Ajay devgan Different Look: ಡಿಫರೆಂಟ್ ಲುಕ್‌ನಲ್ಲಿ ಅಜಯ್‌, ನಟನ ಆವತಾರ ನೋಡಿ ಫ್ಯಾನ್ಸ್‌ ಶಾಕ್‌!

First Published | Jan 5, 2022, 6:07 PM IST

ಬಾಲಿವುಡ್ ಸ್ಟಾರ್ ಅಜಯ್ ದೇವಗನ್ (Ajay Devgan) ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಅದು ಗಂಭೀರ ಪಾತ್ರವಾಗಲಿ ಅಥವಾ ಹಾಸ್ಯವಾಗಲಿ, ಅಜಯ್‌ ದೇವಗನ್‌ ಪಾತ್ರಕ್ಕೆ ಜೀವ ತುಂಬುವುದರಲ್ಲಿ ಸೋಲುವುದಿಲ್ಲ. ಈ ದಿನಗಳಲ್ಲಿ ಅಜಯ್ ದೇವಗನ್ ಅವರ ಲುಕ್‌ ಕಾರಣದಿಂದ ಸುದ್ದಿಯಾಗಿದ್ದಾರೆ. ವಾಸ್ತವವಾಗಿ ನಟ ಮಂಗಳವಾರ ಬಹಳ ವಿಚಿತ್ರವಾದ ಉಡುಪಿನಲ್ಲಿ ಕಾಣಿಸಿಕೊಂಡರು. ಕೊರಳಲ್ಲಿ ರುದ್ರಾಕಿಯ ಜಪಮಾಲೆ, ಹಣೆಯ ಮೇಲೆ ತಿಲಕ ಹಾಕಿಕೊಂಡು ಬರಿಗಾಲಿನಲ್ಲಿ ನಟ ಕಾಣಿಸಿಕೊಂಡಾಗ, ಎಲ್ಲರೂ ಅವರನ್ನು ನೋಡಿ ಆಶ್ಚರ್ಯಚಕಿತರಾದರು. ಅಜಯ್ ದೇವಗನ್ ಅವರ ಈ ಲುಕ್ ಹಿಂದಿನ ರಹಸ್ಯವೇನು?
 

ಇತ್ತೀಚಿಗೆ ಅಜಯ್ ದೇವಗನ್ ಸನ್ನಿ ಸೂಪರ್ ಸೌಂಡ್ ಸ್ಟುಡಿಯೋದಿಂದ ಹೊರಬಂದರು. ಆ ಸಮಯದಲ್ಲಿ ಅವರು ಕಪ್ಪು ಕುರ್ತಾ ಮತ್ತು ಕಪ್ಪು ಧೋತಿ ಧರಿಸಿದ್ದರು. ಅಜಯ್‌ ಅವರ ಈ ಆವತಾರ ನೋಡಿದ ಫ್ಯಾನ್ಸ್‌  ಶಿವಾಯ್ 2 ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. 

ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹಣೆಗೆ ಶ್ರೀಗಂಧದ ತಿಲಕ ಧರಿಸಿ ಸಂಪೂರ್ಣ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡರು. ಅವರು   ಬರಿಗಾಲಿನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಅಜಯ್‌ ದೇವಗನ್‌ ಅವರ ಈ ಲುಕ್‌ ನೋಡಿ ಅಲ್ಲಿದ್ದವರೆಲ್ಲ ಬೆರಗಾದರು.

Tap to resize

ವಾಸ್ತವವಾಗಿ, ಅಜಯ್ ದೇವಗನ್ ಅವರ ಈ ಲುಕ್ ಅವರ ಮುಂಬರುವ ಚಿತ್ರ 'ಶಿವಾಯ್ 2'(Shivaay 2)  ಸಿನಿಮಾಕ್ಕಾಗಿ ಆಗಿದೆ .ಶಿವಾಯ್ 2'  ಸಿನಿಮಾದಲ್ಲಿ ಅವರು ಈ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜಯ್‌ ಅವರ ಫೋಟೋಗಳು ಸಖತ್‌ ವೈರಲ್‌ ಆಗಿವೆ

ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ 'ಶಿವಾಯ್' ಸೀಕ್ವೆಲ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಫೋಟೋ ನೋಡಿದ ನಂತರ ಅಜಯ್ ದೇವಗನ್ 'ಶಿವಾಯ್ 2' ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೂ ಅಧಿಕೃತವಾಗಿ ಅದರ ಮಾಹಿತಿ ಬಹಿರಂಗವಾಗಿಲ್ಲ.

ಈ ವರ್ಷ ಅಜಯ್ ದೇವಗನ್ RRR, ಗಂಗೂಬಾಯಿ ಕಥಿವಾಡಿ, ಮೈದಾನ್ ಮತ್ತು ರನ್ವೇ 34 ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. RRR ಅನ್ನು ಜನವರಿ 7 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಂದಾಗಿ ಸಿನಿಮಾ ಬಿಡುಗಡೆ ದಿನಾಂಕವನ್ನು ಮೂಂದುಡಲಾಗಿದೆ.

ಅಜಯ್ ದೇವಗನ್ ಕಳೆದ 30 ವರ್ಷಗಳಿಂದ ಬಾಲಿವುಡ್ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರು 1991 ರ ಚಲನಚಿತ್ರ ಫೂಲ್ ಔರ್ ಕಾಂಟೆ ಮೂಲಕ ಬಾಲಿವುಡ್‌ಗೆ ಪ್ರವೇಶ  ಮಾಡಿದರು. ಅವರ ಮೊದಲ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ ಹಿಟ್‌ ಆಗಿತ್ತು.

ಅಜಯ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ 30 ವರ್ಷಗಳ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. '30 ವರ್ಷಗಳ ಕಾಲ ಬಾಲಿವುಡ್‌ನಲ್ಲಿ ಉಳಿಯುವುದು ದೊಡ್ಡ ವಿಷಯ. ಯಾವುದೇ ಕ್ಷೇತ್ರದಲ್ಲಿ ಮೂರು ದಶಕಗಳ  ಕಾಲ ಉಳಿಯಲು ನಿರಂತರ ಅಭಿವೃದ್ಧಿ ಅಗತ್ಯವಿದೆ. ನಿಮ್ಮನ್ನು ಕಾಪಾಡಿಕೊಳ್ಳಲು ವಯಸ್ಸಿಗೆ ಮಾತ್ರವಲ್ಲದೆ ನಿಮ್ಮ ಕರಕುಶಲತೆಗೆ ಸಹ ಇದು ಅಗತ್ಯವಾಗಿರುತ್ತದೆ'  ಎಂದು ಅವರು ಹೇಳಿದರು. .

Latest Videos

click me!