2022, 05:04 PM IST

ಕ್ರೇಜಿ ಸ್ಟಾರ್‌ ರವಿಚಂದ್ರರಿಗೆ ಅಣ್ಣಯ್ಯ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ ಮಧು ನೆನಪಿದಿಯಾ? ಮಧು ಶಾ (Madhoo Shah) ಅವರಿಗೆ 52 ವರ್ಷ. ಮಾರ್ಚ್ 26, 1969 ರಂದು ಚೆನ್ನೈನಲ್ಲಿ ಜನಿಸಿದ ಮಧು, 1991 ರ ತಮಿಳು ಚಿತ್ರ 'ಅಳಗನ್' ಮೂಲಕ  ಪಾದಾರ್ಪಣೆ ಮಾಡಿದರು.   ಆಕೆಯ ಮೊದಲ ಬಾಲಿವುಡ್ ಚಿತ್ರ ಫೂಲ್ ಔರ್ ಕಾಂಟೆ. ಮಧು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರೂ, 1999 ರ ನಂತರ ಅವರು ಚಲನಚಿತ್ರಗಳಲ್ಲಿ ಸಕ್ರಿಯರಾಗಿರಲಿಲ್ಲ. ವಾಸ್ತವವಾಗಿ,  ಮಧು 1999 ರಲ್ಲಿ ವಿವಾಹವಾದರು ಮತ್ತು ನಂತರ ಅವರು ಚಲನಚಿತ್ರ ಪ್ರಪಂಚದಿಂದ ದೂರ ಹೋದರು. ಮಧು ಈಗ ಇಬ್ಬರು ಹೆಣ್ಣು ಮಕ್ಕಳ ತಾಯಿ.  

PREV
18
ಅಣ್ಣಯ್ಯ ಚಿತ್ರದ ನಟಿ  Madhoo Shah ಈಗ ಹೇಗಾಗಿದ್ದಾರೆ ನೋಡಿ

ಸಿನಿಮಾಗಳಲ್ಲಿ ಹೆಚ್ಚಿನ ಯಶಸ್ಸು ಸಿಗದೇ ಇದ್ದಾಗ ಮಧು 1999ರ ಫೆಬ್ರವರಿ 19ರಂದು ಆನಂದ್ ಶಾ ಅವರನ್ನು ಮದುವೆಯಾಗಿ ನೆಲೆಸಿದರು. ಅವರಿಗೆ ಅಮೇಯಾ ಮತ್ತು ಕಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

28

ಮಕ್ಕಳು ಬೆಳೆದ ನಂತರ, ಅವರು ಮತ್ತೊಮ್ಮೆ 2017 ರಲ್ಲಿ ಟಿವಿ ಧಾರಾವಾಹಿ 'ಆರಂಭ್' ಮೂಲಕ ಪುನರಾಗಮನ ಮಾಡಲು ಪ್ರಯತ್ನಿಸಿದರು, ಆದರೆ ಈ ಧಾರಾವಾಹಿ ಕೂಡ ಶೀಘ್ರದಲ್ಲೇ ನಿಂತು ಹೋಯಿತು.

38

ಅಂದಹಾಗೆ, ಮಣಿರತ್ನಂ ಅವರ ‘ರೋಜಾ’ ಚಿತ್ರದಿಂದ ಮಧು ಶಾ ಕೂಡ ಸಾಕಷ್ಟು ಮನ್ನಣೆ ಗಳಿಸಿದರು. ಪೆಹಚಾನ್‌, ಎಲಾನ್‌, ಹಥ್‌ಕಡಿ,  ರಾವಣರಾಜ್‌, ಪ್ರೇಮ ಯೋಗ್‌, ಜಲ್ಮಿ, ಬ್ರಹ್ಮ, ಜನತಾ ಕಿ ಅದಾಲತ್‌, ದೀಯಾ ಔರ್‌ ತೂಫಾನ್‌ , ಸರ್ ಉತಾಕೆ ಜಿಯೋ  ಲವ್ ಯು ಆರ್ಟಿಸ್ಟ್ ಇನ್ನೂ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
 

48

ಮಧು ಮೂಲತಃ ತಮಿಳು ನಾಡಿನವರು. ಸಂಬಂಧದಲ್ಲಿ ಮಧು ಹೇಮಾ ಮಾಲಿನಿಯ ಸೊಸೆ. ವಾಸ್ತವವಾಗಿ, ಮಧು ಅವರ ತಂದೆ ರಘುನಾಥ್ ಅವರು ಹೇಮಾ ಮಾಲಿನಿಯ ಕಸಿನ್‌. ಹೇಮಾ ಮಾಲಿನಿ ಅವರ ಕುಟುಂಬದ ಕಾರ್ಯಕ್ರಮಗಳಲ್ಲಿ ಮಧು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.


