Cannes ರೆಡ್ ಕಾರ್ಪೆಟ್ ಮೇಲೆ ಯಾರು ಬೆಸ್ಟ್‌? Aishwarya Rai ಅಥವಾ Deepika Padukone

Published : May 20, 2022, 04:58 PM IST

ಕೇನ್ಸ್ ಚಲನಚಿತ್ರೋತ್ಸವ 2022 ರಲ್ಲಿ (Cannes Film Festival 2022), ಪ್ರಪಂಚದಾದ್ಯಂತದ ಸೆಲೆಬ್ರೆಟಿಗಳು  ತಮ್ಮ ಲುಕ್‌  ಮತ್ತು ಸ್ಟೈಲ್‌ ಕಾರಣದಿಂದ  ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನಿಂದ ಹಾಲಿವುಡ್‌ವರೆಗಿನ ಸೆಲೆಬ್ರಿಟಿಗಳು ತಮ್ಮ ಸ್ಟೈಲಿಶ್ ಮತ್ತು ಗ್ಲಾಮರಸ್ ಲುಕ್‌ನೊಂದಿಗೆ ಈವೆಂಟ್‌ನ ರೆಡ್ ಕಾರ್ಪೆಟ್ ಅನ್ನು ತಲುಪುತ್ತಿದ್ದಾರೆ. ನಿನ್ನೆ ಸಂಜೆಯೂ ಕೇನ್ಸ್‌ನಲ್ಲಿ  ಐಶ್ವರ್ಯಾ ರೈ (Aishwarya Rai) ಮತ್ತು ದೀಪಿಕಾ ಪಡುಕೋಣೆ  (Deepika Padukone) ತಮ್ಮ ಲುಕ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇಬ್ಬರೂ ನಟಿಯರ ಸಾಕಷ್ಟು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  

PREV
18
Cannes ರೆಡ್ ಕಾರ್ಪೆಟ್ ಮೇಲೆ ಯಾರು ಬೆಸ್ಟ್‌?  Aishwarya Rai ಅಥವಾ  Deepika Padukone

ಐಶ್ವರ್ಯಾ ರೈ ಮತ್ತು ದೀಪಿಕಾ ಪಡುಕೋಣೆ ಬಹಳ ಸಮಯದಿಂದ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ತಮ್ಮ ಛಾಪು  ಮೂಡಿಸಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಐಶ್ವರ್ಯ ರೈ ಬಚ್ಚನ್ ಕೇನ್ಸ್‌ನಲ್ಲಿ 3 ನೇ ದಿನದಂದು ತಮ್ಮ ಡಿಸೈನರ್ ಉಡುಪಿನಲ್ಲಿ ಅದ್ಭುತ ಪ್ರವೇಶ ಮಾಡಿದರು.

28

ಐಶ್ವರ್ಯಾ ರೈ ಕಳೆದ 19 ವರ್ಷಗಳಿಂದ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಗುರುವಾರ ಐಶ್ವರ್ಯಾ ರೈ ಕ್ಯಾನೆಸ್‌ನ ರೆಡ್ ಕಾರ್ಪೆಟ್ ಮೇಲೆ ನಡೆದ ತಕ್ಷಣ, ಎಲ್ಲಾ ಕ್ಯಾಮೆರಾಗಳು ಅವರ ಕಡೆಗೆ ತಿರುಗಿದವು. ಛಾಯಾಗ್ರಾಹಕರನ್ನು ನಿರಾಸೆಗೊಳಿಸದೆ ನಟಿ ಸಖತ್ತಾಗಿ ಪೋಸ್ ನೀಡಿದರು.

38

ಐಶ್ವರ್ಯಾ ರೈ ಬಚ್ಚನ್ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಎರಡನೇ ಲುಕ್‌ನಲ್ಲಿ ಕಾಣಿಸಿಕೊಂಡರು. ಕೇನ್ಸ್ ರೆಡ್ ಕಾರ್ಪೆಟ್‌ನ ಅನುಭವಿ ಆಶ್, ಡಿಸೈನರ್ ಗೌರವ್ ಗುಪ್ತಾ ಅವರ ವಿಶಿಷ್ಟ ಶೈಲಿಯ ಆರ್ಕಿಟೆಕ್ಚರಲ್‌ ಗೌನ್‌ನಲ್ಲಿ ಆಗಮಿಸಿದರು. 

