ಸುದೀಪ್ ಅವರನ್ನು ‘ಅದೃಷ್ಟ ತರುವ ಪ್ರತಿಭಾವಂತ ನಟ’ ಎಂದೇ ಗುರುತಿಸಿರುವ ರಾಜಮೌಳಿ ತನ್ನ ಹೊಸ ಸಿನಿಮಾ ವಾರಣಾಸಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಆಫರ್ ನೀಡಿದ್ದಾರೆ ಎನ್ನಲಾಗಿದೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ವಾರಣಾಸಿ’ಯಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ ಎಂಬ ಮಾತು ಹೇಳಿಬಂದಿದೆ. ಸುದೀಪ್ ಈ ಸಿನಿಮಾದಲ್ಲಿ ಹನುಮಂತನಾಗಿ ಸಾಹಸ ಪ್ರದರ್ಶಿಸಲಿದ್ದಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.
26
ಅದೃಷ್ಟ ತರುವ ಪ್ರತಿಭಾವಂತ ನಟ
ರಾಜಮೌಳಿ ಅವರ ‘ಈಗ’ ಮತ್ತು ‘ಬಾಹುಬಲಿ’ ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಆರಂಭದಿಂದಲೂ ಸುದೀಪ್ ಅವರನ್ನು ‘ಅದೃಷ್ಟ ತರುವ ಪ್ರತಿಭಾವಂತ ನಟ’ ಎಂದೇ ಗುರುತಿಸಿರುವ ರಾಜಮೌಳಿ ತನ್ನ ಹೊಸ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಆಫರ್ ನೀಡಿದ್ದಾರೆ ಎನ್ನಲಾಗಿದೆ. 1300 ಕೋಟಿ ಬಜೆಟ್‌ನ ಈ ಚಿತ್ರದಲ್ಲಿ ಸುದೀಪ್ ನಟನೆಯ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
36
ಟೈಟಲ್ ವಿವಾದ
ಇನ್ನೊಂದೆಡೆ ‘ವಾರಣಾಸಿ’ ಟೈಟಲ್ ಬಗ್ಗೆ ವಿವಾದವೆದ್ದಿದೆ. ಈ ಶೀರ್ಷಿಕೆಯನ್ನು ತೆಲುಗಿನ ರಾಮ ಬ್ರಹ್ಮ ಹನುಮ ಕ್ರಿಯೇಶನ್ಸ್‌ನ ಸಿ.ಎಚ್. ಸುಬ್ಬಾ ರೆಡ್ಡಿ 2023ರಲ್ಲೇ ಖರೀದಿಸಿ, ಬಳಿಕ ಇದನ್ನು 2026ರವರೆಗೂ ನವೀಕರಿಸಿದ್ದರು ಎನ್ನಲಾಗಿದೆ. ಇದನ್ನು ವಿರೋಧಿಸಿ ಸುಬ್ಬಾ ರೆಡ್ಡಿ ದೂರು ನೀಡಲು ಮುಂದಾಗಿದ್ದಾರೆ.
ನನ್ನ ಸಿನಿಮಾದ ಕತೆಯನ್ನು, ಇದರ ವಿಸ್ತಾರವನ್ನು ಮಾತಿನಲ್ಲಿ ಹೇಳುವುದು ಕಷ್ಟ. ಅದಕ್ಕಾಗಿ ಈ ಟೀಸರ್ ಸಿದ್ಧಗೊಳಿಸಿದ್ದೇವೆ. ಈ ಟೀಸರ್ ಎಲ್ಲವನ್ನೂ ಹೇಳುತ್ತದೆ. ಮಹೇಶ್ ಬಾಬು ಕೃಷ್ಣನ ಪಾತ್ರಕ್ಕೆ ಸೂಕ್ತವಾಗುತ್ತಾರೆ, ಶಾಂತರೂಪಿ ರಾಮನ ಪಾತ್ರಕ್ಕೆ ಹೊಂದುವುದಿಲ್ಲವೇನೋ ಎಂಬ ಅನುಮಾನವಿತ್ತು.
56
ವೃತ್ತಿಜೀವನದ ಅತಿದೊಡ್ಡ ಸಿನಿಮಾ
ರಾಮನ ದಿರಿಸು ಧರಿಸಿದ ಅವರನ್ನು ನೋಡಿದಾಗ ನನಗೇ ರೋಮಾಂಚನವಾಯಿತು. ಇದು ನನ್ನ ಮತ್ತು ಮಹೇಶ್ ಬಾಬು ವೃತ್ತಿಜೀವನದ ಅತಿದೊಡ್ಡ ಸಿನಿಮಾ ಆಗಲಿದೆ. ನನಗೆ ರಾಮಾಯಣ, ಮಹಾಭಾರತ ಇಷ್ಟ. ಇದರಲ್ಲಿ ರಾಮಾಯಣ ಅಂಶ ನಾನು ನಿರೀಕ್ಷಿಸದೇ ಬಂದಿದ್ದು ನನಗೇ ಖುಷಿ ಕೊಟ್ಟಿದೆ.
66
ಲಾರ್ಜ್ ಸ್ಕೇಲ್ ಫಾರ್ಮ್ಯಾಟ್ ತಂತ್ರಜ್ಞಾನ
ಮಹೇಶ್ ತಂದೆ ಕೃಷ್ಣಂರಾಜು ಚಿತ್ರರಂಗಕ್ಕೆ ಅನೇಕ ಹೊಸತುಗಳನ್ನು ಕೊಟ್ಟವರು. ಈ ಸಿನಿಮಾ ಮೂಲಕ ಪ್ರೀಮಿಯಂ ಲಾರ್ಜ್ ಸ್ಕೇಲ್ ಫಾರ್ಮ್ಯಾಟ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ ಎಂದರು ರಾಜಮೌಳಿ.