'ಲಾಲ್ ಸಿಂಗ್ ಛಡ್ಡಾ' ಸೋಲು: ತಮ್ಮ ಸಿನಿಮಾವನ್ನು ಸಲ್ಮಾನ್‌ಗೆ ಕೊಟ್ಟ ಆಮೀರ್ ಖಾನ್?

First Published Feb 3, 2023, 5:04 PM IST

ಬಹಳ ವರ್ಷಗಳ ಹಿಂದೆ ಆಮೀರ್ ಖಾನ್ (Aamir Khan) ಮತ್ತು ಸಲ್ಮಾನ್ ಖಾನ್ (Salman Khan) ಜೋಡಿ 'ಅಂದಾಜ್ ಅಪ್ನಾ ಅಪ್ನಾ' ಚಿತ್ರದಲ್ಲಿ ಕಾಣಿಸಿಕೊಂಡಿತ್ತು. ಈ ಚಿತ್ರ  ಸಾಕಷ್ಷು ಮೆಚ್ಚುಗೆ ಗಳಿಸಿತ್ತು ಆದರೆ, ಅಂದಿನಿಂದ ಈ ಜೋಡಿ ಮತ್ತೆ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ  ಅಮೀರ್ ತಮ್ಮ ಒಂದು ಸಿನಿಮಾವನ್ನು ಸಲ್ಮಾನ್ ಗೆ ಆಫರ್ ಮಾಡಿದ್ದಾರೆ ಎಂಬ ಸುದ್ದಿಯಿದೆ.

 ಬಾಲಿವುಡ್‌ನ ಹಿಟ್‌ಮ್ಯಾನ್ ಎಂದು ಕರೆಯಲ್ಪಡುವ ಆಮೀರ್ ಖಾನ್ ಅವರು 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಫ್ಲಾಪ್ ನಂತರ ಈ ಫೇಮ್‌  ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಅದಕ್ಕಾಗಿಯೇ ನಟನೆಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.  

ಆಮೀರ್‌ ಅವರು ಸ್ವಲ್ಪ ಸಮಯದವರೆಗೆ ನಟಿಸುವುದಿಲ್ಲ ಎಂದ ಮಾತ್ರಕ್ಕೆ ಖಂಡಿತವಾಗಿಯೂ ಚಲನಚಿತ್ರಗಳಿಗೆ ಸಂಬಂಧಿಸಿದ ಇತರ ಕೆಲಸಗಳಿಂದ ದೂರ ಇರುತ್ತಾರೆ ಎಂದು ಅರ್ಥವಲ್ಲ.

ಮಾಧ್ಯಮ ವರದಿಗಳ ಪ್ರಕಾರ, 'ಲಾಲ್ ಸಿಂಗ್ ಚಡ್ಡಾ' ನಂತರ, ಆಮೀರ್ ಖಾನ್ ಸ್ಪ್ಯಾನಿಷ್ ಚಿತ್ರ 'ಚಾಂಪಿಯನ್ಸ್' ರಿಮೇಕ್‌ನಲ್ಲಿ ಕೆಲಸ ಮಾಡಲು ಹೊರಟಿದ್ದಾರೆ. ಆದರೆ ಈಗ ಈ ಚಿತ್ರವನ್ನು ಸಲ್ಮಾನ್ ಖಾನ್ ಕೈಗೆ ನೀಡಿದ್ದಾರೆ.

ETimes ವರದಿ ಪ್ರಕಾರ, ಆಮೀರ್ ಸಲ್ಮಾನ್ ಖಾನ್‌ಗೆ ಪ್ರಾಜೆಕ್ಟ್‌ಗೆ ಆಫರ್ ನೀಡಿದ್ದಾರೆ. ಬಾಲಿವುಡ್ ನ ಭಾಯ್ ಜಾನ್ ಕೂಡ ಈ ಯೋಜನೆಗೆ ಆಸಕ್ತಿ ತೋರಿದ್ದಾರೆ. ಆದರೆ, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಆದರೆ ಆಮೀರ್ ಖಾನ್ ನಿರ್ಮಾಣ ಮಾಡಲಿರುವ ಏಕೈಕ ಚಿತ್ರ 'ಚಾಂಪಿಯನ್ಸ್' ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಮಿಸ್ಟರ್ ಪರ್ಫೆಕ್ಷನಿಸ್ಟ್ ಚಿತ್ರದಲ್ಲಿನ ಪಾತ್ರಕ್ಕೆ ಸಲ್ಮಾನ್ ಖಾನ್ ಮಾತ್ರ ನ್ಯಾಯ ಸಲ್ಲಿಸುತ್ತಾರೆ ಎಂದು ನಂಬುತ್ತಾರೆ. ಆದರೂ ಈ ಚಿತ್ರಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಘೋಷಣೆ ಮಾಡಲಾಗಿಲ್ಲ. ಆರ್ ಎಸ್ ಪ್ರಸನ್ನ ಈ ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ.

ಕಳೆದ ವರ್ಷ ಆಮೀರ್ ಖಾನ್ ಅವರು ಮಾಧ್ಯಮದೊಂದಿಗಿನ ಸಂವಾದದಲ್ಲಿ, ಚಲನಚಿತ್ರಗಳನ್ನು ಮಾಡುವಾಗ ನಾನು ತುಂಬಾ ಕಳೆದುಹೋಗುತ್ತೇನೆ, ನನ್ನ ಜೀವನದಲ್ಲಿ ಬೇರೆ ಏನೂ ಆಗುವುದಿಲ್ಲ ಎಂದು ಹೇಳಿದ್ದರು. 'ಲಾಲ್ ಸಿಂಗ್ ಚಡ್ಡಾ' ನಂತರ ನಾನು ಚಾಂಪಿಯನ್ಸ್‌ನಲ್ಲಿ ಕೆಲಸ ಮಾಡಬೇಕಿತ್ತು. ಆದರೆ ‘ಚಾಂಪಿಯನ್ಸ್’ ನಿರ್ಮಿಸುವುದಾಗಿ ಹೇಳಿದ್ದರು. ನಾನು 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಾನೀಗ ವಿರಾಮ ತೆಗೆದು ಕೊಳ್ಳಲು ಬಯಸುತ್ತೇನೆ' ಎಂದು ಅಮೀರ್ ಖಾನ್ ಹೇಳಿದ್ದಾರೆ. 

ಈಗ ನಾನು ವಿಭಿನ್ನವಾದದ್ದನ್ನು ಅನುಭವಿಸಬೇಕು. ಹೀಗಾಗಿ ಕೆಲ ಕಾಲ ನಟನೆಯಿಂದ ವಿರಾಮ ತೆಗೆದುಕೊಳ್ಳುತ್ತೇನೆ. ‘ಚಾಂಪಿಯನ್ಸ್’ ಕಥೆ ನಂಬಲರ್ಹವಾಗಿದೆ ಎಂದೂ ಅವರು ಹೇಳಿದ್ದಾರೆ.

click me!