ಖಲ್ ನಾಯಕ್‌ನ ಸಂಜಯ್‌ದತ್‌ ಪಾತ್ರ ಮಾಡಲು ಬಯಸಿದ್ದರಂತೆ ಆಮೀರ್ ಖಾನ್‌!

Published : Aug 06, 2022, 03:42 PM IST

ಇಂದಿಗೆ ಸರಿಯಾಗಿ 29 ವರ್ಷಗಳ ಹಿಂದೆ ಅಂದರೆ ಆಗಸ್ಟ್ 6, 1993 ರಂದು ಸಂಜಯ್ ದತ್, ಜಾಕಿ ಶ್ರಾಫ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ 'ಖಲ್ ನಾಯಕ್' (Khal Nayak)  ಚಿತ್ರ  ಬಿಡುಗಡೆಯಾಯಿತು. ಈ ಚಿತ್ರ ಆ ವರ್ಷದ ಎರಡನೇ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿತ್ತು. ಅಂದು ಬಾಕ್ಸ್ ಆಫೀಸಿನಲ್ಲಿ ಚಿತ್ರ 23 ಕೋಟಿ ಕಲೆಕ್ಷನ್ ಮಾಡಿತ್ತು. ಓಡಿ ಹೋದ ಭಯೋತ್ಪಾದಕ ಕ್ರಿಮಿನಲ್ ಮತ್ತು ಅವನನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಪೋಲೀಸ್‌ ಸುತ್ತ ಅದರ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರವನ್ನು ಸುಭಾಷ್ ಘಾಯ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಎರಡು ಕಾರಣಗಳಿಗಾಗಿ ಈ ಚಿತ್ರ ತುಂಬಾ ಚರ್ಚೆಯಾಯಿತು. ಒಂದು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಂಜಯ್ ದತ್ ಅವರ ಬಂಧನ ಮತ್ತು ಎರಡನೆಯದು ಸಿನಿಮಾದ 'ಚೋಲಿ ಕೆ ಪೀಚೆ' ಹಾಡು. ಈ ಸಿನಿಮಾಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳು ಇಲ್ಲಿವೆ

PREV
111
ಖಲ್  ನಾಯಕ್‌ನ  ಸಂಜಯ್‌ದತ್‌ ಪಾತ್ರ ಮಾಡಲು ಬಯಸಿದ್ದರಂತೆ ಆಮೀರ್ ಖಾನ್‌!

ನಿರ್ಮಾಪಕ-ನಿರ್ದೇಶಕ ಸುಭಾಷ್ ಘಾಯ್ ಮೊದಲು ಈ ಚಿತ್ರವನ್ನು ಕಲಾತ್ಮಕ ಚಿತ್ರವಾಗಿಸಲು ಯೋಜಿಸಿದ್ದರು. ಕಥೆ ಬರೆಯುವಾಗ ನಾನಾ ಪಾಟೇಕರ್ ಮತ್ತು ಜಾಕಿ ಶ್ರಾಫ್ ಅವರ ಹೆಸರನ್ನೂ ಅಂತಿಮಗೊಳಿಸಿದ್ದರು. ಇಬ್ಬರೂ ನಟರ ಜೊತೆ ಚಿತ್ರದ ಬಗ್ಗೆ ಚರ್ಚಿಸಿದ್ದರು.

211

ಆದರೆ ಅವರು ಈ ಚಿತ್ರದ ಸ್ಕ್ರಿಪ್ಟ್ ಬರೆಯುತ್ತಾ ಹೋದರಂತೆ  ಪ್ರಮುಖ ಪಾತ್ರ ದಾರಿ ತಪ್ಪಿದ ಯುವಕನಾದನು. ಘಾಯ್ ಈ ಬಗ್ಗೆ ನಾನಾಗೆ ತಿಳಿಸಿದಾಗ, ಅವರು ಘಾಯ್‌ಗೆ ಬೇರೆ ನಾಯಕನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿದರು.  