 

58

ಅದೇ ಸಮಯದಲ್ಲಿ, ಜೂಹಿ ಚಾವ್ಲಾ ಸಂಬಂಧದಲ್ಲಿ ಮಧು ಅವರ ಅತ್ತಿಗೆಯಾಗುತ್ತಾರೆ. ವಾಸ್ತವವಾಗಿ, ಮಧು ಅವರ ಪತಿ ಆನಂದ್ ಶಾ ಮತ್ತು ಜೂಹಿ ಚಾವ್ಲಾ ಅವರ ಪತಿ ಜಯ್ ಮೆಹ್ತಾ ಕಸಿನ್ಸ್‌.  

68

4 ದಿನಗಳ ಚಿತ್ರೀಕರಣದ ನಂತರ ತನ್ನ ಮೊದಲ ಚಿತ್ರದಿಂದ ವಜಾಗೊಳಿಸಲಾಗಿದೆ ಎಂದು ಮಧು ಶಾ ಕೆಲವು ವರ್ಷಗಳ ಹಿಂದೆ  ಬಹಿರಂಗಪಡಿಸಿದರು. ಮಧು ಹೇಳುವಂತೆ, ನಾನು ಆ ಸಿನಿಮಾಗಾಗಿ 4 ದಿನ ಶೂಟಿಂಗ್ ಮಾಡಿದ್ದೆ ಆದರೆ ಕೊನೆ ಕ್ಷಣದಲ್ಲಿ ನಿರ್ಮಾಪಕ-ನಿರ್ದೇಶಕರು ನನಗೆ ತಿಳಿಸದೆ ಚಿತ್ರದಿಂದ ಹೊರಹಾಕಿದ್ದರು.

78

ಮಧು ಪ್ರಕಾರ, ಇದ್ದಕ್ಕಿದ್ದಂತೆ ನನ್ನನ್ನು ಚಿತ್ರದಿಂದ ಹೊರಹಾಕಿದಾಗ, ನಾನು ಕುಸಿದು ಹೋದೆ. ನನ್ನೊಂದಿಗೆ ಈ ರೀತಿಯ ವರ್ತನೆಯಿಂದ ನಾನು ಮತ್ತು ನನ್ನ ಕುಟುಂಬ ಸದಸ್ಯರು ಮಾತ್ರವಲ್ಲದೆ ಸ್ನೇಹಿತರು ಕೂಡ ಆಶ್ಚರ್ಯಪಟ್ಟರು. ಇದರಿಂದ ನಾನು ತುಂಬಾ ದುಃಖಿತಳಾಗಿದ್ದೆ ಮತ್ತು ಅನೇಕ ರಾತ್ರಿಗಳನ್ನು ಎಚ್ಚರವಾಗಿ ಕಳೆದಿದ್ದೇನೆ.

88

ಆ ಕಾಲವನ್ನು ನೆನಸಿಕೊಂಡರೆ ಈಗಲೂ ನರ್ವಸ್ ಆಗುತ್ತೆ. ಶೂಟಿಂಗ್‌  ಪ್ರಾರಂಭಿಸುವ ಮೊದಲು ನಿರ್ಮಾಪಕ ಮತ್ತು ನಿರ್ದೇಶಕರು ನನಗೆ ಹೇಳುವುದು ಅಗತ್ಯವೆಂದು ಪರಿಗಣಿಸಲಿಲ್ಲ. ನನ್ನೊಂದಿಗೆ ಚರ್ಚಿಸದೆ ಮತ್ತೊಬ್ಬ ನಟಿಯನ್ನು ಚಿತ್ರದಲ್ಲಿ ಹಾಕಿಕೊಂಡರು. ನಾನು ಆ ಸಿನಿಮಾದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯಿಂದ ತಿಳಿದು ಬಂದಿತ್ತು ಎಂದು ನಟಿ ಹೇಳಿದ್ದರು.

click me!

Recommended Stories