ಮಗಳು-ಅಪ್ಪನ ಫೋಟೋ ಜೊತೆ 'ಗಾರ್ಡಿಯನ್ ಏಂಜೆಲ್' ಎಂದು ಬರೆದು ಪೋಸ್ಟ್ ಮಾಡಿದ ಐಶ್ವರ್ಯಾ ರೈ!

Published : Nov 21, 2025, 10:45 AM IST

ಆರಾಧ್ಯಾಳ ಇತ್ತೀಚಿನ 14ನೇ ಹುಟ್ಟುಹಬ್ಬದ ಫೋಟೋವನ್ನೂ ಐಶ್ವರ್ಯಾ ಸೇರಿಸಿದ್ದಾರೆ. ಇದರಲ್ಲಿ ಹದಿಹರೆಯಕ್ಕೆ ಕಾಲಿಟ್ಟಿರುವ ಆರಾಧ್ಯಾ ಮತ್ತು ಐಶ್ವರ್ಯಾ ಇಬ್ಬರೂ ದಿವಂಗತ ಕೃಷ್ಣರಾಜ್  ರೈ ಅವರ ಭಾವಚಿತ್ರದ ಮುಂದೆ ನಿಂತು ಭಕ್ತಿಯಿಂದ ನಮಸ್ಕರಿಸುತ್ತಿದ್ದಾರೆ. ಈ ಸ್ಟೋರಿ ನೋಡಿ..

PREV
112

ಖ್ಯಾತ ಬಾಲಿವುಡ್ ನಟಿ ಹಾಗೂ ಕರಾವಳಿ ಸುಂದರಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರು ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ.

212

ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ, ಅದರಲ್ಲೂ ತಮ್ಮ ಪೋಷಕರಿಗೆ ಮತ್ತು ಮಗಳಿಗೆ ಅವರು ನೀಡುವ ಆದ್ಯತೆ ಅಪಾರ. ಇದೀಗ ಐಶ್ವರ್ಯಾ ರೈ ಅವರು ತಮ್ಮ ದಿವಂಗತ ತಂದೆ ಕೃಷ್ಣರಾಜ್ ರೈ ಅವರ ಜನ್ಮದಿನದ ಅಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ಭಾವುಕ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.

312

ತಂದೆಯ ಹುಟ್ಟುಹಬ್ಬಕ್ಕೆ ಭಾವಪೂರ್ಣ ನಮನ

ತನ್ನ ತಂದೆಯನ್ನು 'ಗಾರ್ಡಿಯನ್ ಏಂಜೆಲ್' (ಕಾವಲು ದೇವತೆ) ಎಂದು ಕರೆಯುವ ಐಶ್ವರ್ಯಾ, ಅವರ ಹುಟ್ಟುಹಬ್ಬದಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಪನ ನೆನಪನ್ನು ಹಂಚಿಕೊಂಡಿದ್ದಾರೆ.

412

ಕೇವಲ ನೆನಪು ಮಾಡಿಕೊಳ್ಳುವುದಲ್ಲದೆ, ಮೂರು ತಲೆಮಾರುಗಳ ಬಾಂಧವ್ಯವನ್ನು ಸಾರುವಂತಹ ಸುಂದರವಾದ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಅಭಿಮಾನಿಗಳ ಮನ ಗೆದ್ದಿವೆ.

512

ಅಜ್ಜ-ಮೊಮ್ಮಗಳ 'Then and Now' ಫೋಟೋ ವೈರಲ್

ಐಶ್ವರ್ಯಾ ಹಂಚಿಕೊಂಡಿರುವ ಫೋಟೋಗಳಲ್ಲಿ ಪ್ರಮುಖವಾಗಿ ಆಕರ್ಷಿಸಿದ್ದು ಅಜ್ಜ ಕೃಷ್ಣರಾಜ್ ರೈ ಮತ್ತು ಮೊಮ್ಮಗಳು ಆರಾಧ್ಯಾ ಬಚ್ಚನ್ (Aradhya Bachchan) ನಡುವಿನ ಬಾಂಧವ್ಯ.

