ಕಾನ್ 2023 ಫಿಲ್ಮ್ ಫೆಸ್ಟಿವಲ್ ಅದ್ದೂರಿಯಾಗಿ ನಡೆಯುತ್ತಿದೆ. ಈಗಾಗಲೇ ಪ್ರತಿಷ್ಠಿತ ಕಾನ್ ಫೆಸ್ಟಿವಲ್ ಪ್ರಾರಂಭವಾಗಿದ್ದು ಬಾಲಿವುಡ್‌ನ ಅನೇಕ ನಟಿಯರು ಮಿಂಚಿದ್ದಾರೆ. ಈ ಬಾರಿ ಅನೇಕ ಮಂದಿ ನಟಿಯರು ಮೊದಲ ಬಾರಿಗೆ ಖಾನ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟಿಯರು ನಟಿಯರು ವಿಭಿನ್ನ ಮತ್ತು ವಿಚಿತ್ರ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಕೆಲವೊಮ್ಮೆ ಅವರ ಲುಕ್ ಅಭಿಮಾನಿಗಳಿಗೆ ಅತಿರೇಕ ಎನಿಸಿದ್ದು ಇದೆ. ಅದರಲ್ಲೂ ಕಾನ್ ಫೆಸ್ಟಿವಲ್ ನಲ್ಲಿ ಮಿಂಚಿದ ಕೆಲವು ಹಿಗ್ಗಾಮುಗ್ಗ ಟ್ರೋಲ್ ಆಗಿದ್ದಾರೆ.
ನಟಿ ಊರ್ವಶಿ ರೌಟೆಲಾ ಈ ಬಾರಿಯ ಕಾನ್ ಫೆಸ್ಟಿವಲ್‌ನಲ್ಲಿ ವಿಚಿತ್ರವಾಗಿ ಕಾಣಿಸಿಕೊಳ್ಳುವ ಮೂಲಕ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ. ಹಸರು ಬಣ್ಣದ ಲಿಪ್ಸ್ಟಿಕ್ ಧರಿಸಿ ಊರ್ವಶಿ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿದ್ದಾರೆ.
ಊರ್ವಶಿ ಮೊದಲ ಬಾರಿಗೆ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದು ಕ್ಯಾಟ್ ವಾಕ್ ಮಾಡಿದ್ದಾರೆ. ಊರ್ವಶಿ ಐಶ್ವರ್ಯಾ ರೈ ಅವರನ್ನು ಕಾಪಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಐಶ್ವರ್ಯಾ ರೈ ಕೂಡ ಈ ಹಿಂದೆ ಕಾನ್ ಫೆಸ್ಟಿವಲ್‌ನಲ್ಲಿ ನೀಲಿ ಬಣ್ಣದ ಲಿಪ್ಸ್ಟಿಕ್ ಹಾಕಿ ವಾಕ್ ಮಾಡಿದ್ದರು. ಐಶ್ವರ್ಯಾ ವಿಭಿನ್ನವಾಗಿ ಸುಂದರವಾಗಿ ಕಂಗೊಳಿಸಿದ್ದರೂ ಲಿಪ್ಸ್ಟಿಕ್ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಇದೀಗ ಊರ್ವಶಿ ಕೂಡ ಐಶ್ವರ್ಯಾ ಅವರನ್ನು ಕಾಪಿ ಮಾಡಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.
ವಿಚಿತ್ರವಾಗಿ ಡ್ರೆಸಪ್ ಮಾಡಿಕೊಳ್ಳುವಲ್ಲಿ ನಟಿ ಶ್ರುತಿ ಹಾಸನ್ ಕೂಡ ಹಿಂದೆ ಇಲ್ಲ. ಅವರು ಕೂಡ ಅನೇಕ ಬಾರಿ ವಿಭಿನ್ನ ಗೆಟಪ್‌ನಲ್ಲಿ ಮಿಂಚಿದ್ದಾರೆ. ಕಪ್ಪು ಬಣ್ಣದ ಲಿಪ್ಸ್ಟಿಕ್ ಹಾಕಿ ಫೋಟೋಗೆ ಪೋಸ್ ನೀಡಿದ್ದರು. ಶ್ರುತಿ ಲುಕ್ ಕೂಡ ಟ್ರೋಲ್ ಆಗಿತ್ತು.
ಸಾರಾ ಅಲಿ ಖಾನ್ ಕೂಡ ಡಾರ್ಕ್ ಲಿಪ್ಸ್ಟಿಕ್ ಹಾಕಿ ಗಮನ ಸೆಳೆದಿದ್ದರು. ಆಗಾಗ ಪ್ರವಾಸಕ್ಕೆ ಹಾರುವ ನಟಿ ಸಾರಾ ಬೀಚ್ ನಲ್ಲಿ ನೀಲಿ ಬಣ್ಣದ ಲಿಪ್ಸ್ಟಿಕ್ ಹಾಕಿ ಕ್ಯಾಮರಾಗೆ ಪೋಸ್ ನೀಡಿದ್ದರು. ಮತ್ತೊಂದು ಫೋಟೋದಲ್ಲಿ ಕಪ್ಪು ನೀಲಿ ಬಣ್ಣದ ಲಿಪ್ಸ್ಟಿಕ್‌ನಲ್ಲಿ ಕಾಣಿಸಿಕೊಂಡಿದ್ದರು. ಸಾರಾ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.
ಸ್ಟೈಲಿಶ್ ಐಕಾನ್ ಪ್ರಿಯಾಂಕಾ ಚೋಪ್ರಾ ಕೂಡ ವಿಚಿತ್ರವಾಗಿ ಕಾಣಿಸಿಕೊಳ್ಳುತ್ತಾರೆ. ಒಮ್ಮೆ ಪ್ರಿಯಾಂಕಾ ಧರಿಸಿದ್ದ ಲಿಪ್ಸ್ಟಿಕ್ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಬೂದು ಬಣ್ಣದ ಲಿಪ್ಸ್ಟಿಕ್‌ನಲ್ಲಿ ಪ್ರಿಯಾಂಕಾ ಫೋಟೋಗೆ ಪೋಸ್ ನೀಡಿದ್ದರು. ಸುಂದರವಾಗಿ ಕಂಗೊಳಿಸಿದ್ದರೂ ಅಭಿಮಾನಿಗಳಿಗೆ ಪ್ರಿಯಾಂಕಾ ಲಿಪ್ಸ್ಟಿಕ್ ಇಷ್ಟವಾಗಿರಲಿಲ್ಲ.