RRR ಅಂದರೇನು? ಸಿನಿಮಾಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು

Suvarna News   | Asianet News
Published : Mar 26, 2022, 05:02 PM IST

ತಮ್ಮ ವಿಭಿನ್ನ ಶೈಲಿಯ ಚಿತ್ರಗಳಿಗೆ ಹೆಸರುವಾಸಿಯಾದ ಎಸ್‌ಎಸ್ ರಾಜಮೌಳಿ (SS Rajamouli)  ಅವರ ಚಿತ್ರ RRR ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮೊದಲ ದಿನವೇ ಚಿತ್ರ ಸಾಕಷ್ಟು ಯಶಸ್ಸು ಗಳಿಸಿದೆ. ಚಿತ್ರದ ಮೊದಲ ಶೋ ಹೌಸ್ ಫುಲ್ ಆಗಿದ್ದು, ಜನ ವೀಕ್ಷಿಸಲು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಆರ್ ಆರ್ ಆರ್ ಅಂದರೆ ಏನು   ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡುತ್ತಿದೆ. ಫುಲ್‌ ಫಾರ್ಮ್‌ ರೈಸ್ ಮತ್ತು ರಿವೋಲ್ಟ್‌.ಚಿತ್ರದಲ್ಲಿ   ಆ್ಯಕ್ಷನ್ ಜೊತೆಗೆ ಎಮೋಷನಲ್ ಡ್ರಾಮಾ ಕೂಡ ಕಾಣಿಸುತ್ತಿದೆ. ಈ ಚಿತ್ರದಲ್ಲಿ  ರಾಮ್ ಚರಣ್  (Ram Charan) ಮತ್ತು ಜೂನಿಯರ್ ಎನ್‌ಟಿಆರ್ (Jr NTR)   ಜೊತೆಗೆ ಆಲಿಯಾ ಭಟ್ (Alia Bhatt) ಮತ್ತು ಅಜಯ್ ದೇವಗನ್ (Ajay Devgn) ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ . ಚಿತ್ರಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

PREV
110
RRR ಅಂದರೇನು? ಸಿನಿಮಾಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು

ಈ ಚಲನಚಿತ್ರವು ಇಬ್ಬರು ನೈಜ ಜೀವನದ ನಾಯಕರ ಅಂದರೆ ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಜೀವನವನ್ನು ಆಧರಿಸಿದೆ. ದೇಶಕ್ಕಾಗಿ ಬ್ರಿಟಿಷರ ಜೊತೆ ಹೋರಾಟ ಮಾಡಿದರು.


 

210

ಸುದ್ದಿ ಪ್ರಕಾರ ಎಸ್ ಎಸ್ ರಾಜಮೌಳಿ ಅವರ ಈ ಚಿತ್ರದ ಬಜೆಟ್ 500 ಕೋಟಿ. ಈ ಪೈಕಿ ಸುಮಾರು 336 ಕೋಟಿ ರೂ.ಗೆ ಚಿತ್ರ ನಿರ್ಮಾಣವಾಗಿದೆ. ಚಿತ್ರದ ತಾರಾ ಬಳಗಕ್ಕೂ ಸಾಕಷ್ಟು ದೊಡ್ಡ ಮೊತ್ತದೆ ಸಂಭಾವನೆ ನೀಡಲಾಗಿದೆ. ಆರ್‌ಆರ್‌ಆರ್ ಅನ್ನು ಪುಣೆ, ಹೈದರಾಬಾದ್ ಮತ್ತು ಉಕ್ರೇನ್‌ನಲ್ಲಿ ಚಿತ್ರೀಕರಿಸಲಾಗಿದೆ

310

ಈ ಚಿತ್ರದ ಚಿತ್ರೀಕರಣಕ್ಕೆ ಸುಮಾರು 300 ದಿನ ಬೇಕಾಯಿತು. ವರದಿಗಳನ್ನು ನಂಬುವುದಾದರೆ, ಚಿತ್ರದ ಹೆಚ್ಚಿನ ಭಾಗವನ್ನು ಅಲ್ಯೂಮಿನಿಯಂ ಕಾರ್ಖಾನೆಯಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿಯೂ ವಿಭಿನ್ನ ದೃಶ್ಯಗಳಿಗಾಗಿ ವಿಶೇಷ ಸೆಟ್‌ಗಳನ್ನು ಸಿದ್ಧಪಡಿಸಲಾಗಿತ್ತು.

