ಅತ್ತೆ ಜಯಾ ಬಚ್ಚನ್‌ಗೆ ಶತ್ರು, ಸೊಸೆ ಐಶ್ವರ್ಯಾಗೆ ಕ್ಲೋಸ್‌ ಫ್ರೆಂಡ್‌!

Suvarna News   | Asianet News
Published : Nov 02, 2021, 07:03 PM IST

ಬಚ್ಚನ್ (Bachcchan) ಕುಟುಂಬದ ಸೊಸೆ ಐಶ್ವರ್ಯಾ ರೈ (Aishwarya Rai) 48 ವರ್ಷ ಪೂರೈಸಿದ್ದಾರೆ ನವೆಂಬರ್ 1, 1973 ರಂದು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯಾ, 1997 ರ ತಮಿಳು ಚಿತ್ರ ಇರುವರ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಐಶ್ವರ್ಯಾ 24 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ಈ ಸಮಯದಲ್ಲಿ ಅವರು ಬಾಲಿವುಡ್‌ನಲ್ಲಿ ಅನೇಕ ಉತ್ತಮ ಸ್ನೇಹಿತರನ್ನು ಹೊಂದಿದ್ದಾರೆ. ಆದರೆ, ಐಶ್ವರ್ಯಾ ಅವರ ಫ್ರೆಂಡ್ ಲಿಸ್ಟ್‌ನಲ್ಲಿರುವ ಒಬ್ಬರು  ಅವರ ಅತ್ತೆ ಜಯಾ ಬಚ್ಚನ್‌ (Jaya Bachchan) ಅವರಿಗೆ ಶತ್ರು.  ಅಷ್ಟಕ್ಕೂ ಯಾರದು?  

PREV
18
ಅತ್ತೆ ಜಯಾ ಬಚ್ಚನ್‌ಗೆ ಶತ್ರು, ಸೊಸೆ ಐಶ್ವರ್ಯಾಗೆ ಕ್ಲೋಸ್‌ ಫ್ರೆಂಡ್‌!

ರೇಖಾ: 
ಅಮಿತಾಭ್ ಬಚ್ಚನ್ ಜೊತೆಗಿನ ಅಫೇರ್ ಸುದ್ದಿಯಿಂದ ರೇಖಾ ಮತ್ತು ಬಿಗ್ ಬಿ ಪತ್ನಿ ಜಯಾ ಬಚ್ಚನ್ ನಡುವೆ ಸಂಬಂಧ ಸರಿಯಿಲ್ಲ. ಸಾರ್ವಜನಿಕ ಫಂಕ್ಷನ್‌ಗಳಲ್ಲಿ ಸಹ ಅಮಿತಾಬ್ ಬಚ್ಚನ್ ಮತ್ತು ಜಯಾ ಇಬ್ಬರೂ ರೇಖಾ ಅವರೊಂದಿಗೆ ತೀರಾ ಅಪರಿಚಿತರಂತೆ ನೆಡೆದುಕೊಳ್ಳುವುದು ನೋಡಿದ್ದೇವೆ. ಇದರ ಹೊರತಾಗಿಯೂ, ರೇಖಾ ಐಶ್ವರ್ಯಾ ರೈ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆವಾರ್ಡ್‌ ಫಂಕ್ಷನ್‌ನಲ್ಲಿ  ರೇಖಾರಿಂದ ಪ್ರಶಸ್ತಿ ಸ್ವೀಕರಿಸುವಾಗ ಐಶ್ವರ್ಯಾ ರೇಖಾರನ್ನು ಅಮ್ಮ ಎಂದು ಎಲ್ಲರ ಮುಂದೆ ಕರೆದರು.
 

28

ಮಾಧುರಿ ದೀಕ್ಷಿತ್:

ದೇವದಾಸ್ ಚಿತ್ರದಲ್ಲಿ ಐಶ್ವರ್ಯಾ ರೈ ಜೊತೆ ಕೆಲಸ ಮಾಡಿದ್ದ ಮಾಧುರಿ ದೀಕ್ಷಿತ್ ಕೂಡ ಅವರ ಆತ್ಮೀಯ ಸ್ನೇಹಿತರಲ್ಲೊಬ್ಬರು. ಮಾಧುರಿ ಚಂದ್ರಮುಖಿ ಪಾತ್ರವನ್ನು ನಿರ್ವಹಿಸಿದ್ದರೆ, ಆಶ್  ಪಾರೋ ಪಾತ್ರವನ್ನು ನಿರ್ವಹಿಸಿದ್ದಾರೆ. ಕೆಲವು ದಿನಗಳ ಹಿಂದೆ, ಇಬ್ಬರೂ ಈವೆಂಟ್‌ನಲ್ಲಿ ಕಾಣಿಸಿಕೊಂಡರು, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.


 


 

38

ಪ್ರೀತಿ ಜಿಂಟಾ:

ಡಿಂಪಲ್ ಗರ್ಲ್ ಎಂದು ಜನಪ್ರಿಯವಾಗಿರುವ ಪ್ರೀತಿ ಜಿಂಟಾ ಅವರೊಂದಿಗೆ ಐಶ್ವರ್ಯಾ ರೈ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಮತ್ತು ಪ್ರೀತಿ ಜಿಂಟಾ ಇಂದಿನಿಂದಲ್ಲ ಆದರೆ ಕಳೆದ ಹಲವು ವರ್ಷಗಳಿಂದ ಸ್ನೇಹಿತರು ಹಾಗೂ ಅವರ ಫ್ರೆಂಡ್‌ಶಿಪ್‌ ಕಾಲಾನಂತರದಲ್ಲಿ ಬಲವಾಗಿದೆ.