311

ಆದರೆ ನಾನಾ ಸಂದರ್ಶನಗಳಲ್ಲಿ ಘಾಯ್ ಬಗ್ಗೆ ತಪ್ಪು ಮಾತುಗಳನ್ನಾಡಿದ್ದಾರೆ. ಘಾಯ್‌ಗೆ ಚಿತ್ರ ಮಾಡಲು ಬಜೆಟ್ ಇಲ್ಲ, ಹಾಗಾಗಿ   ಪಾತ್ರವನ್ನು ಉಚಿತವಾಗಿ ಮಾಡಬೇಕೆಂದಿದ್ದರು. ನಾನಾ ನಿರಾಕರಿಸಿದಾಗ, ಘಾಯ್ ಅವರನ್ನು ಚಿತ್ರದಿಂದ ಹೊರತೆಗೆದು ಸಂಜಯ್ ದತ್ ಅವರನ್ನು ಹಾಕಿದರು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದರು.


 

411

ಸುಭಾಷ್ ಘಾಯ್ ಈ ಚಿತ್ರದಲ್ಲಿ ಜಾಕಿ ಶ್ರಾಫ್ ಪಾತ್ರವನ್ನು ಅಮೀರ್ ಖಾನ್‌ಗೆ ನೀಡಿದ್ದರು, ಆದರೆ ಆಮೀರ್ ಸಂಜಯ್ ದತ್ ಪಾತ್ರವನ್ನು ಮಾಡಲು ಬಯಸಿದ್ದರು. ಆದರೆ ಸಾಧ್ಯವಾಗಲಿಲ್ಲ. ಚಿತ್ರದಲ್ಲಿ ಸಂಜಯ್ ದತ್ ಪಾತ್ರದಲ್ಲಿ ನಟಿಸಲು ಸುಭಾಷ್ ಘಾಯ್ ಅವರ ಮನವೊಲಿಸಲು ಅನಿಲ್ ಕಪೂರ್ ತುಂಬಾ ಪ್ರಯತ್ನಿಸಿದರು, ಆದರೆ ಘಾಯ್ ಈಗಾಗಲೇ ಈ ಪಾತ್ರವನ್ನು ಸಂಜಯ್ ದತ್‌ಗೆ ನೀಡಿದ್ದರು.

511

ಈ ಚಿತ್ರದ ಸಂಗೀತವೂ ಹೆಸರುವಾಸಿ. ಇದರ  ಆಲ್ಬಂ 10 ಮಿಲಿಯನ್ ಪ್ರತಿಗಳು ಮಾರಾಟವಾಗಿತ್ತು. ಇದು 'ಬಾಜಿಗರ್' ಚಿತ್ರದೊಂದಿಗೆ ಜಂಟಿಯಾಗಿ ಆ ವರ್ಷದ ಅತಿ ಹೆಚ್ಚು ಮಾರಾಟವಾದ ಸೌಂಡ್‌ಟ್ರ್ಯಾಕ್ ಆಲ್ಬಂ ಆಗಿತ್ತು.


 

611

39ನೇ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ, ಈ ಚಿತ್ರವು 11 ನಾಮನಿರ್ದೇಶನಗಳಲ್ಲಿ 2 ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಈ ಎರಡೂ ಪ್ರಶಸ್ತಿಗಳು ಚಿತ್ರದ ‘ಚೋಲಿ ಕೆ ಪೀಚೀ...’ ಹಾಡಿಗೆ ಮಾತ್ರ ಲಭಿಸಿವೆ. ಅಲ್ಕಾ ಯಾಗ್ನಿಕ್ ಮತ್ತು ಇಲಾ ಅರುಣ್ ಜಂಟಿಯಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಪಡೆದರೆ, ಈ ಹಾಡಿಗೆ ಸರೋಜ್ ಖಾನ್ ಅತ್ಯುತ್ತಮ ನೃತ್ಯ ಸಂಯೋಜನೆ ಪ್ರಶಸ್ತಿಯನ್ನು ಪಡೆದರು.


 

711

ಚಿತ್ರದ 'ಚೋಲಿ ಕೆ ಪೀಚೀ...' ಹಾಡಿಗೆ ಸಂಬಂಧಿಸಿದಂತೆ ದೇಶಾದ್ಯಂತ ಸಾಕಷ್ಟು ವಿವಾದಗಳು ಎದ್ದಿದ್ದವು. ಈ ಹಾಡನ್ನು ನಿಷೇಧಿಸುವಂತೆ ಜನರು ನ್ಯಾಯಾಲಯದ ಮೊರೆ ಹೋಗಿದ್ದರು, ಆದರೆ ಕೊನೆಯಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಯಿತು.