410

RRR ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರ ನಿರ್ಮಾಪಕರು 100 ಎಕರೆ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಿದ್ದರು. ಈ ಭೂಮಿಯಲ್ಲಿ ಐಷಾರಾಮಿ ಬಂಗಲೆಯನ್ನು ನಿರ್ಮಿಸಲಾಯಿತು, ಅದರಲ್ಲಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಹೊಂದಿತ್ತು.


 

510

ಚಿತ್ರದ ಪ್ರಮುಖ ತಾರಾಗಣವು ಈ ಚಿತ್ರಕ್ಕಾಗಿ ತಮ್ಮ 4 ವರ್ಷಗಳನ್ನು ನೀಡಿದೆ. ಈ 4 ವರ್ಷಗಳಲ್ಲಿ ಅವರು ಬೇರೆ ಯಾವುದೇ ಚಿತ್ರಕ್ಕೆ ಕೆಲಸ ಮಾಡಿಲ್ಲ. RRR ಭಾರತೀಯ ಚಲನಚಿತ್ರೋದ್ಯಮದಲ್ಲಿ ಇದುವರೆಗೆ ಅತಿ ದೊಡ್ಡ IMAX ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತದೆ

610

ಈ ಚಿತ್ರವನ್ನು ಹಿಂದಿಯೊಂದಿಗೆ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ ವಿದೇಶದಲ್ಲಿಯೂ ಚಿತ್ರ ಬಿಡುಗಡೆಯಾಗಿತ್ತು. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳ ಪ್ರಕಾರ, ಚಿತ್ರದ ಪ್ರಚಾರಕ್ಕಾಗಿ ನಿರ್ಮಾಪಕರು ಸುಮಾರು 40 ಕೋಟಿ ಖರ್ಚು ಮಾಡಿದ್ದಾರೆ.


 

710

RRR ಚಿತ್ರದ ನಾಯಕ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್‌ಗೆ ಸಮಾನ ಶುಲ್ಕವನ್ನು ನೀಡಲಾಗಿದೆ. ಹೊರ ಬರುತ್ತಿರುವ ವರದಿಗಳ ಪ್ರಕಾರ ಇಬ್ಬರೂ ನಟರು 45-45 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಚಿತ್ರದ ಲಾಭದಲ್ಲಿ ಬಹುಪಾಲು ರಾಜಮೌಳಿ ಮತ್ತು ಅವರ ಕುಟುಂಬಕ್ಕೆ ಹಕ್ಕಿದೆ.


 

810

ಆಲಿಯಾ ಭಟ್ ಈ ಚಿತ್ರದ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆರ್‌ಆರ್‌ಆರ್‌ನಲ್ಲಿ ಕೇವಲ 20 ನಿಮಿಷಗಳ ಪಾತ್ರಕ್ಕಾಗಿ ಅವರು 9 ಕೋಟಿ ರೂ ಚಾರ್ಜ್‌ ಮಾಡಿದ್ದಾರೆ ಎನ್ನಲಾಗುತ್ತಿದೆ.


 

910

ಬಾರೀ ಆ್ಯಕ್ಷನ್‌ನಿಂದ ಕೂಡಿರುವ ಈ ಚಿತ್ರದ ಎರಡನೇ ಭಾಗವೂ ಬರಲಿದೆ ಎಂಬ ಸುದ್ದಿಯೂ ಹೊರಬೀಳುತ್ತಿದೆ. ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ಕೊಮರಂ ಭೀಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ಅಲ್ಲೂರಿ ಸೀತಾರಾಮ್ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

1010

ಈ ಚಿತ್ರದಲ್ಲಿ, ದಕ್ಷಿಣ ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಮೊದಲ ಬಾರಿಗೆ ಒಟ್ಟಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ.

click me!

Recommended Stories