ಗಂಡನ ಗೈರು, ಅಪ್ಪನ ನೆನೆಯುತ್ತಾ ಮಗಳ ಹುಟ್ಟುಹಬ್ಬ ಆಚರಿಸಿದ ಐಶ್ವರ್ಯಾ ರೈ

Published : Nov 21, 2024, 11:46 AM ISTUpdated : Nov 21, 2024, 11:48 AM IST

ಬಾಲಿವುಡ್‌ ನಟಿ ಐಶ್ವರ್ಯಾ ರೈ  ಇತ್ತೀಚೆಗೆ ತಮ್ಮ ಮಗಳು ಆರಾಧ್ಯಳ 13ನೇ ಹುಟ್ಟುಹಬ್ಬವನ್ನು ಪತಿ ಅನುಪಸ್ಥಿತಿಯಲ್ಲಿ ಅಮ್ಮ ಬ್ರಂದಾ ರೈ ಜೊತೆ ಜೊತೆ ಆಚರಿಸಿದ್ದು ಇದೇ ವೇಳೆ ತಮ್ಮ ಪ್ರೀತಿಯ ತಂದೆ  ಕೃಷ್ಣರಾಜ್ ರೈ ಅವರನ್ನು ಸ್ಮರಣೆ ಮಾಡಿದ್ದಾರೆ. 

PREV
15
ಗಂಡನ ಗೈರು, ಅಪ್ಪನ ನೆನೆಯುತ್ತಾ ಮಗಳ ಹುಟ್ಟುಹಬ್ಬ ಆಚರಿಸಿದ ಐಶ್ವರ್ಯಾ ರೈ

ನಟಿ ಐಶ್ವರ್ಯಾ ರೈ ಮಗಳು  ಆರಾಧ್ಯಳ ಹುಟ್ಟುಹಬ್ಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆರಾಧ್ಯ ಈ ವರ್ಷ 13ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ಅವರ ವಿಚ್ಛೇದನದ ಬಗ್ಗೆ ನಿರಂತರ ವದಂತಿಗಳು ಹರಿದಾಡುತ್ತಿರುವ ನಡುವೆ ಅಭಿಷೇಕ್ ಬಚ್ಚನ್ ಮಗಳ ಹುಟ್ಟುಹಬ್ಬಕ್ಕೆ ಗೈರಾಗಿದ್ದಾರೆ. ಅಲ್ಲದೇ ಮಗಳ ಹುಟ್ಟುಹಬ್ಬಕ್ಕೆ ಅವರು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿರಲಿಲ್ಲ, ಆದರೆ ಐಶ್ವರ್ಯಾ ರೈ ತನ್ನ ಪ್ರೀತಿಯ ಪುತ್ರಿಯ ಹುಟ್ಟುಹಬ್ಬವನ್ನು ಅಮ್ಮ ಬೃಂದಾ ರೈ ಜೊತೆ ಸೇರಿ ಆಚರಿಸಿದ್ದು, ಮಗಳಿಗೆ ಶುಭ ಹಾರೈಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

25

ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಅವರು, 'ನನ್ನ ಜೀವನದ ಶಾಶ್ವತ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು ಪ್ರೀತಿಯ ಅಪ್ಪ-ಅಜ್ಜ ಮತ್ತು ನನ್ನ ಪ್ರೀತಿಯ ಆರಾಧ್ಯ ನನ್ನ ಹೃದಯ... ನನ್ನ ಆತ್ಮ... ಎಂದಿಗೂ ಮತ್ತು ಮುಂದೆಯೂ' ಎಂದು ಬರೆದಿದ್ದಾರೆ. ಅವರು ತಮ್ಮ ಜೀವನದ ಶಾಶ್ವತ ಪ್ರೀತಿಯಾದ ಅಮ್ಮ ಹಾಗೂ ಮಗಳಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. 2017 ರಲ್ಲಿ ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ಅವರು ಕ್ಯಾನ್ಸರ್‌ನಿಂದ ನಿಧನರಾಗಿದ್ದರು.

