Mumbai: 'ಲಾಲ್ ಸಿಂಗ್ ಚಡ್ಡಾ' ಸ್ಕ್ರೀನಿಂಗ್ ಆಯೋಜಿಸಿದ ಆಮೀರ್ ಖಾನ್
First Published | Aug 6, 2022, 4:56 PM ISTಮುಂಬೈನ ಜುಹುದಲ್ಲಿರುವ ರೆಕಾರ್ಡಿಂಗ್ ಸ್ಟುಡಿಯೋ ಸನ್ನಿ ಸೂಪರ್ ಸೌಂಡ್‌ನಲ್ಲಿ ಆಮೀರ್ ಖಾನ್ (Aamir Khan) ಅವರ ಮುಂಬರುವ ಚಿತ್ರ 'ಲಾಲ್ ಸಿಂಗ್ ಚಡ್ಡಾ' (Laal Singh Chaddha) ಸ್ಕ್ರೀನಿಂಗ್ ನಡೆಯಿತು. ಈ ಸಂದರ್ಭದಲ್ಲಿ ಅನೇಕ ಸೆಲೆಬ್ರೆಟಿಗಳು ಚಿತ್ರ ವೀಕ್ಷಿಸಲು ಆಗಮಿಸಿದ್ದರು. ಆಗಸ್ಟ್ 5 ರಂದು ಸಂಜೆ ನಡೆದ ಈ ಸ್ಕ್ರೀನಿಂಗ್‌ನಲ್ಲಿ ಸ್ವತಃ ಆಮೀರ್ ಖಾನ್ ಕೂಡ ಹಾಜರಿದ್ದರು. ಈ ಚಿತ್ರವು 1994ರಲ್ಲಿ ಬಿಡುಗಡೆಯಾದ ಟಾಮ್ ಹ್ಯಾಂಕ್ಸ್ ಅಭಿನಯದ ಹಾಲಿವುಡ್ ಚಲನಚಿತ್ರ 'ಫಾರೆಸ್ಟ್ ಗಂಪ್' ನ ರಿಮೇಕ್.