ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಮಾಡೆಲಿಂಗ್‌ ದಿನಗಳ ಸಂಭಾವನೆ ಕೇಳಿದರೆ ಶಾಕ್‌ ಆಗೋದು ಗ್ಯಾರಂಟಿ

First Published | Nov 1, 2022, 5:40 PM IST

ಮಾಜಿ ವಿಶ್ವ ಸುಂದರಿ ಹಾಗೂ ನಟಿ ಐಶ್ವರ್ಯಾ ರೈ (Aishwarya Rai) ಅವರಿಗೆ 49 ವರ್ಷಗಳ ಸಂಭ್ರಮ.  1 ನವೆಂಬರ್ 1953 ರಂದು ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯಾ 1994 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದರು ಮತ್ತು ಇದು ಅವರ ಮೊದಲ ತಮಿಳು ಚಿತ್ರ 'ಇರುವರ್' ಮತ್ತು ಹಿಂದಿ ಚೊಚ್ಚಲ ಚಿತ್ರ 'ಔರ್ ಪ್ಯಾರ್ ಹೋ ಗಯಾ' ಬಿಡುಗಡೆಯಾದ ವರ್ಷವು ಆಗಿದೆ. ಪ್ರಸ್ತುತ, ಪ್ರತಿ ಚಿತ್ರಕ್ಕೆ ಸುಮಾರು 10 -12 ಕೋಟಿ ಚಾರ್ಜ್ ಮಾಡುವ ಐಶ್ವರ್ಯಾ ಮೊದಲು  ಮಾಡೆಲಿಂಗ್ ಮಾಡುತ್ತಿದ್ದರು ಮತ್ತು ಇದಕ್ಕಾಗಿ ಅವರು ಪಡೆಯುತ್ತಿದ್ದ ಸಂಭಾವನೆ ಕೇಳಿದರೆ  ಆಶ್ಚರ್ಯ ಪಡುತ್ತೀರಿ. ಐಶ್ವರ್ಯಾ ರೈ ಸೇರಿದಂತೆ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಸಹ ಮಾಡೆಲಿಂಗ್‌ ದಿನಗಳಲ್ಲಿ ಅತಿ ಕಡಿಮೆ ಸಂಭಾವನೆ ಪಡೆಯುತ್ತಿದ್ದರು.

ಐಶ್ವರ್ಯಾ ರೈ 30 ವರ್ಷಗಳ ಹಿಂದೆ ಸೋನಾಲಿ ಬೇಂದ್ರೆ, ತೇಜಸ್ವಿನಿ ಕೊಲ್ಹಾಪುರೆ ಮತ್ತು ಇತರರೊಂದಿಗೆ ಫ್ಯಾಶನ್ ಕ್ಯಾಟಲಾಗ್‌ಗೆ ಫೊಟೋಶೂಟ್ ಮಾಡಿದ್ದರು ಮತ್ತು ಇದಕ್ಕಾಗಿ ಅವರು ಪಡೆದ  ಸಂಭಾವನೆ ಕೇವಲ 1500 ರೂ ಮಾತ್ರ. ಐಶ್ವರ್ಯಾ ರೈ ಇಂದು ಬಾಲಿವುಡ್‌ನ ಶ್ರೀಮಂತ ನಟಿಯರಲ್ಲಿ ಒಬ್ಬರು. ಅವರು ಸುಮಾರು 828 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಬಾಲಿವುಡ್‌ನ  ದುಬಾರಿ ನಟಿಯರಲ್ಲಿ ದೀಪಿಕಾ ಪಡುಕೋಣೆ  (Deepika Padukone) ಕೂಡ ಒಬ್ಬರು. ಆಕೆ ಪ್ರತಿ ಚಿತ್ರಕ್ಕೆ 12-15 ಕೋಟಿ ರೂ ಚಾರ್ಜ್‌ ಮಾಡುತ್ತಾರೆ. ದೀಪಿಕಾ ಅವರ ಮೊದಲ ಹಿಂದಿ ಚಿತ್ರ 'ಓಂ ಶಾಂತಿ ಓಂ' 2007 ರಲ್ಲಿ ಬಂದಿತು. ಅದಕ್ಕೂ ಮೊದಲು ಅವರು  2006 ರಲ್ಲಿ ಕನ್ನಡ ಚಲನಚಿತ್ರ 'ಐಶ್ವರ್ಯ'ದಲ್ಲಿ ಕಾಣಿಸಿಕೊಂಡರು. ಸಿನಿಮಾಗೆ ಎಂಟ್ರಿ ಕೊಡುವ ಮೊದಲು ದೀಪಿಕಾ   ಮಾಡೆಲಿಂಗ್ ಮಾಡುತ್ತಿದ್ದರು. ತಮ್ಮ ಮೊದಲ ಮಾಡೆಲಿಂಗ್ ಪ್ರಾಜೆಕಟ್‌ಗಾಗಿ ದೀಪಿಕಾ  2000 ರೂ ಚೆಕ್ ಪಡೆದರು. ಇಂದು ದೀಪಿಕಾ 314 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯ ಒಡೆಯರಾಗಿದ್ದಾರೆ.