48

ಸಂಜಯ್ ಲೀಲಾ ಬನ್ಸಾಲಿ:

ದೇವದಾಸ್ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಅವರ ಜೊತೆ  ಐಶ್ವರ್ಯಾ ಕ್ಲೋಸ್‌ ಫ್ರೆಂಡ್‌ಶಿಪ್‌ ಹೊಂದಿದ್ದಾರೆ. ಬನ್ಸಾಲಿ ಮೊದಲು ಐಶ್ವರ್ಯಾಗೆ 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಿದರು. ಐಶ್ವರ್ಯಾ ಅಭಿನಯದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಅಂದಿನಿಂದ ಇಬ್ಬರ ನಡುವೆ ಉತ್ತಮ ಸ್ನೇಹವಿದೆ.

58

ಮಣಿರತ್ನಂ:

ಐಶ್ವರ್ಯಾ ರೈ ಬಚ್ಚನ್ ಮತ್ತು ಫೇಮಸ್‌ ಡೈರೆಕ್ಟರ್‌ ಮಣಿರತ್ನಂ ಕೂಡ ಒಳ್ಳೆಯ ಸ್ನೇಹಿತರು. ಮಣಿರತ್ನಂ ನಿರ್ದೇಶನದ 'ಇರುವರ್' ಚಿತ್ರದ ಮೂಲಕ ಐಶ್ವರ್ಯಾ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಇಬ್ಬರೂ
ಉತ್ತಮ ಸ್ನೇಹಿತರು. ಐಶ್ವರ್ಯಾ ರೈ ಶೀಘ್ರದಲ್ಲೇ ಮಣಿರತ್ನಂ ಚಿತ್ರ 'ಪೊನ್ನಿಯನ್ ಸೆಲ್ವನ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 

68

ಜಿರ್ಕ್ ಮಾರ್ಕರ್:

ಪ್ರಖ್ಯಾತ ಮಾನಸಿಕ ಚಿಕಿತ್ಸಕ ಮತ್ತು ಲೇಖಕ ಜಿರಾಕ್ ಮಾರ್ಕರ್ ಐಶ್ವರ್ಯಾ ರೈ ಬಚ್ಚನ್ ಅವರ ಬೆಸ್ಟ್ ಫ್ರೆಂಡ್‌ ಲಿಸ್ಟ್‌ನಲ್ಲಿದ್ದಾರೆ. ಸಂದರ್ಶನವೊಂದರಲ್ಲಿ, ಐಶ್ವರ್ಯಾ ಅವರು ಜಿರಾಕ್ ಪ್ರತಿ ಕಷ್ಟ ಮತ್ತು ಸುಖದ ಸಮಯದಲ್ಲಿ
ಹೇಗೆ ತನ್ನೊಂದಿಗೆ ನಿಂತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

78

ದೀಪಿಕಾ ಪಡುಕೋಣೆ:

ದೀಪಿಕಾ ಪಡುಕೋಣೆ ಮತ್ತು ಐಶ್ವರ್ಯ ರೈ ಬಚ್ಚನ್ ಕೂಡ ಒಳ್ಳೆಯ ಸ್ನೇಹಿತರು. ಮದುವೆಯ ನಂತರ ದೀಪಿಕಾ ಪಡುಕೋಣೆ ತಮ್ಮ ಆರತಕ್ಷತೆ ಪಾರ್ಟಿಗೆ ಐಶ್ವರ್ಯಾ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದರು. ಐಶ್ವರ್ಯಾ ಕೂಡ ಇಡೀ ಕುಟುಂಬದೊಂದಿಗೆ ಆಗಮಿಸಿದ್ದರು.


 

88

ರಾಣಿ ಮುಖರ್ಜಿ:

ಐಶ್ವರ್ಯಾ ಅವರ ಆತ್ಮೀಯ ಸ್ನೇಹಿತರಲ್ಲಿ ರಾಣಿ ಮುಖರ್ಜಿ ಕೂಡ ಒಬ್ಬರು. ಚಲ್ತೇ ಚಲ್ತೆ ಚಿತ್ರದಲ್ಲಿ ರಾಣಿ ಮುಖರ್ಜಿ ಬದಲಿಗೆ ಐಶ್ವರ್ಯಾ ನಟಿಸಿದರು. ಆ ವೇಳೆ ಇಬ್ಬರ ನಡುವೆ ಮನಸ್ತಾಪ ಉಂಟಾಯಿತು ಎಂದು ವರದಿಯಾಗಿತ್ತು. ಆದರೆ  ಐಶ್ವರ್ಯಾ ಸಿನಿಮಾದಿಂದ ಹೊರಬಿದ್ದ ನಂತರ ರಾಣಿಯ ಎಂಟ್ರಿ ಆಗಿತ್ತು.
 
 

Read more Photos on
click me!

Recommended Stories