48

ಐಶ್ವರ್ಯಾ ರೈ ಈ ಸಮಯದಲ್ಲಿ ಕನಿಷ್ಠ ಆಭರಣಗಳು, ಸಾಫ್ಟ್‌ ಮೇಕ್ಅಪ್ ಮತ್ತು ಸರಳವಾದ ಕೇಶ ವಿನ್ಯಾಸದೊಂದಿಗೆ  ರೆಡ್‌ ಕಾರ್ಪೆಟ್‌ ಪ್ರವೇಶಿಸಿದರು. ಆರ್ಮಗೆಡನ್ ಟೈಮ್‌ನ ಪ್ರಥಮ ಪ್ರದರ್ಶನದಲ್ಲಿ ಐಶ್ವರ್ಯಾ ರೈ ಬಚ್ಚನ್ ಪೆಸ್ಟಲ್‌ ಪಿಂಕ್‌  ಬಣ್ಣದ ಗೌನ್‌ನಲ್ಲಿ  ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿಕೊಂಡರು. 

58

ದೀಪಿಕಾ ಪಡುಕೋಣೆ ಪೆಪ್ಲಮ್ ಟಾಪ್ ಮತ್ತು  ದೊಡ್ಡ ಫ್ಲೋಯಿಂಗ್ ಸ್ಕರ್ಟ್‌ ಹೊಂದಿದ ಲೂಯಿಸ್ ವಿಟಾನ್  ಗೌನ್‌ನಲ್ಲಿ  ಧರಿಸಿ ಮೇ 19 ರಂದು ಫ್ರೆಂಚ್ ರಿವೇರಿಯಾದಲ್ಲಿ ರೆಡ್ ಕಾರ್ಪೆಟ್‌ಗೆ ಎಂಟ್ರಿ ಕೊಟ್ಟರು.
 

68

 ಅವರು ಸೊಗಸಾದ ಕಾರ್ಟಿಯರ್ ನೆಕ್ಲೇಸ್ ಮತ್ತು ಪೋನಿಟೇಲ್‌ ಜೊತೆ ಲುಕ್‌ ಪೂರ್ಣಗೊಳಿಸಿದ್ದರು. ದೀಪಿಕಾ ಪಡುಕೋಣೆ   ಅವರ ಬ್ಯಾಕ್‌ಲೆಸ್‌  ಗೌನ್ ಮತ್ತು ವಜ್ರದ ನೆಕ್ಲೇಸ್ ಎಲ್ಲರನ್ನೂ ಆಕರ್ಷಿಸಿತ್ತು.

78

3 ನೇ ದಿನದಂದು  ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ದೀಪಿಕಾ ಪಡುಕೋಣೆ ಅವರ ಬೋಲ್ಡ್ ಲುಕ್ ನೋಡುಗರ ಕಣ್ಮನ ಸೆಳೆಯುವಂತಿತ್ತು. ಆ ಸಮಯದಲ್ಲಿ ಅವರು ಬ್ರಾಲೆಸ್ ಕೆಂಪು ಗೌನ್ ಧರಿಸಿದ್ದರು.


 

88

ಬೋಲ್ಡ್ ರೆಡ್ ಗೌನ್ ಧರಿಸಿ ಕೇನ್ಸ್ ನ ರೆಡ್ ಕಾರ್ಪೆಟ್ ಮೇಲೆ ದೀಪಿಕಾ ಪಡುಕೋಣೆ ತಲುಪಿದ ತಕ್ಷಣ ಎಲ್ಲರ ಕಣ್ಣು ಆಕೆಯ ಮೇಲೆ ನೆಟ್ಟಿತ್ತು. ಈ ಸಮಯದಲ್ಲಿ ದೀಪಿಕಾ ಪಡುಕೋಣೆ ತಮ್ಮ ಕೂದಲನ್ನು ವಿಭಿನ್ನ ಶೈಲಿಯಲ್ಲಿ ಕ್ಯಾರಿ ಮಾಡಿದ್ದರು.

Read more Photos on
click me!

Recommended Stories