ಟ್ರೋಲ್‌ಗಳಿಗೆ ಡೋಂಟ್‌ ಕೇರ್‌! ರೊಮ್ಯಾಂಟಿಕ್ ಫೋಟೋಸ್ ಹಂಚಿಕೊಂಡ ರವಿಂದ್ರ ಚಂದ್ರಶೇಖರನ್

First Published Feb 2, 2023, 6:05 PM IST

 ಎಷ್ಟೇ ನೆಗೆಟಿವ್ ಕಾಮೆಂಟ್ ಬಂದ್ರೂ ಕೇರ್ ಮಾಡದೆ ರೊಮ್ಯಾಂಟಿಕ್ ಫೋಟೋ ಹಂಚಿಕೊಳ್ಳುತ್ತಿರುವ ಟ್ರೆಂಡಿಂಗ್ ಕಪಲ್...ಕಾಮೆಂಟ್‌ ನೋಡಿ ಬೇಸರ ಮಾಡಿಕೊಳ್ಳಬೇಡಿ....

ತಮಿಳು ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವಿಂದ್ರ ಚಂದ್ರಶೇಖರನ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ದಿನವೂ ಒಂದೊಂದು ವಿಚಾರಕ್ಕೆ ಟ್ರೋಲ್ ಅಗುತ್ತಿರುತ್ತಾರೆ. 

ರವಿಂದ್ರ ಚಂದ್ರಶೇಖರನ್ ನೋಡಿ ದಪ್ಪಗಿದ್ದಾ ಬಣ್ಣ ಕಡಿಮೆ ಇದ್ದಾರೆ ಎಂದು ಅದೆಷ್ಟೇ ಸಲ ನೆಟ್ಟಿಗರು ಕಾಮೆಂಟ್ ಮಾಡಿದ್ದರೂ ಕೇರ್ ಮಾಡದ ಮಹಾಲಕ್ಷ್ಮಿ ರೊಮ್ಯಾಂಟಿ ಫೋಟೋ ಹಂಚಿಕೊಳ್ಳುತ್ತಾರೆ. 

ಜೈಪುರದ ಐಷಾರಾಮಿ ಹೋಟೆಲ್‌ನ ಮುಂದೆ ಇಬ್ಬರು ಕ್ಯಾಮೆರಾಗೆ ಫೋಸ್‌ ಕೊಟ್ಟಿರುವ ಫೋಟೋ ಅಪ್ಲೋಡ್ ಮಾಡಿ ರವಿ 'ಪ್ರಪಂಚದ 8ನೇ ಅದ್ಭುತ ನನ್ನ ಹೆಂಡತಿ' ಎಂದು ಬರೆದುಕೊಂಡಿದ್ದಾರೆ. 

ನಿನ್ನಂತ ಸುಂದರನ ಚೆನ್ನಾಗಿ ನೋಡಿಕೊಳ್ಳಲು ಆಕೆ ಅದ್ಭುತನೇ ಆಗಿರಬೇಕು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕೇರ್ ಮಾಡದೆ ಮಹಾಲಕ್ಷ್ಮಿ ಕೂಡ ಕಾಮೆಂಟ್ ಮಾಡಿದ್ದಾರೆ.

'ಜನರು ಏನೇ ಹೇಳಲಿ ಎಷ್ಟೇ ಹೇಳಲಿ ನನ್ನ ಉಸಿರು ಇರುವವರೆಗೂ ನಿನ್ನನ್ನು ಪ್ರೀತಿಸುವೆ. ನನ್ನ ಹೃದಯ ಬಡಿತ ನಿಲ್ಲುವವರೆಗೂ ನಿನ್ನ ಧ್ಯಾನಿಸುವೆ. ನೀನು ಇಲ್ಲದೆ ನಾನಿಲ್ಲ. ನೀನೇ ನನ್ನ ಪ್ರಪಂಚ' ಎಂದು ಮಹಾಲಕ್ಷ್ಮಿ ಕಾಮೆಂಟ್ ಮಾಡಿದ್ದಾರೆ. 

ವೈವಾಹಿಕ ಜೀವನಕ್ಕೆ ಕಾಲಿಟ್ಟು 100 ದಿನ ಪೂರೈಸಿದ್ದೀವಿ ಎಂದು ರವಿಚಂದ್ರನ್ ಮತ್ತು ಮಹಾಲಕ್ಷ್ಮಿ ಐಷಾರಾಮಿ ಹೋಟೆಲ್‌ನಲ್ಲಿ ಐಷಾರಾಮಿ ಭೋಜನ ಮಾಡಿದ್ದಾರೆ. ಈ ಬಗ್ಗೆ ರವಿಂದ್ರ ಪೋಸ್ಟ್‌ ಮಾಡಿದ್ದಾರೆ.

'100 ದಿನಗಳು ಪೂರೈಸಿದ್ದೀವಿ. ಅಮ್ಮು ರೊಮ್ಯಾಂಟಿಕ್ ಆಗಿ ಕ್ಯಾಪ್ಶನ್ ಬರೆಯಲು ಪಯತ್ನಿಸಿದೆ ಆದರೆ ಆಗಲಿಲ್ಲ. 100 ದಿನಗಳ ಪೋಸ್ಟ್‌ ಆಗಿರುವ ಕಾರಣ ನಾಟಕೀಯವಾಗಿ ಬರೆಯಲು ಆಗುತ್ತಿಲ್ಲ'ಎಂದಿದ್ದಾರೆ ರವಿಂದ್ರ.

'ಅಮ್ಮು 37 ವರ್ಷಗಳ ನನ್ನ ಜೀವನದಲ್ಲಿ ಮತ್ತೆ 100 ದಿನ ವಿಶೇಷವಾಗಿ ಬದುಕಿರುವೆ ಅನಿಸುತ್ತಿದೆ. ನಿನ್ನ ಪ್ರೀತಿ, ಹಾರೈಕೆ, ತಮಾಷೆಯಿಂದ ನನ್ನ ಜೀವನ ಮುಂದೆ ಸಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ ರವಿ. 

click me!