Aishwarya Rai Birthday: ಡಿಫರೆಂಟ್‌ ಲುಕ್‌ ಫೋಟೋ ಹಂಚಿಕೊಂಡ ಅಭಿಷೇಕ್‌!

Suvarna News   | Asianet News
Published : Nov 02, 2021, 06:59 PM IST

ಬಾಲಿವುಡ್‌ (Bollywood) ನಟಿ, ಮಾಜಿ ಮಿಸ್‌ ವಲ್ಡ್‌ (Miss World) ಐಶ್ವರ್ಯಾ ರೈ (Aishwarya Rai) 48ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪತಿ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಮಗಳು ಆರಾಧ್ಯ ಬಚ್ಚನ್ (Aaradhya Bachchan) ಜೊತೆ ಐಶ್ವರ್ಯಾ ತಡರಾತ್ರಿ ತಮ್ಮ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡರು. ಅಭಿಷೇಕ್ ಪತ್ನಿಯ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ಸಖತ್‌ ವೈರಲ್‌ ಆಗಿವೆ.  

PREV
18
Aishwarya Rai Birthday: ಡಿಫರೆಂಟ್‌ ಲುಕ್‌  ಫೋಟೋ ಹಂಚಿಕೊಂಡ ಅಭಿಷೇಕ್‌!

ಅಭಿಷೇಕ್‌ ಬಚ್ಚನ್‌ ಪೋಸ್ಟ್‌ ಮಾಡಿರುವ  ಐಶ್ವರ್ಯಾ ರೈ ಬರ್ತ್‌ಡೇಯ ಫೋಟೋದಲ್ಲಿ ಅವರು ತುಂಬಾ ಡಿಫೇರೆಟ್‌ ಲುಕ್‌ನಲ್ಲಿ  ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ, ಐಶ್ವರ್ಯಾ ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ಪೂಲ್‌ ಬಳಿ
ಕುಳಿತಿದ್ದಾರೆ ಮತ್ತು ಅವರು ಈ ಸಮಯದಲ್ಲಿ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. 

28

ಅಭಿಷೇಕ್  ಪತ್ನಿ ಐಶ್ವರ್ಯಾರ ಫೋಟೋ ಪೋಸ್ಟ್ ಮಾಡಿ - Appy Birthday Wifey! Thank you for being, you. You complete us. We love you..' ಎಂದು ಕ್ಯಾಪ್ಷನ್‌ ನೀಡಿದ್ದಾರೆ. 

38

ಆಶ್ ಅವರು ತಮ್ಮ ಹುಟ್ಟುಹಬ್ಬವನ್ನು ತುಂಬಾ ಸಿಂಪಲ್‌ ಆಗಿ  ಆಚರಿಸಿಕೊಂಡರು. ಈ ಸಮಯದಲ್ಲಿ ಪತಿ ಅಭಿಷೇಕ್‌ ಬಚ್ಚನ್‌ ಮತ್ತು ಮಗಳು ಆರಾಧ್ಯ ಬಚ್ಚನ್‌ ಜೊತೆ ಐಶ್ವರ್ಯಾ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೆಟ್‌ ಮಾಡಿಕೊಂಡರು.

48

ಐಶ್ವರ್ಯಾ ರೈ ಅವರು ಕಳೆದ 14 ವರ್ಷಗಳಿಂದ ಬಚ್ಚನ್ ಫ್ಯಾಮಿಲಿಯ ಸೊಸೆಯಾಗಿದ್ದಾರೆ. ತನ್ನ ಕುಟುಂಬದ ಬಗ್ಗೆ ಮಾತನಾಡುತ್ತಾ, ಐಶ್ವರ್ಯಾ ರೈಗೆ ಯಾವಾಗಲೂ ಅತ್ತೆಯ ಬೆಂಬಲ ತಮಗಿದೆ ಎನ್ನುತ್ತಾರೆ. ಪತಿ ಅಭಿಷೇಕ್ ಬಚ್ಚನ್ ಅತ್ತೆಯೊಂದಿಗೆ ಯಾವಾಗಲೂ ಅವಳ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. 


 

58

ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿ, ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಐಶ್ವರ್ಯಾ ರೈ ಚಿತ್ರರಂಗದಿಂದ ದೂರವಿದ್ದರು. ಈಗಲೂ ಮಗಳ ಪೋಷಣೆಗೆ ಹೆಚ್ಚಿನ ಗಮನ ನೀಡುತ್ತಾ, ವರ್ಷಕ್ಕೆ ಒಂದು ಸಿನಿಮಾ ಮಾತ್ರ ಮಾಡುತ್ತಾರೆ. ಆದಾಗ್ಯೂ, ಆಕೆಯ ಅತ್ತೆ-ಮಾವಂದಿರು ಆಕೆಯ ಪ್ರತಿಯೊಂದೂ ನಿರ್ಧಾರವನ್ನು ಸಪೋರ್ಟ್‌ ಮಾಡುತ್ತಾರೆ.

68

ಐಶ್ವರ್ಯಾ ಮತ್ತು ಅಭಿಷೇಕ್ ಮೊದಲ ಬಾರಿಗೆ 1997 ರಲ್ಲಿ ಚಿತ್ರದ ಸೆಟ್‌ವೊಂದರಲ್ಲಿ ಭೇಟಿಯಾದರು. ಇಬ್ಬರೂ ಮೊದಲು 2000ರಲ್ಲಿ ಧಾಯಿ ಅಕ್ಷರ್ ಪ್ರೇಮ್ ಮತ್ತು ನಂತರ 2003 ರಲ್ಲಿ ಕುಚ್ ನಾ ಕಹೋದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 

78

ನಂತರ 2005 ರಲ್ಲಿ ಬಂಟಿ ಔರ್ ಬಬ್ಲಿ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಪರಸ್ಪರ ಪರಿಚಯವಾದರು. 2004ರಲ್ಲಿ ಧೂಮ್ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಹತ್ತಿರವಾಗಿದ್ದರು. ಗುರು ಚಿತ್ರದ ಸಮಯದಲ್ಲಿ ಅಭಿಷೇಕ್ ಐಶ್ವರ್ಯಾ ರೈ ಅವರಿಗೆ  ಪ್ರಪೋಸ್‌ ಮಾಡಿದರು. ಮುಂಬೈಗೆ ಹಿಂದಿರುಗಿದ ನಂತರ ಇಬ್ಬರೂ ತುಂಬಾ ಗ್ರ್ಯಾಂಡ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡರು. ಏಪ್ರಿಲ್ 20, 2007 ರಂದು ಬಾಲಿವುಡ್‌ನ ಈ ಕೂಯಟ್ ಕಪಲ್ (cute couple of Bollywood) ದಾಂಪತ್ಯಕ್ಕೆ ಕಾಲಿಟ್ಟಿತು.

88

ಐಶ್ವರ್ಯಾ ರೈ ಅವರು ಈ ದಿನಗಳಲ್ಲಿ ತಮಿಳು ಸಿನಿಮಾ  ಪೊನ್ನಿಯನ್ ಸೆಲ್ವನ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಈ ಸಿನಿಮಾದಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು,  ಚಿತ್ರದ ಬಜೆಟ್ 500 ಕೋಟಿ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಅಭಿಷೇಕ್ ಬಚ್ಚನ್ ಅವರ ಮುಂಬರುವ ಸಿನಿಮಾಗಳು ಬಾಸ್ ಬಿಸ್ವಾಸ್ ಮತ್ತು ದಸ್ವಿ.

Read more Photos on
click me!

Recommended Stories