ಕ್ಯಾಮರಾದಲ್ಲಿ ಸೆರೆಯಾದ 'ಕರ್ನಾಟಕ ರತ್ನ' ಪ್ರಶಸ್ತಿ ಸಮಾರಂಭದ ಅಪೂರ್ವ ಕ್ಷಣಗಳಿವು

Published : Nov 01, 2022, 08:49 PM ISTUpdated : Nov 01, 2022, 08:52 PM IST

ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ, ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನಸೌಧದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸುರಿಯುತ್ತಿರುವ ಮಳೆಯ ನಡುವೆ, ಜೂನಿಯರ್ ಎನ್‌ಟಿಆರ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತಿಯ ಪರವಾಗಿ ಕರ್ನಾಟಕದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು.  ಫೋಟೋ ಕೃಪೆ: ಎ ವೀರಮಣಿ, ಕೆ. ರವಿ, ಸುರೇಶ್ ಪಿ  

PREV
114
ಕ್ಯಾಮರಾದಲ್ಲಿ ಸೆರೆಯಾದ 'ಕರ್ನಾಟಕ ರತ್ನ' ಪ್ರಶಸ್ತಿ ಸಮಾರಂಭದ ಅಪೂರ್ವ ಕ್ಷಣಗಳಿವು

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಸಿಎಂ ಬೊಮ್ಮಾಯಿ , ನಟ ಜೂನಿಯರ್ ಎನ್‌ಟಿಆರ್ , ತಮಿಳು ಸೂಪರ್‌ ಸ್ಟಾರ್ ರಜನಿಕಾಂತ್ ಹಾಗೂ ವಿವಿಧ ಗಣ್ಯರ ಸಮ್ಮುಖದಲ್ಲಿ ಸಾಲು ಹೊದಿಸಿ ಪೇಟಾ ತೊಡಿಸಿ, ಕರ್ನಾಟಕ ರತ್ನ ಪದಕ ನೀಡಿ ಗೌರವಿಸಿದರು. 

214

ಪತಿಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ  ಪುನೀತ್ ರಾಜ್‌ ಕುಮಾರ್ ಅವರು ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು. 

314

ಕಾರ್ಯಕ್ರಮದಲ್ಲಿ ಮಾತನಾಡಿದ ತೆಲುಗು ನಟ ಜೂನಿಯರ್ ಎನ್‌ಟಿಆರ್, ಪರಂಪರೆ ಹಾಗೂ ಉಪನಾಮ ಹಿರಿಯರಿಂದ ಬರುತ್ತದೆ. ಆದರೆ ವ್ಯಕ್ತಿತ್ವ ಎಂಬುದು ಆತನ ಸ್ವಂತ ಸಂಪಾದನೆ, ಬರೀ ವ್ಯಕ್ತಿತ್ವದಿಂದ, ಕೇವಲ ನಗುವಿನಿಂದ ಸ್ವಂತ ಪ್ರತಿಭೆಯಿಂದ ರಾಜ್ಯವನ್ನು ಗೆದ್ದಿರುವ ಯಾರಾದರು ಇದ್ದರೆ ಅದು ಪುನೀತ್ ರಾಜ್‌ ಕುಮಾರ್ ಮಾತ್ರ ಎಂದು ಹೇಳಿದರು. 
 

414

ಸಮಾರಂಭ ನಡೆದ ವಿಧಾನಸೌಧದ ಮುಂದೆ ಸೇರಿದ ಅಪ್ಪು ಅಭಿಮಾನಿಗಳು ಹಾಗೂ ಜನ ಸಾಗರ, ಸುರಿಯುತ್ತಿರುವ ಮಳೆಯ ನಡುವೆಯೂ ಸ್ಥಳ ಬಿಟ್ಟು ಕದಲದ ಅಭಿಮಾನಿಗಳು

514

ಇನ್ನು ಕಾರ್ಯಕ್ರಮಲ್ಲಿ ಮಾತನಾಡಿದ ತಲೈವಾ ತಮಿಳು ಸೂಪರ್ ಸ್ಟಾರ್, ಪುನೀತ್ ದೇವರ ಮಗ ಸ್ವಲ್ಪ ಕಾಲ ಭೂಮಿಗೆ ಬಂದು ನಮ್ಮೊಂದಿಗೆ ಇದ್ದು ವಾಪಸ್ ಹೊರಟು ಹೋಗಿದ್ದಾರೆ ಅವರು ನಿಧನರಾದಾಗ ನಾನು ಆಸ್ಪತ್ರೆಯಲ್ಲಿದ್ದೆ. ಹಲವು ದಿನಗಳ ಬಳಿಕ ನನ್ನ ಕುಟುಂಬದವರು ಅವರು ನಿಧನರಾದ ಬಗ್ಗೆ ತಿಳಿಸಿದರು. ಆ ಕ್ಷಣ ನನಗೆ ನಂಬಲಾಗಲಿಲ್ಲ ಎಂದು ರಜನಿ ಹೇಳಿಕೊಂಡರು.

