RRR ಮೊದಲ ದಿನದ ಕಲೆಕ್ಷನ್‌ ರು.200- ರು.250 ಕೋಟಿ!

First Published | Mar 26, 2022, 10:11 AM IST

ನಿರ್ದೇಶಕ ರಾಜಮೌಳಿ ನಿರ್ದೇಶನದ, ಜೂ. ಎನ್‌ಟಿಆರ್‌ ಹಾಗೂ ರಾಮ್‌ಚರಣ್‌ ತೇಜಾ ನಟನೆಯ ‘ಆರ್‌ಆರ್‌ಆರ್‌’ ಚಿತ್ರ ದೇಶದೆಲ್ಲೆಡೆ ಅಬ್ಬರಿಸುತ್ತಿದೆ. ಆದ್ದರಿಂದಲೇ ಮೊದಲ ದಿನವೇ ಆರ್‌ಆರ್‌ಆರ್‌ ರು.200ರಿಂದ ರು.250 ಕೋಟಿ ರು. ಗಳಿಸುವ ಲೆಕ್ಕಾಚಾರವನ್ನು ತಜ್ಞರು ಹೇಳುತ್ತಿದ್ದಾರೆ.
 

RRR ಕಲೆಕ್ಷನ್

ಆರ್‌ಆರ್‌ಆರ್‌ ಗಳಿಕೆಯಲ್ಲಿ ದೊಡ್ಡ ಪಾಲು ಬರುವುದು ಆಂಧ್ರ ಹಾಗೂ ತೆಲಂಗಾಣದಿಂದ. ಅಲ್ಲಿ ಸಿನಿಮಾ ಟಿಕೆಟ್‌ ದರ ಕಡಿಮೆ ನಿಗದಿಗೊಳಿಸಿದ್ದರೂ ಸಿನಿಮಾ ಮಂದಿ ಬೇಡಿಕೆಯ ಮೇರೆಗೆ ಹೆಚ್ಚುಗೊಳಿಸಲು ಅನುಮತಿ ನೀಡಲಾಗಿತ್ತು. 

ಭರ್ಜರಿ ಪ್ರದರ್ಶನ

ಫ್ಯಾನ್ಸ್‌ ಶೋ ಟಿಕೆಟ್‌ ದರ 500 ರು. ನಿಂದ 1000 ರು.ಗಳವರೆಗೂ ಇತ್ತು. ಟಿಕೆಟ್‌ ದರ ರು.400ವರೆಗೂ ಇಡಲಾಗಿತ್ತು. ಮೊದಲ ದಿನ ಬಹುತೇಕ ಶೋಗಳು ಹೌಸ್‌ಫುಲ್‌ ಆಗಿದ್ದುವು. 

Tap to resize

ಫೈಯರ್ ಆಂಡ್ ವಾಟರ್

ಶೇ.95ರಷ್ಟುಥಿಯೇಟರ್‌ಗಳು ಆರ್‌ಆರ್‌ಆರ್‌ ಚಿತ್ರವನ್ನೇ ಪ್ರದರ್ಶಿಸುತ್ತಿವೆ. ಹೀಗಾಗಿ ಆ ಭಾಗದ ಮೊದಲ ದಿನದ ಗಳಿಕೆಯೇ ರು.100ರಿಂದ ರು.115 ಕೋಟಿ ಆಗಲಿದೆ ಎನ್ನಲಾಗಿದೆ.

ರಾಜಮೌಳಿ ಸಿನಿಮಾ

ರಾಜ್ಯದಲ್ಲಿಯೂ ಹೆಚ್ಚಿನ ಪ್ರದರ್ಶನಗಳು ಇರುವುದರಿಂದ ದಿನದ ಕಲೆಕ್ಷನ್‌ ರು.10 ರಿಂದ 15 ಕೋಟಿ ರು.ಗಳಿಗೇರಲಿದೆ. ತಮಿಳುನಾಡು ರು.10 ಕೋಟಿ, ಕೇರಳದಲ್ಲಿ 4 ಕೋಟಿ ರು. ಗಳಿಕೆಯ ಲೆಕ್ಕಾಚಾರ ನಡೆದಿದೆ. 

ರಾಮರಾಜ್ ಆಗಿ ರಾಮ್‌ಚರಣ್

ಹಿಂದಿಯಲ್ಲಿ ಪ್ರಿ-ಬುಕಿಂಗ್‌ ಸಂಖ್ಯೆ ಹೆಚ್ಚಿಲ್ಲವಾದರೂ ರಾಜಮೌಳಿ ಹೆಸರಿನ ಬಲದಿಂದಲೇ ರು.13ರಿಂದ ರು.15 ಕೋಟಿ ಗಳಿಕೆ ಕಷ್ಟವಿಲ್ಲ. ಇನ್ನು ವಿದೇಶದಲ್ಲಿಯೂ ಭರ್ಜರಿ ಪ್ರದರ್ಶನ ಕಂಡಿದೆ. 

ಭೀಮಾ ಪಾತ್ರದಲ್ಲಿ ಜ್ಯೂನಿಯರ್

ಅಮೆರಿಕಾ ಒಂದರಲ್ಲೇ 50 ಲಕ್ಷ ಯುಎಸ್‌ ಡಾಲರ್‌ನಿಂದ 80 ಲಕ್ಷ ಯುಎಸ್‌ ಡಾಲರ್‌ ಗಳಿಸಲಿದೆ. ವಿದೇಶಗಳ ಒಟ್ಟು ಗಳಿಕೆ ಲೆಕ್ಕ ಹಾಕಿದರೆ 1 ಕೋಟಿ ಯುಎಸ್‌ ಡಾಲರ್‌ ಗಳಿಕೆ ಮಾಡಲಿದೆ ಆರ್‌ಆರ್‌ಆರ್‌. 

ಬ್ಲಾಕ್‌ ಬಸ್ಟರ್ ಕಲೆಕ್ಷನ್

ಎಲ್ಲಾ ಒಟ್ಟು ಸೇರಿದರೆ ರು.200 ರಿಂದ ರು.250 ಕೋಟಿ ನಿಶ್ಚಿತ. ಹೀಗಾಗಿ ಚಿತ್ರತಂಡ ಹೇಳಿರುವ ರು.500 ಕೋಟಿ ಬಜೆಟ್ಟಿನ ಅರ್ಧದಷ್ಟುಮೊದಲ ದಿನವೇ ಬಂದಂತಾಗಿದೆ.

Latest Videos

click me!