ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಮದುವೆ; ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ!
First Published | Oct 30, 2022, 5:27 PM ISTಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ವಿವಾಹದ ಬಗ್ಗೆ ಬಿ-ಟೌನ್‌ನಲ್ಲಿ ಬಹಳ ದಿನಗಳಿಂದ ಚರ್ಚೆಗಳು ನಡೆಯುತ್ತಿವೆ. ಕೆಲವೇ ದಿನಗಳ ಹಿಂದೆಯಷ್ಟೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಅದೇ ಸಮಯದಲ್ಲಿ, ಈಗ ಬಾಲಿವುಡ್ ಹಂಗಾಮಾ ವರದಿಗಳ ಪ್ರಕಾರ, ಅವರ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಇದೇ ಡಿಸೆಂಬರ್‌ನಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ. ಮದುವೆಯ ನಂತರ, ಇಬ್ಬರೂ ಮುಂಬೈನಲ್ಲಿ ಗ್ರ್ಯಾಂಡ್ ರಿಸೆಪ್ಶನ್ ಪಾರ್ಟಿಯನ್ನು ನೀಡಲಿದ್ದಾರೆ, ಇದರಲ್ಲಿ ಪ್ರಮುಖ ಬಾಲಿವುಡ್ ಸ್ಟಾರ್ಸ್ ಪಾಲ್ಗೊಳಲಿದ್ದಾರೆ ಎಂದು ವರದಿಯಾಗಿದೆ.