ಬೇಬಿ ಬಂಪ್ ಕಾಣಿಸುವ ಬಟ್ಟೆ ಧರಿಸಿ ಪತಿ ಜೊತೆ ಪೋಸ್ ನೀಡಿದ ಅಲಿಯಾ ಭಟ್

First Published | Aug 6, 2022, 3:26 PM IST

ಬಾಲಿವುಡ್ ನಟಿ ಅಲಿಯಾ ಭಟ್ ತಾಯಿಯಾಗುತ್ತಿರುವ ಸಭ್ರಮದಲ್ಲಿದ್ದಾರೆ. ಇತ್ತೀಚಿಗಷ್ಟೆ ಗರ್ಭಿಣಿಯಾಗಿರುವ ವಿಚಾರ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಅಲಿಯಾ ಭಟ್ ಗರ್ಭಿಣಿ ಆಗಿದ್ದರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್, ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. 
 

ಬಾಲಿವುಡ್ ನಟಿ ಅಲಿಯಾ ಭಟ್ ತಾಯಿಯಾಗುತ್ತಿರುವ ಸಭ್ರಮದಲ್ಲಿದ್ದಾರೆ. ಇತ್ತೀಚಿಗಷ್ಟೆ ಗರ್ಭಿಣಿಯಾಗಿರುವ ವಿಚಾರ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಅಲಿಯಾ ಭಟ್ ಗರ್ಭಿಣಿ ಆಗಿದ್ದರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್, ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. 
 

ಅಲಿಯಾ ಭಟ್ ಸದ್ಯ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.ಅಲಿಯಾ ನಟನೆಯ ಡಾರ್ಲಿಂಗ್ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ.ಇದೀಗ ಮತ್ತೊಂದು ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಗರ್ಭಿಣಿ ಅಲಿಯಾ ತನ್ನ ಮುಂದಿನ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

Tap to resize

ಗರ್ಭಿಣಿಯಾದ ಬಳಿಕ ಸದಾ ಸಡಿಲ ಬಟ್ಟೆ ಧರಿಸುತ್ತಿದ್ದ ನಟಿ ಅಲಿಯಾ ಭಟ್ ಮೊದಲ ಬಾರಿಗೆ ಬಾಡಿ ಕಾನ್ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದಾರೆ. ಡಾರ್ಲಿಂಗ್ ಸಿನಿಮಾ ಪ್ರಮೋಷನ್ ನಲ್ಲಿ ಒಂಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಅಲಿಯಾ ಇದೀಗ ಪತಿ ರಣಬೀರ್ ಕಪೂರ್ ಜೊತೆ ಪೋಸ್ ನೀಡಿದ್ದಾರೆ. 

ಅಂದಹಾಗೆ ಅಲಿಯಾ ಮತ್ತು ರಣಬೀರ್ ಕಪೂರ್ ಬಹ್ಮಾಸ್ತ್ರ ಸಿನಿಮಾದ ಪ್ರಮೋಷನ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಸಾಂಗ್ ರಿಲೀಸ್ ಈವೆಂಟ್ ನಲ್ಲಿ ಅಲಿಯಾ ಪತಿ ಜೊತೆ ಆಗಮಿಸಿದ್ದರು. ರಣಬೀರ್ ಜೊತೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 
 

ಬೇಬಿ ಬಂಪ್ ಮುಚ್ಚಲು ಆಲಿಯಾ ತರಹೇವಾರಿ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬೇಬಿ ಬಂಪ್ ಕಾಣದ ಹಾಗೆ ಬಟ್ಟೆ ಧರಿಸಿ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದರು. ಇತ್ತೀಚಿಗಷ್ಟೆ ಹಳದಿ ಬಣ್ಣದ ಶಾರ್ಟ್ ಸಡಿಲ ಬಟ್ಟೆ ಧರಿಸಿದ್ದ ಅಲಿಯಾ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಅಲಿಯಾ ಬೇಬಿ ಬಂಪ್ ಕಾಣುವ ಹಾಗೆ ಫೋಟೋ ಧರಿಸಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. 

ಅಲಿಯಾ ಮುಖದಲ್ಲಿ ಈಗಾಗಲೇ ಗರ್ಭಿಣಿ ಕಳೆ ಕಾಣುತ್ತಿದೆ. ಕೊಂಚ ದಪ್ಪ ಕೂಡ ಆಗಿದ್ದಾರೆ. ಸಿನಿಮಾ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಪತಿ ಜೊತೆ ಬ್ರಹ್ಮಾಸ್ತ್ರ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಬ್ರಹ್ಮಾಸ್ತ್ರ ಸಿನಿಮಾ ಜೊತೆಗೆ ಅಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕರಣ್ ಜೋಹರ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. 

Latest Videos

click me!