ಮತ್ತೆ ಮದುವೆಯಾಗುತ್ತಿರುವ ಗಾಯಕಿ Kanika Kapoor ಮೆಹಂದಿ ಫೋಟೋಗಳು

Published : May 20, 2022, 04:56 PM IST

ಬಾಲಿವುಡ್ ಗಾಯಕಿ ಕನಿಕಾ ಕಪೂರ್ (Kanika Kapoor)  ಮತ್ತೊಮ್ಮೆ ವಧು ಆಗಲಿದ್ದಾರೆ. ಮೂರು ಮಕ್ಕಳ ತಾಯಿಯಾಗಿರುವ ವಿಚ್ಛೇದಿತ ಕನಿಕಾ ಶುಕ್ರವಾರ ತನ್ನ ಪ್ರೇಯಸಿ ಗೌತಮ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಿನ್ನೆ ಸಂಜೆ, 43 ವರ್ಷದ ಗಾಯಕಿ ಕನಿಕಾ ಅವರ ಮೆಹಂದಿ ಸಮಾರಂಭವನ್ನು ಆಯೋಜಿಸಲಾಗಿತ್ತು, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಕನಿಕಾ  ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ  ಮೆಹಂದಿ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ತುಂಬಾ ಸಂತೋಷದಿಂದ ಕಾಣುತ್ತಿದ್ದಾರೆ.   

PREV
17
ಮತ್ತೆ ಮದುವೆಯಾಗುತ್ತಿರುವ  ಗಾಯಕಿ  Kanika Kapoor ಮೆಹಂದಿ ಫೋಟೋಗಳು

ಫೋಟೋಗಳ ಜೊತೆ  ಕನಿಕಾ ಕಪೂರ್ ಅವರು ಜಿ  ಜೊತೆ ಕೆಂಪು ಬಣ್ಣದ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ ಮತ್ತು  ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಕ್ಯಾಪ್ಷನ್‌ ನೀಡಿದ್ದಾರೆ. 

27

ಕನಿಕಾ ಕಪೂರ್ ಅವರ ಮದುವೆಯ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಿದ್ದವು. ಕುಟುಂಬ ಸದಸ್ಯರನ್ನು ಹೊರತುಪಡಿಸಿ, ಕೆಲವು ವಿಶೇಷ ಸ್ನೇಹಿತರು ಅವರ ಮದುವೆಯಲ್ಲಿ ಭಾಗವಹಿಸುತ್ತಿದ್ದಾರೆ.ಕನಿಕಾ ಕಪೂರ್ ಈ ಹಿಂದೆ ಹಲ್ದಿ ಸಮಾರಂಭವನ್ನು ಹೊಂದಿದ್ದರು. 


 

37

ನಂತರ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದೇ ಸಮಯದಲ್ಲಿ, ವರದಿಗಳ ಪ್ರಕಾರ ಅವರು ಮೇ 20 ರಂದು ಸಪ್ತಪದಿ ತುಳಿಯಲಿದ್ದಾರೆ ಆದರೆ, ಅದರ ಬಗ್ಗೆ ಸರಿಯಾದ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

47

ಕನಿಕಾ ಕಪೂರ್ ಅವರು ತಮ್ಮ ಮೆಹಂದಿ ಸಮಾರಂಭದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೆಹಂದಿ ಸಮಾರಂಭದಲ್ಲಿ, ವರ ಗೌತಮ್ ತನ್ನ ವಧು ಕನಿಕಾ ಕಪೂರ್‌ಗೆ ಮಂಡಿ  ಮೇಲೆ ಕುಳಿತು ಪ್ರಪೋಸ್ ಮಾಡಿದರು. ಈ ವೇಳೆ ಗೌತಮ್ ಕನಿಕಾಗೆ ಗುಲಾಬಿ ಹೂಗುಚ್ಛ ನೀಡಿದರು.


 

57

ಕನಿಕಾ ಕಪೂರ್ ತನ್ನ ಮೆಹಂದಿ ಸಮಾರಂಭದಲ್ಲಿ ತುಂಬಾ ಉತ್ಸುಕಳಾಗಿ ಕಾಣಿಸಿಕೊಂಡಿದ್ದು ತಮ್ಮ ಭಾವಿ ಪತಿ  ಗೌತಮ್ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಕಾನಿಕಾ ಕಪೂರ್ ಎಲ್ಲರ ಮುಂದೆ ಭಾವಿ ಪತಿ ಗೌತಮ್ ಅವರನ್ನು ಚುಂಬಿಸುತ್ತಿದ್ದರು.

67

ಈ ವೇಳೆ ಕನಿಕಾ ಕಪೂರ್ ಅವರು ಸೀ ಗ್ರೀನ್‌ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು.  ಕನಿಕಾ ಕಪೂರ್ ಅವರ ನಿಶ್ಚಿತ ವರ ಗೌತಮ್ ಅನಿವಾಸಿ ಭಾರತೀಯ ಉದ್ಯಮಿ ಮತ್ತು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು  ಮದುವೆಯ ಎಲ್ಲಾ ವಿಧಿವಿಧಾನಗಳನ್ನು ಲಂಡನ್ ನಲ್ಲೇ ನಡೆಸಲಾಗುತ್ತಿದೆ.

77

ಕನಿಕಾ ಕಪೂರ್ 1998 ರಲ್ಲಿ ಉದ್ಯಮಿ ರಾಜ್ ಚಂದೌಕ್ ಅವರನ್ನು ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಕೆಲವು ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ, ದಂಪತಿಗಳು 2012 ರಲ್ಲಿ ವಿಚ್ಛೇದನ ಪಡೆದರು. ಇದಾದ ಬಳಿಕ ಕನಿಕಾ ತನ್ನ ಮಕ್ಕಳೊಂದಿಗೆ ಲಕ್ನೋದಲ್ಲಿರುವ ಪೋಷಕರ ಮನೆಗೆ ತೆರಳಿದ್ದಾರೆ.

Read more Photos on
click me!

Recommended Stories