Tap to resize

ತಮಿಳು ಚಿತ್ರ 'ತಮಿಝನ್' ನಿಂದ ನಟನೆಗೆ ಬಂದ ಅಂತರಾಷ್ಟ್ರೀಯ ತಾರೆ ಪ್ರಿಯಾಂಕಾ ಚೋಪ್ರಾ (Priyanka Chopra)2003 ರ 'ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇಂದು ಆಕೆ ಸುಮಾರು 599 ಕೋಟಿ ಮೌಲ್ಯದ ಆಸ್ತಿಯ ಒಡತಿ. 2000ನೇ ಇಸವಿಯಲ್ಲಿ ವಿಶ್ವ ಸುಂದರಿ ಪಟ್ಟವನ್ನು ಗೆದ್ದಿದ್ದ ಪ್ರಿಯಾಂಕಾ ಚೋಪ್ರಾ ಮಾಡೆಲ್ ಆಗಿ ತನ್ನ ಮೊದಲ ಕೆಲಸಕ್ಕೆ 5000 ರೂಪಾಯಿಗಳನ್ನು ಪಡೆದಿದ್ದರು ಆದರೆ ಇಂದು ಅವರು ಒಂದು ಚಿತ್ರಕ್ಕೆ 10-14 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ.

ಅನುಷ್ಕಾ ಶರ್ಮಾ (Anushka Sharma)ಮಾಡೆಲಿಂಗ್ ಲೋಕದಿಂದ ಬಾಲಿವುಡ್‌ಗೆ ಬಂದಿದ್ದಾರೆ. ಮೊದಲ ಮಾಡೆಲಿಂಗ್ ಯೋಜನೆಗೆ ಅವರು 4000 ರೂಗಳನ್ನು ಪಡೆದರು. 2008 ರಲ್ಲಿ  ರಬ್ ನೇ ಬನಾ ದಿ ಜೋಡಿ  ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅನುಷ್ಕಾ ಶರ್ಮಾ, ಇಂದು ಪ್ರತಿ ಚಿತ್ರಕ್ಕೆ ಸುಮಾರು 8- 12 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. ಪ್ರಸ್ತುತ ಅನುಷ್ಕಾ ಸುಮಾರು 255 ಕೋಟಿ ಮೌಲ್ಯದ ಆಸ್ತಿಯ ಒಡತಿ.

2001 ರ ಅಜ್ನಾಬಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಬಿಪಾಶಾ ಬಸು (Bipasha Basu)ಅವರು ಚಲನಚಿತ್ರಗಳಿಗೆ ಸೇರುವ ಮೊದಲು ಮಾಡೆಲ್ ಆಗಿದ್ದರು ಮತ್ತು ಅವರ ಆರಂಭಿಕ ದಿನಗಳಲ್ಲಿ, ಅವರು ಪ್ರತಿ ಪ್ರಾಜೆಕ್ಟ್‌ಗೆ 1000 ರಿಂದ 1500 ರೂಪಾಯಿಗಳನ್ನು ಪಡೆಯುತ್ತಿದ್ದರು. ಬಿಪಾಶಾ ಬಸು ಇಂದು ಪ್ರತಿ ಚಿತ್ರಕ್ಕೆ ಸುಮಾರು 2.5-3 ಕೋಟಿ ಚಾರ್ಜ್ ಮಾಡುತ್ತಾರೆ. ಅವರು ಸುಮಾರು 113 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

Latest Videos

click me!