612

ನಟಿ ಹಂಚಿಕೊಂಡಿರುವ ಹಳೆಯ ಫೋಟೋದಲ್ಲಿ, ಪುಟ್ಟ ಮಗುವಾಗಿದ್ದ ಆರಾಧ್ಯಾಳನ್ನು ಅಜ್ಜ ಕೃಷ್ಣರಾಜ್ ಅವರು ಪ್ರೀತಿಯಿಂದ ಎತ್ತಿಕೊಂಡಿದ್ದಾರೆ. ಆರಾಧ್ಯಾ ತನ್ನ ಅಜ್ಜನ ಕೆನ್ನೆಗೆ ಮುತ್ತಿಡುತ್ತಿರುವ ದೃಶ್ಯ ನಿಜಕ್ಕೂ ಮನಮೋಹಕವಾಗಿದೆ.

712

ಇದರ ಜೊತೆಗೆ, ಆರಾಧ್ಯಾಳ ಇತ್ತೀಚಿನ 14ನೇ ಹುಟ್ಟುಹಬ್ಬದ ಫೋಟೋವನ್ನೂ ಐಶ್ವರ್ಯಾ ಸೇರಿಸಿದ್ದಾರೆ. ಇದರಲ್ಲಿ ಹದಿಹರೆಯಕ್ಕೆ ಕಾಲಿಟ್ಟಿರುವ ಆರಾಧ್ಯಾ ಮತ್ತು ಐಶ್ವರ್ಯಾ ಇಬ್ಬರೂ ದಿವಂಗತ ಕೃಷ್ಣರಾಜ್ ಅವರ ಭಾವಚಿತ್ರದ ಮುಂದೆ ನಿಂತು ಭಕ್ತಿಯಿಂದ ನಮಸ್ಕರಿಸುತ್ತಿದ್ದಾರೆ. ಈ 'ಹಿಂದೆ ಮತ್ತು ಈಗ' (Then and Now) ಎಂಬ ಪರಿಕಲ್ಪನೆಯ ಫೋಟೋಗಳು ಕಾಲ ಸರಿದರೂ ಪ್ರೀತಿ ಕಡಿಮೆಯಾಗಿಲ್ಲ ಎಂಬುದನ್ನು ತೋರಿಸುತ್ತವೆ.

812

ಐಶ್ವರ್ಯಾ ರೈ ಬರೆದ ಭಾವುಕ ಸಾಲುಗಳು

ಈ ಫೋಟೋಗಳ ಜೊತೆಗೆ ಐಶ್ವರ್ಯಾ ರೈ ಬರೆದುಕೊಂಡಿರುವ ಸಾಲುಗಳು ಕಣ್ಣಂಚಲಿ ನೀರು ತರಿಸುವಂತಿವೆ. "ಹ್ಯಾಪಿ ಬರ್ತ್‌ಡೇ ಡಿಯರೆಸ್ಟ್ ಡ್ಯಾಡಿ-ಅಜ್ಜಾ.. (Dearest Daddy-Ajjaaa). ನೀವೇ ನಮ್ಮ ಕಾವಲು ದೇವತೆ, ನಿಮ್ಮನ್ನು ನಾವು ಶಾಶ್ವತವಾಗಿ ಪ್ರೀತಿಸುತ್ತೇವೆ.

912

ನಮ್ಮ ಆರಾಧ್ಯಾಳಿಗೆ 14 ವರ್ಷ ತುಂಬಿದ ಈ ಸಂದರ್ಭದಲ್ಲಿ ನಿಮ್ಮೆಲ್ಲಾ ಅನಂತ ಪ್ರೀತಿ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು" ಎಂದು ಐಶ್ವರ್ಯಾ ಬರೆದುಕೊಂಡಿದ್ದಾರೆ. ಆರಾಧ್ಯಾಳ ಹುಟ್ಟುಹಬ್ಬ ಮತ್ತು ತಂದೆಯ ಹುಟ್ಟುಹಬ್ಬದ ಸಂಭ್ರಮವನ್ನು ಒಂದೇ ಫ್ರೇಮ್‌ನಲ್ಲಿ ಅವರು ತಂದಿದ್ದಾರೆ.

