ಡಾ. ಪುನೀತ್ ರಾಜಕುಮಾರ್‌ಗೆ ಜೋಡಿಯಾಗಿ ರಣವಿಕ್ರಮ ಚಿತ್ರದಲ್ಲಿ ಅಭಿನಯಿಸಿರುವ ಬಾಲಿವುಡ್ ನಾಯಕಿ ಆದಾ ಶರ್ಮಾ ಹ್ಯಾಲೋವೀನ್ ದಿನವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಬ್ಲ್ಯಾಕ್ ಡ್ರೆಸ್‌ಗೆ, ಕೈಯಲ್ಲಿ ಬೆಕ್ಕು ಗೊಂಬೆ, ಜಾದೂಗಾರನ ಟೋಪಿ, ಪೋರ್ಕೆ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
'ಹ್ಯಾಲೋವೀನ್ ದಿನಕ್ಕೆ ಶಾಪಿಂಗ್ ಮಾಡುವುದು ಅಂದ್ರೆ ನನಗೆ ತುಂಬಾನೇ ಇಷ್ಟ. ಸಣ್ಣ ಪುಟ್ಟ ಮಾಸ್ಕ್‌ಗಳು ಹ್ಯಾಟ್‌ಗಳು ಎಲ್ಲವೂ ಸೂಪರ್ ಆಗಿರುತ್ತದೆ' ಎಂದು ಬೆಂಗಳೂರು ಟೈಮ್ಸ್‌ಗೆ ಹೇಳಿದ್ದಾರೆ.
'ನನ್ನ ಮೊದಲ ಸಿನಿಮಾ ಕೂಡ ಹಾರರ್ ಆಗಿದ್ದ ಕಾರಣ ಜನರು ನನ್ನನ್ನು ಹೆಚ್ಚಿಗೆ ಹಾರರ್ ಲುಕ್‌ನಲ್ಲಿ ನೋಡಲು ಇಷ್ಟ ಪಡುತ್ತಾರೆ. ಒಂದು ದಿನಕ್ಕೆ ನಾವು ಮಾನ್ಸಟರ್ ಆಗಿದ್ದೆ ಎಷ್ಟು ಚಂದ?'
'ಹ್ಯಾಲೋವೀನ್ ದಿನ ನಾನು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವೆ ಆದರೆ ಜನರನ್ನು ಹೆದರಿಸುವುದರಲ್ಲಿ ನಾನು ಎಕ್ಸರ್ಪಟ್. ಸೆಟ್‌ನಲ್ಲಿ ಡ್ರಾಮ ಕ್ರಿಯೇಟ್ ಆಗುತ್ತದೆ' ಎಂದಿದ್ದಾರೆ ಆದಾ.
ವಿಚಿತ್ರ ವಿಚಿತ್ರವಾಗಿರುವ ಲುಕ್‌ನಲ್ಲಿ ಆದಾ ಹ್ಯಾಲೋವೀನ್ ದಿನ ಮಾತ್ರವಲ್ಲ ಸಾಮಾನ್ಯ ದಿನಗಳಲ್ಲೂ ಫಾಲೋ ಮಾಡುತ್ತಾರೆ. ಹೀಗಾಗಿ ಆದಾ ವಿಚಿತ್ರ ಲುಕ್ ಜನರಿಗೆ ಹೊಸದಲ್ಲ.