 

811

1993 ರಲ್ಲಿ, 'ಖಲ್‌ನಾಯಕ್' ಆಗಸ್ಟ್ 6 ರಂದು ಬಿಡುಗಡೆಯಾಯಿತು. ಅದೇ ವರ್ಷದಲ್ಲಿ, ಶಾರುಖ್ ಖಾನ್ ಅವರ 'ಬಾಜಿಗರ್' ನವೆಂಬರ್ 12 ರಂದು ಮತ್ತು 'ಡರ್' ಡಿಸೆಂಬರ್ 24 ರಂದು ಬಿಡುಗಡೆಯಾಯಿತು. ಮೂರೂ ಚಿತ್ರಗಳಲ್ಲಿ ಚಿತ್ರದಲ್ಲೂ  ನಾಯಕರು ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮತ್ತು  ಮೂರೂ ಚಿತ್ರಗಳು ಹಿಟ್ ಆಗಿದ್ದವು.


 

911

ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ಅವರ ಪ್ರೇಮಕಥೆಗಳು ಚಿತ್ರದ ಚಿತ್ರೀಕರಣದ ಸಮಯದಲ್ಲಿ ತುಂಬಾ ಚರ್ಚೆಯಾಗಿದ್ದವು. ನಂತರ ಮಾಧುರಿ ಅವರ ಒಪ್ಪಂದದಲ್ಲಿ 'ನೋ ಪ್ರೆಗ್ನೆಂಸಿ' ಷರತ್ತಿನ ಮೇಲೆ ಸುಭಾಷ್ ಘಾಯ್ ಸಹಿ ಹಾಕಿದರು ಎಂದು ಹೇಳಲಾಗುತ್ತದೆ. ಆದರೆ, ನಂತರ ಟಾಡಾ ಪ್ರಕರಣದಲ್ಲಿ ಸಂಜಯ್ ಹೆಸರು ಕೇಳಿಬಂದಾಗ ಮಾಧುರಿ ಅವರಿಂದ ದೂರವಾಗಿದ್ದರು.

1011

ಮುಂಬೈ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಬಂಧನಕ್ಕೆ ಒಳಗಾದಾಗ ಚಿತ್ರದ ಚಿತ್ರೀಕರಣ ಮುಗಿಯುವ ಹಂತದಲ್ಲಿತ್ತು. ಸುಭಾಷ್ ಘಾಯ್ ಅವರ ಈ ಚಿತ್ರ ಮತ್ತೆ ಬಿಡುಗಡೆಯಾಗುವುದಿಲ್ಲ ಎಂದು ಜನರು ಭಾವಿಸಿದ್ದರು. ಆದರೆ, ಸಂಜಯ್ ದತ್ ಅವರು ಸುಪ್ರೀಂ ಕೋರ್ಟ್‌ಗೆ ಬರೆದ ಪತ್ರ ಫಲ ನೀಡಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ್ದರು. ಇದಾದ ನಂತರ ಚಿತ್ರದ ಡಬ್ಬಿಂಗ್ ಮುಗಿಸಿದರು. 
 

1111

ಚಿತ್ರದ ಹಾಡಿನ ಸುತ್ತಲಿನ ವಿವಾದದಲ್ಲಿ, ಸುಭಾಯ್ ಘಾಯ್ ಶಿವಸೇನೆದಿಂದ ಸಾಕಷ್ಟು ಸಹಾಯ ಪಡೆದರು. ಚಿತ್ರದ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲು, ಸುಭಾಷ್ ಘಾಯ್ ಚಿತ್ರದ ಸುಮಾರು ಹನ್ನೆರಡು ಪ್ರಥಮ ಪ್ರದರ್ಶನಗಳನ್ನು ಏಕ ಕಾಲದಲ್ಲಿ ಮಾಡಿದರು. ಈ ಸಮಯದಲ್ಲಿ, ನೆರೆದಿದ್ದ ಜನರನ್ನು ನೋಡಿ, ಘಾಯ್ ಅವರಿಗೆ ಈ ಚಿತ್ರವು ಫ್ಲಾಪ್ ಆಗುವುದಿಲ್ಲ ಎಂದು ಮನವರಿಕೆಯಾಯಿತು.

Read more Photos on
click me!

Recommended Stories