ಫಸ್ಟ್‌ ಹೆಂಡ್ತಿ ಮಗಳಿಗೆ 23 ವರ್ಷ; ಗರ್ಲ್‌ಫ್ರೆಂಡ್‌ಗೆ 2 ಮಕ್ಕಳಾದ್ಮೇಲೆ ಮದುವೆಯಾಗಲು ರೆಡಿಯಾದ 53 ವರ್ಷದ ನಟ

Published : Dec 14, 2025, 10:48 AM IST

ಬಾಲಿವುಡ್ ನಟ ಅರ್ಜುನ್‌ ರಾಮ್‌ಪಾಲ್‌ ಅವರ ಮೊದಲ ಮದುವೆಯಲ್ಲಿ ಇಬ್ಬರು ಮಕ್ಕಳು ಜನಿಸಿದ್ದಾರೆ. ಗರ್ಲ್‌ಫ್ರೆಂಡ್‌ಗೆ ಇಬ್ಬರು ಗಂಡು ಮಕ್ಕಳಾದ ಮೇಲೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

PREV
15
ಸೌಥ್‌ ಆಫ್ರಿಕಾ ಮೂಲದ ಮಾಡೆಲ್

ಗರ್ಲ್‌ಫ್ರೆಂಡ್‌ ಜೊತೆ ಆರು ವರ್ಷಗಳ ಒಟ್ಟಿಗೆ ಜೀವನ ಮಾಡಿದ್ದಾರೆ. ಇದರಿಂದ ಇಬ್ಬರು ಪುತ್ರರು ಕೂಡ ಜನಿಸಿದ್ದಾರೆ. ಸೌಥ್‌ ಆಫ್ರಿಕಾ ಮೂಲದ ಗ್ಯಾಬ್ರಿಯೆಲಾ ಡೆಮೆಟ್ರಿಯಾಡೆಸ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದು, ಸಂಬಂಧವನ್ನು ಮುಂದಿನ ಹಂತಕ್ಕೆ ತಗೊಂಡು ಹೋಗಲು ರೆಡಿಯಾಗಿದ್ದಾರೆ.

25
ಅವಳು ಹಾಟ್‌ ಆಗಿದ್ದಳು

ನಟಿ ರಿಯಾ ಚಕ್ರವರ್ತಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದ ಅರ್ಜುನ್ ರಾಮ್‌ಪಾಲ್‌ ಅವರು ಗರ್ಲ್‌ಫ್ರೆಂಡ್‌ ಬಗ್ಗೆ ಮಾತನಾಡಿದ್ದಾರೆ. ಹಾಟ್‌ ಆಗಿದ್ದಕ್ಕೆ ಫಸ್ಟ್‌ ಅವಳ ಮೇಲೆ ಕಣ್ಣು ಹೋಯ್ತು ಎಂದಿದ್ದಾರೆ.

35
ಹಾಟ್‌ ಆಗಿದ್ದಕ್ಕೆ ಲವ್‌ ಆಯ್ತು

“ನಾನು ಗ್ಯಾಬ್ರಿಯೆಲಾ, ಮದುವೆಯಾಗಿಲ್ಲ, ಆದರೆ ಯಾರಿಗೆ ಗೊತ್ತು? ನಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಹಾಟ್‌ ಆಗಿದ್ದಳು ಅಂತ ಅವಳನ್ನು ಫಾಲೋ ಮಾಡಿದೆ. ಹಾಟ್‌ನೆಸ್‌ಗಿಂತ ಹೆಚ್ಚಿನದೇನೋ ಅವಳಲ್ಲಿದೆ ಎನ್ನೋದು ಆಮೇಲೆ ಅರ್ಥವಾಯ್ತು, ಲವ್‌ ಆಯ್ತು” ಎಂದು ಅರ್ಜುನ್ ಹೇಳಿದ್ದಾರೆ.

45
ಗರ್ಲ್‌ಫ್ರೆಂಡ್‌ಗೆ ಎರಡು ಗಂಡು ಮಕ್ಕಳಿವೆ

ಅರ್ಜುನ್ ಮತ್ತು ಗ್ಯಾಬ್ರಿಯೆಲಾ ಅವರು ಲಿವ್ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ. 2018 ರಲ್ಲಿ ಪರಸ್ಪರ ಸ್ನೇಹಿತರ ಮೂಲಕ ಭೇಟಿಯಾಗಿ, ಡೇಟಿಂಗ್‌ ಮಾಡಲು ಆರಂಭಿಸಿದರು. ಈ ಜೋಡಿಗೆ 2019 ರಲ್ಲಿ ಅರಿಕ್ ಎಂಬ ಮಗ ಜನಿಸಿದನು. 2023ರಲ್ಲಿ ಎರಡನೇ ಮಗ ಜನಿಸಿದ್ದಾನೆ.

55
ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು

1998ರಲ್ಲಿ ಅರ್ಜುನ್ ಅವರು ಮೆಹರ್ ಜೆಸಿಯಾರನ್ನು ಮದುವೆಯಾಗಿದ್ದರು. ಅವರಿಗೆ ಮೆಹರ್ ಅವರೊಂದಿಗೆ ಮಹಿಕಾ ರಾಂಪಾಲ್, ಮೈರಾ ರಾಂಪಾಲ್ ಎಂಬ ಮಕ್ಕಳಿದ್ದಾರೆ. ಮೊದಲ ಮಗಳಿಗೆ 23 ವರ್ಷ, ಎರಡನೇ ಮಗಳಿಗೆ 20 ವರ್ಷ ಎನ್ನಲಾಗಿದೆ.

Read more Photos on
click me!

Recommended Stories