35

ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯಳ 13ನೇ ಹುಟ್ಟುಹಬ್ಬದ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು,  ಆರಾಧ್ಯ ತನ್ನ ದಿವಂಗತ ಅಜ್ಜ ಕೃಷ್ಣರಾಜ್ ರೈ ಅವರ ಭಾವಚಿತ್ರಕ್ಕೆ ನಮಸ್ಕರಿಸುತ್ತಿರುವ ಚಿತ್ರ ಮತ್ತು ಐಶ್ವರ್ಯಾ  ಪುಟಾಣಿ ಆರಾಧ್ಯಳನ್ನು ಎತ್ತಿಕೊಂಡಿರುವ ಹಳೆಯ ಫೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಈ ಹುಟ್ಟುಹಬ್ಬದ ಆಚರಣೆಯಲ್ಲಿ ಐಶ್ ತಾಯಿ ಬೃಂದಾ ರೈ ಭಾಗಿಯಾಗಿದ್ದರು. ಐಶ್ವರ್ಯಾ ರೈ ಅವರು ತಮ್ಮ ತಂದೆಯ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದು, ಪ್ರತಿ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆಯಂದು ಅವರನ್ನು ಸದಾ ನೆನೆಯುತ್ತಿರುತ್ತಾರೆ. 

45

ಆದರೆ ಆರಾಧ್ಯಾ ರೈ ತಂದೆ ಅಭಿಷೇಕ್ ಬಚ್ಚನ್ ಮತ್ತು ಬಚ್ಚನ್ ಕುಟುಂಬದ ಇತರ ಸದಸ್ಯರು ಈ ಆಚರಣೆಯಲ್ಲಿ ಇಲ್ಲದಿರುವುದನ್ನು ಅಭಿಮಾನಿಗಳು ಬೇಗನೆ ಗಮನಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಅವರ ಗೈರುಹಾಜರಿಯ ಬಗ್ಗೆಅನೇಕರು ಪ್ರಶ್ನಿಸಿದ್ದಾರೆ. ಕೆಲವರು ಐಶ್ವರ್ಯಾ ಮತ್ತು ಅಭಿಷೇಕ್ ಅವರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂದು ಊಹೆ ಮಾಡಿದರೆ ಮತ್ತೆ ಕೆಲವರು ಅಭಿಷೇಕ್ ಬಚ್ಚನ್ ಅವರನ್ನು ದೂರಿದ್ದಾರೆ. 

55

ವೃತ್ತಿಬಗ್ಗೆ ಹೇಳುವುದಾದರೆ, ಐಶ್ವರ್ಯಾ ರೈ ಬಚ್ಚನ್ ಅವರು ಕೊನೆಯದಾಗಿ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್: 1 ರಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿಯನ್ನು ಆಧರಿಸಿದ ಈ ಐತಿಹಾಸಿಕ ಸಿನಿಮಾದಲ್ಲಿ ಅವರು ದ್ವಿ ಪಾತ್ರಗಳಲ್ಲಿ ನಟಿಸಿದ್ದಾರೆ, ಅವರ ಅಭಿನಯಕ್ಕೆ ವಿಮರ್ಶಾತ್ಮಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದ ಯಶಸ್ಸು ಭಾರತೀಯ ಸಿನಿಮಾದ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿದೆ.

ಇದನ್ನು ಓದಿ: ಐಶ್ವರ್ಯಾ ರೈ ಡೆಬ್ಯುಟ್ ಸಿನಿಮಾ ಬಾಲಿವುಡ್ ಅಲ್ಲ: ಮೋಹನ್‌ಲಾಲ್ ಜೊತೆಗಿನ ಈ ಸಿನಿಮಾ

 

Read more Photos on
click me!

Recommended Stories