ಇದೇನಿದು ವಿಕ್ಕಿ ಕೌಶಲ್ ಮತ್ತು ಸಾರಾ ಆಲಿ ಖಾನ್‌ ನಡುವೆ romance ಗುಸು ಗುಸು?

First Published | May 18, 2023, 5:38 PM IST

'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ವಿಕ್ಕಿ ಕೌಶಲ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಈ ಚಿತ್ರವು ರೊಮ್ಯಾಂಟಿಕ್ ಕಾಮಿಡಿಯಾಗಿದ್ದು, ವಿಚ್ಛೇದನದತ್ತ ಸಾಗುತ್ತಿರುವ ಕಥೆ ಹೊಂದಿರುವ ಈ ಚಿತ್ರದಲ್ಲಿ ವಿಕ್ಕಿ  ಕೌಶಲ್ ಮತ್ತು ಸಾರಾ ಆಲಿ ಖಾನ್‌  ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್‌ ಬಿಡುಗಡೆ ಸಮಯದಲ್ಲಿ ವಿಕ್ಕಿ ಅವರಿಗೆ ಎರಡನೇ ಮದುವೆಯ ಬಗ್ಗೆ ಪ್ರಶ್ನಿಸಲಾಗಿತ್ತು. ಹಾಗಾದರೆ ವಿಕ್ಕಿ ಕತ್ರಿನಾರಿಗೆ ಡಿವೋರ್ಸ್‌ ನೀಡಲಿದ್ದಾರಾ? 

ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಮುಂಬರುವ ಚಿತ್ರ 'ಜರಾ ಹಟ್ಕೆ ಜರಾ ಬಚ್ಕೆ' ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ತೆರೆ ಹಂಚಿ ಕೊಂಡಿದೆ ಈ ಜೋಡಿ.

ಚಿತ್ರದ ಟ್ರೇಲರ್ ಅನ್ನು ಮುಂಬೈನಲ್ಲಿ ಮ್ಯಾಡಾಕ್ ಫಿಲ್ಮ್ಸ್‌ನ ಪ್ರಮುಖ ಜೋಡಿ ಕ್ಕಿ  ಕೌಶಲ್ ಮತ್ತು ಸಾರಾ ಆಲಿ ಖಾನ್‌ ಹಾಗೂ ನಿರ್ಮಾಪಕ ದಿನೇಶ್ ವಿಜನ್ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.

Tap to resize

ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರೊಬ್ಬರು ವಿಕ್ಕಿಯನ್ನು ಮದುವೆಯ ಪರಿಕಲ್ಪನೆ ಮತ್ತು ಎರಡನೇ ಮದುವೆಯ ಬಗ್ಗೆ ಅವರ ಆಲೋಚನೆಗಳ ಬಗ್ಗೆ ಕೇಳಿದರು.

ಕತ್ರಿನಾ ಕೈಫ್‌ಗಿಂತ ಉತ್ತಮ ನಟಿ ಸಿಕ್ಕರೆ ಎರಡನೇ ಮದುವೆಗೆ ಆಯ್ಕೆ ಮಾಡಿಕೊಳ್ಳುವುದು ಸರಿಯೆಂದು ನೀವು ಭಾವಿಸುತ್ತೀರಾ? ಮಾಧ್ಯಮ ಸಂವಾದದ ವೇಳೆ ವಿಕ್ಕಿ ಅವರನ್ನು ಕೇಳಲಾಯಿತು. ವಿಕ್ಕಿ ಮಾತ್ರವಲ್ಲ, ಈ ಪ್ರಶ್ನೆಗೆ ಜೊತೆಯಲ್ಲಿದ್ದ ಸಾರಾ ಆಲಿ ಖಾನ್ ಸಹ ಶಾಕ್ ಆದರು. 

ಈ ಪ್ರಶ್ನೆ ಸಾರಾ ಮತ್ತು ವಿಕ್ಕಿ ಇಬ್ಬರನ್ನೂ ಬೆಚ್ಚಿ ಬೀಳಿಸಿತು. ಅದೇ ಸಮಯದಲ್ಲಿ ಪ್ರಶ್ನೆಗೆ ಇಬ್ಬರು ನಟರಿಗೂ ನಗು ತಡೆಯಲಾಗಲಿಲ್ಲ. ಪ್ರಶ್ನೆಗೆ ವಿಕ್ಕಿ ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ?

ಈಗ ತಾನೇ ಏನು ಕೇಳಿದ್ದು? ನಾನೂ ಮನೆಗೆ ಹೋಗಬೇಕು. ನೀವು ಏನು ಕಷ್ಷದ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ? ನಾನಿನ್ನು ಚಿಕ್ಕವನು. ಈ ಅಪಾಯಕಾರಿ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ?' ಎಂದು ವಿಕ್ಕಿ ಉತ್ತರಿಸಿದ್ದಾರೆ. ನನ್ನ ಮುಂದಿನ ಜನ್ಮದಲ್ಲೂ ನಾನು ಕತ್ರೀನಾಳನ್ನು ಬಿಡುವುದಿಲ್ಲ. ನಮ್ಮದು ದೈವ ಸಂಬಂಧವೆಂದು ಡಿವೋರ್ಸ್ ರೂಮರ್ಸ್ ಬಗ್ಗೆ ವಿಕ್ಕಿ ಹೇಳಿ ಕೊಂಡಿದ್ದಾರೆ. ಈ ಹೇಳಿಕೆ ಸಕ್ಕತ್ತೂ ವೈರಲ್ ಆಗಿದೆ. 

ಸಾರಾ ಆಲಿ ಖಾನ್ ಜೊತೆ ವಿಕ್ಕಿ ಕೌಶಲ್ ರೊಮ್ಯಾಂಟಿಕ್ ಸಿನಿಮಾದಿಂದ ಸೃಷ್ಟಿಯಾಗಿರುವ ಗಾಳಿ ಸುದ್ದಿಗಳಿಗೆ ವಿಕ್ಕಿ ತೆರೆ ಎಳೆದಿದ್ದಾರೆ. ಈ ಜೋಡಿ ನಟಿಸಿರುವ ಜರಾ ಹಟ್ಕೆ ಜರಾ ಬಚ್ಕೆ'  ಸಿನಿಮಾ ಜೂನ್ 2ರಂದು ರಿಲೀಸ್ ಆಗಲಿದೆ. ಸಾರಾ ಅಲಿ ಖಾನ್  ಅವರು ಕೊನೆಯದಾಗಿ ಅಟ್ರಾಂಗಿ ರೇ ಸಿನಿಮಾದಲ್ಲಿ ಧನುಷ್ ಜೊತೆ ಕಾಣಿಸಿಕೊಂಡಿದ್ದರು.  

Latest Videos

click me!