614

ನಟ ರಜನಿಕಾಂತ್ ಜೊತೆ ಶಿವಣ್ಣ, ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ರಾಜ್‌ಕುಮಾರ್ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

714

ಮಾತು ಆರಂಭಿಸುವ ಮುನ್ನ ನಾಡಿನ ಸಮಸ್ತ ಜನರಿಗೆ ಏಳು ಕೋಟಿ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ತಲೈವಾ ರಜನಿಕಾಂತ್ 

814

ವಿಧಾನಸೌಧದ ಮುಂದೆ ಪುನೀತ್ ರಾಜ್‌ ಕುಮಾರ್ ಕಟೌಟ್ ಹಾಗೂ ಕನ್ನಡ ಧ್ವಜ ಹಿಡಿದುಕೊಂಡು ಸಂಭ್ರಮ ಪಡುತ್ತಿರುವ ಕನ್ನಡಿಗರು. ಅಭಿಮಾನಿಗಳ ಮನಸ್ಸು ಹೃದಯಗಳಲ್ಲಿ ರಾರಾಜಿಸುತ್ತಿರುವ ಅಪ್ಪು.

914

ಅಭಿಮಾನಿಗಳ ಕೈಯಲ್ಲಿ ಕನ್ನಡ ಧ್ವಜದಲ್ಲಿ ಮೂಡಿ ಬಂದ ನಟ ಸಾರ್ವಭೌಮ ಅಪ್ಪು. ಕೆಂಪು ಹಳದಿ ಸಾಲು ಕೈಯಲ್ಲಿ ಅಪ್ಪು ಇರುವ ಧ್ವಜದೊಂದಿಗೆ ಬಂದ ಅಭಿಮಾನಿಗಳು.

1014

ವಿಧಾನಸೌಧದ ಮುಂದೆ ಮಾಧ್ಯಮಗಳ ಕ್ಯಾಮರಾಗಳಿಗೆ ಪುನೀತ್‌ ರಾಜ್‌ಕುಮಾರ್ ಫೋಟೋ ಹಿಡಿದು ಫೋಸ್ ಕೊಟ್ಟ ಪವರ್ ಸ್ಟಾರ್ ಅಭಿಮಾನಿಗಳು 

1114

ವಿಧಾನಸೌಧದ ಮುಂದೆ ಮಾಧ್ಯಮಗಳ ಕ್ಯಾಮರಾಗಳಿಗೆ ಪುನೀತ್‌ ರಾಜ್‌ಕುಮಾರ್ ಫೋಟೋ ಹಿಡಿದು ಫೋಸ್ ಕೊಟ್ಟ ಪವರ್ ಸ್ಟಾರ್ ಅಭಿಮಾನಿಗಳು 

1214

ವಿಧಾನಸೌಧದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸುರಿಯುತ್ತಿರುವ ಮಳೆಯ ನಡುವೆ, ಜೂನಿಯರ್ ಎನ್‌ಟಿಆರ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತಿಯ ಪರವಾಗಿ ಕರ್ನಾಟಕದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. 

1314

ವಿಧಾನಸೌಧದ ಮುಂದೆ ಮಾಧ್ಯಮಗಳ ಕ್ಯಾಮರಾಗಳಿಗೆ ಪುನೀತ್‌ ರಾಜ್‌ಕುಮಾರ್ ಫೋಟೋ ಹಿಡಿದು ಫೋಸ್ ಕೊಟ್ಟ ಪವರ್ ಸ್ಟಾರ್ ಅಭಿಮಾನಿಗಳು 

1414

ವಿಧಾನಸೌಧದ ಮುಂದೆ ಮಾಧ್ಯಮಗಳ ಕ್ಯಾಮರಾಗಳಿಗೆ ಪುನೀತ್‌ ರಾಜ್‌ಕುಮಾರ್ ಫೋಟೋ ಹಿಡಿದು ಫೋಸ್ ಕೊಟ್ಟ ಪವರ್ ಸ್ಟಾರ್ ಅಭಿಮಾನಿಗಳು 

click me!

Recommended Stories