ಆಮೀರ್ ಖಾನ್ ಅವರ ತಾಯಿ ಇನ್ನೂ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿದ್ದಾರೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ತನ್ನ ತಾಯಿಯ ಆರೋಗ್ಯ ಹದಗೆಟ್ಟಿರುವ ಸುದ್ದಿ ಮಾಧ್ಯಮಗಳಲ್ಲಿ ಸೋರಿಕೆಯಾಗುವುದನ್ನು ಆಮೀರ್ ಖಾನ್ ಬಯಸಲಿಲ್ಲ ಎಂದು ಹೇಳಲಾಗುತ್ತಿದೆ ಮತ್ತು ಜನರು ಅವರ ಆರೋಗ್ಯದ ಬಗ್ಗೆ ಊಹಾಪೋಹಗಳನ್ನು ಪ್ರಾರಂಭಿಸಿದರು. ಹಾಗಾಗಿ ಈ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ.
ಆಮೀರ್ ಖಾನ್ ತನ್ನ ತಾಯಿಗೆ ತುಂಬಾ ಹತ್ತಿರವಾಗಿದ್ದಾರೆ. ತನ್ನ ಕೊನೆಯ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ನಡೆದ ಸಂಭಾಷಣೆಯಲ್ಲಿ ಅವರು ತನ್ನ ಚಿತ್ರಗಳಿಗೆ ತಾಯಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದ್ದರು.
'ಮೊದಲು ನನಗೆ ನನ್ನ ತಾಯಿಯ ಪ್ರತಿಕ್ರಿಯೆ ಸಿಗುತ್ತದೆ. ನಂತರ ನನಗೆ ಮಕ್ಕಳ ಪ್ರತಿಕ್ರಿಯೆ ಸಿಗುತ್ತದೆ. ನನ್ನ ತಾಯಿಗೆ ಚಿತ್ರ (ಲಾಲ್ ಸಿಂಗ್ ಚಡ್ಡಾ) ತುಂಬಾ ಇಷ್ಟವಾಯಿತು. ಅದನ್ನು ನೋಡಿದ ನಂತರ ಅವರು 'ಆಮೀರ್ ಯಾರ ಮಾತನ್ನು ಕೇಳಬೇಡ. ಚಿತ್ರ ಪರ್ಫೇಕಟ್ ಆಗಿದೆ, ಅದನ್ನು ಹಾಗೆಯೇ ಬಿಡುಗಡೆ ಮಾಡು, ಏನನ್ನೂ ಎಡಿಟ್ ಮಾಡಬೇಡ ಎಂದು ಹೇಳಿದ್ದರು. ಅದರಿಂದ ಅಮ್ಮಿ ಚಿತ್ರದ ಬಗ್ಗೆ ಹೇಗೆ ಯೋಚಿಸತ್ತಾರೆ ಎಂದು ನನಗೆ ಗೊತ್ತಾಗಬೇಕು' ಎಂದು ಆಮೀರ್ ಹೇಳಿದ್ದರು
'ಅಮ್ಮಿಗೆ ಚಿತ್ರ ಇಷ್ಟವಾಗದಿದ್ದರೆ, ಅವರು ಇದನ್ನು ತೆಗೆದು ಹಾಕಿ, ಏನು ಮಾಡಿದ್ದೀಯಾ ಎಂದು ಹೇಳುತ್ತಾರೆ. ಅವರು ಇದನ್ನು ತುಂಬಾ ಕ್ಯೂಟ್ ರೀತಿಯಲ್ಲಿ ಹೇಳುತ್ತಾರೆ' ಎಂದು ಆಮೀರ್ ತನ್ನ ಚಿತ್ರಗಳಿಗೆ ತಾಯಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು .ಆಮೀರ್ ಹೇಳಿದ್ದರು
ಜೂನ್ 13 ರಂದು ಇಡೀ ಕುಟುಂಬದೊಂದಿಗೆ ಅಮೀರ್ ತನ್ನ ತಾಯಿಯ ಹುಟ್ಟುಹಬ್ಬವನ್ನು ಆಚರಿಸಿದರು. ಆಮೀರ್ ಖಾನ್ ಕೊನೆಯದಾಗಿ ಅದ್ವೈತ್ ಚಂದನ್ ನಿರ್ದೇಶಿಸಿದ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಕಾಣಿಸಿಕೊಂಡರು.
ಈ ಚಿತ್ರದಲ್ಲಿ ಮೋನಾ ಸಿಂಗ್ ಅವರ ತಾಯಿಯ ಪಾತ್ರದಲ್ಲಿ ಮತ್ತು ಕರೀನಾ ಕಪೂರ್ ಅವರ ಪತ್ನಿಯಾಗಿ ನಟಿಸಿದ್ದಾರೆ. ಹಾಲಿವುಡ್‌ನ ಸೂಪರ್‌ಹಿಟ್ ಚಿತ್ರ 'ಫಾರೆಸ್ಟ್ ಗಂಪ್'ನ ಈ ಹಿಂದಿ ರಿಮೇಕ್ ಬಾಕ್ಸ್ ಆಫೀಸ್‌ನಲ್ಲಿ ಕೆಟ್ಟದಾಗಿ ಸೋತಿತು.
ವರದಿಗಳನ್ನು ನಂಬುವುದಾದರೆ, ಅಮೀರ್ ಅವರ ಮುಂಬರುವ ಚಿತ್ರಗಳಲ್ಲಿ 'ಪ್ರೀತಮ್ ಪ್ಯಾರೆ', 'ಟೂ ಬ್ರೈಡ್ಸ್', 'ಸಲಾಮ್ ವೆಂಕಿ' ಮತ್ತು 'ಕಂಪ್ಯಾನಿಯನ್' ಸೇರಿವೆ.