Actress Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 2015ರಲ್ಲಿ 'ಮೈ ಚಾಯ್ಸ್' ವಿಡಿಯೋದಲ್ಲಿ ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವ ಬಗ್ಗೆ ನೀಡಿದ್ದ ಹೇಳಿಕೆಯು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 2015ರಲ್ಲಿ 'ಮೈ ಚಾಯ್ಸ್' ವಿಡಿಯೋದಿಂದಾಗಿ ಸುದ್ದಿಯಾಗಿದ್ದರು. ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವ ಬಗ್ಗೆ ನೀಡಿದ್ದ ಹೇಳಿಕೆಯಿಂದಾಗಿ ದೀಪಿಕಾ ಪಡುಕೋಣೆ ಸಾಕಷ್ಟು ಟ್ರೋಲ್ ಆಗಿದ್ದರು. ಇದೀಗ ಈ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
25
8 ಗಂಟೆ ಅವಧಿಯ ಕೆಲಸ
ನಟಿ ದೀಪಿಕಾ ಪಡುಕೋಣೆ ಯಾವಾಗಲೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ನಟಿಯರಿಗೂ 8 ಗಂಟೆ ಅವಧಿಯ ಕೆಲಸ ನೀಡಬೇಕು ಎಂದು ಒತ್ತಾಯಿಸಿರುವ ದೀಪಿಕಾ ಪಡುಕೋಣೆ ಬಿಗ್ ಬಜೆಟ್ ಸಿನಿಮಾಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಶೂಟಿಂಗ್ ನಡೆಯುವ ಸಂದರ್ಭದಲ್ಲಿ ಕೆಲಸಕ್ಕೆ ಸಮಯದ ಮಿತಿ ಹಾಕಿಕೊಳ್ಳುವ ಮಾತನ್ನು ನಿರ್ಮಾಪಕರ ವಿರೋಧ ವ್ಯಕ್ತಪಡಿಸಿದ್ದಾರೆ.
35
ಮದುವೆಗೂ ಮುನ್ನ ನೀಡಿದ್ದ ಹೇಳಿಕೆ
ದೀಪಿಕಾ ಪಡುಕೋಣೆ ಮದುವೆಗೂ ಮುನ್ನ ನೀಡಿದ್ದ ಹೇಳಿಕೆಯೊಂದು ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ದೀಪಿಕಾ ನೀಡಿದ ಈ ಹೇಳಿಕೆ 2015ರಲ್ಲಿ ಚರ್ಚೆಗೆ ಬಂದಿತ್ತು. 'ಮೈ ಚಾಯ್ಸ್' ವಿಡಿಯೋ ಅಭಿಯಾನದಲ್ಲಿ ಭಾಗವಹಿಸಿದ್ದಾಗ, ಅವರು ನೀಡಿದ್ದ ಹೇಳಿಕೆ ಸಾಕಷ್ಟು ಸದ್ದು ಮಾಡಿತ್ತು.'ನನಗೆ ನನ್ನ ಇಷ್ಟದಂತೆ ಬದುಕಬೇಕು. ಬೇಕಾದ ಹಾಗೆ ಬಟ್ಟೆ ಹಾಕಬೇಕು. ಗಂಡಸಾಗಲಿ, ಹೆಂಗಸಾಗಲಿ, ಯಾರನ್ನು ಪ್ರೀತಿಸಬೇಕು ಅನ್ನೋದು ನನ್ನ ಆಯ್ಕೆ' ಎಂದು ದೀಪಿಕಾ ಹೇಳಿದ್ದರು.
'ಮದುವೆಗೂ ಮುನ್ನ ಯಾರೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳಬೇಕು, ಮದುವೆಯ ನಂತರ ಇಟ್ಟುಕೊಳ್ಳಬೇಕೋ ಬೇಡವೋ, ಎಲ್ಲವೂ ನನಗೆ ಬಿಟ್ಟಿದ್ದು' ಎಂದು ದೀಪಿಕಾ ಪಡುಕೋಣೆ ಹೇಳಿದ್ದರು. ಈ ವಿಡಿಯೋ ವೈರಲ್ ಆದ ನಂತರ ದೀಪಿಕಾ ಸಾಕಷ್ಟು ಟ್ರೋಲ್ ಆಗಿದ್ದರು. ನಂತರ, ಯಾರಿಗೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ, ತನಗೆ ಮದುವೆ ಮತ್ತು ಸಂಬಂಧಗಳಲ್ಲಿ ನಂಬಿಕೆ ಇದೆ ಎಂದು ಸ್ಪಷ್ಟನೆ ನೀಡಿದ್ದರು.
ನಟಿ ದೀಪಿಕಾ ಪಡುಕೋಣೆ 2018ರಲ್ಲಿ ರಣವೀರ್ ಸಿಂಗ್ ಅವರನ್ನು ಮದುವೆಯಾಗಿದ್ದು, ಈ ಜೋಡಿಗೆ 'ದುವಾ' ಹೆಸರಿನ ಮಗಳಿದ್ದಾಳೆ. ಮಗಳಿಗೆ ದುವಾ ಹೆಸರಿಟ್ಟಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ದೀಪಿಕಾ ಪಡುಕೋಣೆ ಬೆಂಗಳೂರಿನವರಾಗಿದ್ದು, ಬಿಡುವಿನ ಸಮಯದಲ್ಲಿ ರಾಜಧಾನಿಗೆ ಬರುತ್ತಿರುತ್ತಾರೆ.