1012

ತಂದೆಯ ಅಗಲಿಕೆ ಮತ್ತು ಐಶ್ವರ್ಯಾ ಅವರ ಸೇವೆ

ಐಶ್ವರ್ಯಾ ರೈ ಅವರ ತಂದೆ ಕೃಷ್ಣರಾಜ್ ರೈ ಅವರು ಅನಾರೋಗ್ಯದ ಕಾರಣದಿಂದ ಮಾರ್ಚ್ 18, 2017 ರಂದು ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು. ತಂದೆಯ ಅಗಲಿಕೆಯ ನಂತರ ಐಶ್ವರ್ಯಾ ಅವರು ಪ್ರತಿ ವರ್ಷ ತಂದೆಯ ಹುಟ್ಟುಹಬ್ಬದಂದು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುವುದು ಮತ್ತು ಬಡವರಿಗೆ ಸಹಾಯ ಹಸ್ತ ಚಾಚುವುದನ್ನು ಒಂದು ಸಂಪ್ರದಾಯವನ್ನಾಗಿ ಮಾಡಿಕೊಂಡಿದ್ದಾರೆ. ತಂದೆಯ ಮೇಲಿನ ಪ್ರೀತಿಯನ್ನು ಅವರು ಸಮಾಜ ಸೇವೆಯ ಮೂಲಕವೂ ವ್ಯಕ್ತಪಡಿಸುತ್ತಾರೆ.

1112

ಪುಟ್ಟಪರ್ತಿಯಲ್ಲಿ ಐಶ್ವರ್ಯಾ ಸ್ಫೂರ್ತಿದಾಯಕ ಮಾತು

ಈ ಭಾವುಕ ಪೋಸ್ಟ್‌ಗೂ ಒಂದು ದಿನ ಮೊದಲು, ಐಶ್ವರ್ಯಾ ರೈ ಅವರು ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.

ಅಲ್ಲಿ ಅವರು ಮಾಡಿದ ಭಾಷಣ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ನಾವೆಲ್ಲರೂ ಸತ್ಯಸಾಯಿ ಬಾಬಾ ಅವರ ದಿವ್ಯ ಸಂದೇಶವಾದ 'ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ' (Love All, Serve All) ಎಂಬುದಕ್ಕೆ ಪುನಃ ಸಮರ್ಪಿಸಿಕೊಳ್ಳೋಣ.

1212

ಮಾನವೀಯತೆಯೇ ಒಂದೇ ಜಾತಿ, ಪ್ರೀತಿಯೇ ಒಂದೇ ಧರ್ಮ, ಹೃದಯದ ಭಾಷೆಯೇ ಏಕೈಕ ಭಾಷೆ ಮತ್ತು ದೇವರು ಒಬ್ಬನೇ, ಅವನು ಎಲ್ಲೆಡೆ ಇದ್ದಾನೆ" ಎಂದು ಐಶ್ವರ್ಯಾ ಹೇಳಿದ್ದರು.

ಒಟ್ಟಿನಲ್ಲಿ, ತಂದೆಯ ನೆನಪಿನಲ್ಲಿ ಮಿಂದೆದ್ದಿರುವ ಐಶ್ವರ್ಯಾ ರೈ, ತಮ್ಮ ಸಂಸ್ಕಾರ ಮತ್ತು ಕೌಟುಂಬಿಕ ಮೌಲ್ಯಗಳಿಂದ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಆರಾಧ್ಯಾ ಮತ್ತು ಅವರ ಅಜ್ಜನ ಬಾಂಧವ್ಯದ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Read more Photos on
click me!

Recommended Stories