ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಟಿ ಐಶ್ವರ್ಯಾ ರೈ; ಫೋಟೋ ವೈರಲ್

Published : Nov 02, 2022, 10:53 AM IST

ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಐಶ್ವರ್ಯಾ ರೈ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ಮಗಳು ಆರೋಧ್ಯ ಜೊತೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಐಶ್ವರ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

PREV
16
ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಟಿ ಐಶ್ವರ್ಯಾ ರೈ; ಫೋಟೋ ವೈರಲ್

ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚಿಗಷ್ಟೆ ಅಂದರೆ ನವೆಂಬರ್ 1ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಐಶ್ವರ್ಯಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು, ಸಿನಿಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳ ಸುರಿಮಳೆಯ ಬಂದಿತ್ತು. 

26

49ನೇ ವರ್ಷಕ್ಕೆ ಕಾಲಿಟ್ಟ ನಟಿ ಐಶ್ವರ್ಯಾ ಇಂದಿಗೂ ಅದೇ ಬೇಡಿಕೆ, ಖ್ಯಾತಿ ಉಳಿಸಿಕೊಂಡಿದ್ದಾರೆ. ಆದರೆ ಐಶ್ ಅಪರೂಪಕ್ಕೊಂದು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. 

36

ಅಂದಹಾಗೆ ಹುಟ್ಟುಹಬ್ಬ ಆಚರಿಸಿಕೊಂಡ ಐಶ್ವರ್ಯಾ ರೈ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ಮಗಳು ಆರೋಧ್ಯ ಜೊತೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಐಶ್ವರ್ಯಾ ಫೋಟೋಗಲು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

46

ಮುಂಬೈನ ಪ್ರಸಿದ್ಧ ಗಣಪನಿಗೆ ಐಶ್ವರ್ಯಾ ಮತ್ತು ಮಗಳು ವಿಶೇಷ ಪೂಜೆ ಸಲ್ಲಿಸಿದರು. ಐಶ್ವರ್ಯಾ ನೋಡಲು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. 

56

ಐಶ್ವರ್ಯಾ ಮತ್ತು ಮಗಳು ಆರಾಧ್ಯಾ ಇಬ್ಬರೂ ಬಿಳಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಸದಾ ಆರಾಧ್ಯಾಳನ್ನು ರಕ್ಷಿಸುವ ಐಶ್ವರ್ಯಾ ಕೈ ಹಿಡಿದುಕೊಂಡೆ ಇರುತ್ತಾರೆ. ದೇವಸ್ಥಾನದಲ್ಲೂ ಮಗಳ ಜೊತೆಯಲ್ಲೇ ಇದ್ದ ಐಶ್ವರ್ಯಾ ಕ್ಯಾಮರಾಗೆ ನಗುತ್ತಾ ಪೋಸ್ ನೀಡಿದ್ದಾರೆ. 

66

ಐಶ್ವರ್ಯಾ ಸದ್ಯ ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ತನ್ನ ಮೊದಲ ನಿರ್ದೇಶಕ ಮಣಿರತ್ನಂ ಅವರ ಸಿನಿಮಾ ಮೂಲಕ ಮತ್ತೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ಮಿಂಚಿದ್ದಾರೆ. ದ್ವಿಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಮುಂದಿನ ಸಿನಿಮಾ ಯಾವುದು ಎಂದು ಇನ್ನು ರಿವೀಲ್ ಮಾಡಿಲ್ಲ. 

Read more Photos on
click me!

Recommended Stories