ದಕ್ಷಿಣದ ಫೇಮಸ್‌ ಕಾಮಿಡಿಯನ್‌ ಬ್ರಹ್ಮಾನಂದಂ ಆಸ್ತಿ ವಿವರ ಕೇಳಿದರೆ ಶಾಕ್‌ ಆಗುತ್ತೀರಾ?

First Published Feb 1, 2023, 5:57 PM IST

ದಕ್ಷಿಣದ ಪ್ರತಿಯೊಂದು ಭಾಷೆ ಅದರಲ್ಲೂ ಹೆಚ್ಚಾಗಿ ತೆಲಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಹಾಸ್ಯನಟ ಬ್ರಹ್ಮಾನಂದಂ (Brahmanandam) ಇಂದು ಅಂದರೆ ಫೆಬ್ರವರಿ 1 ರಂದು 67 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಕಾಮಿಡಿ ಹಾಗೂ ನಟನೆಯ ಮೂಲಕ ಜನಮನ ಗೆದ್ದದಿರುವ ಬ್ರಹ್ಮಾನಂದಂ ಅವರ ಆಸ್ತಿ ವಿವರ ಕೇಳಿದರೆ ಗ್ಯಾರಂಟಿ ಆಶ್ಚರ್ಯಾವಾಗುತ್ತದೆ.  ಕಡುಬಡತನದಲ್ಲಿ ಬದುಕುತ್ತಿದ್ದ ಈ ನಟ ಇಂದು  ಸಾಕಷ್ಟು ಆಸ್ತಿ ಹಾಗೂ ಕಾರುಗಳ ಮಾಲೀಕ.

ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಬ್ರಹ್ಮಾನಂದಂ ಸುಮಾರು 490 ಕೋಟಿ ಆಸ್ತಿಯ ಒಡೆಯ. ವರದಿಗಳ ಪ್ರಕಾರ , ಅವರು ಚಿತ್ರದಲ್ಲಿ ಕೆಲಸ ಮಾಡಲು 1-2 ಕೋಟಿ ರೂ ಚಾರ್ಜ್‌ ಮಾಡುತ್ತಾರೆ.

ಆಂಧ್ರಪ್ರದೇಶದ ಸತೇನಪಲ್ಲಿ ಜಿಲ್ಲೆಯ ಮುಪಲ್ಲಾ ಗ್ರಾಮದಲ್ಲಿ ಜನಿಸಿದ ಬ್ರಹ್ಮಾನಂದಂ ಅವರು ತಮ್ಮ ಬಾಲ್ಯವನ್ನು ಬಡತನದಲ್ಲಿ ಕಳೆದರು ಎಂದು ಹೇಳಲಾಗುತ್ತದೆ. ಅವರ ಕುಟುಂಬ ಒಂದೊತ್ತು ಊಟಕ್ಕೂ ಸಾಕಷ್ಟು ಕಷ್ಟಪಡಬೇಕಾಗಿತ್ತು.

ಆದರೆ ಇಂದು ಬ್ರಹ್ಮಾನಂದಂ ತುಂಬಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಕೋಟಿಗಟ್ಟಲೆ ಆಸ್ತಿಯ ಜೊತೆಗೆ ಐಷಾರಾಮಿ ಕಾರುಗಳ ಸಂಗ್ರಹವೇ ಇವರ ಬಳಿ ಇದೆ. ಅವರು Mercedes Benz, Innova, Audi Q7, Audi R8 ನಂತಹ ಕಾರುಗಳನ್ನು ಹೊಂದಿದ್ದಾರೆ.

ಬ್ರಹ್ಮಾನಂದಂ ಅವರು ಹೈದರಾಬಾದ್‌ನ ಐಷಾರಾಮಿ ಪ್ರದೇಶದಲ್ಲಿ ಅಂದರೆ ಜುಬಿಲಿ ಹಿಲ್ಸ್‌ನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಇದಲ್ಲದೇ ವಿವಿಧ ನಗರಗಳಲ್ಲಿ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ.

ಬ್ರಹ್ಮಾನಂದಂ ತಮ್ಮ 36 ವರ್ಷಗಳ ವೃತ್ತಿ ಜೀವನದಲ್ಲಿ 1100 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದರೆ  ಆಶ್ಚರ್ಯವಾಗುತ್ತದೆ. ದಕ್ಷಿಣದ ಬಹುತೇಕ ಚಿತ್ರಗಳಲ್ಲಿ ಅವರು ಹಾಸ್ಯನಟನ ಪಾತ್ರವನ್ನು ನಿರ್ವಹಿಸಿದ್ದಾರೆ.

ಬ್ರಹ್ಮಾನಂದಂ ಅವರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲೂ ದಾಖಲಾಗಿದೆ. ಒಂದೇ ಭಾಷೆಯಲ್ಲಿ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಕ್ಕಾಗಿ 2007 ರಲ್ಲಿ ಈ ದಾಖಲೆಯನ್ನು ದಾಖಲಿಸಲಾಗಿದೆ. ಅವರಿಗೆ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ

ಚಿತ್ರಗಳಲ್ಲಿ ಕೆಲಸ ಮಾಡುವ ಮೊದಲು ಬ್ರಹ್ಮಾನಂದಂ ಅವರು ಸ್ಕೋರ್‌ನಲ್ಲಿ ಟೀಸರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಯಾವಾಗಲೂ ನಟನಾಗಲು ಬಯಸಿದ್ದ  ಅವರು 1987 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಬ್ರಹ್ಮಾನಂದಂ ಕುಟುಂಬದ ಬಗ್ಗೆ ಹೇಳುವುದಾದರೆ, ಅವರ ಪತ್ನಿಯ ಹೆಸರು ಲಕ್ಷ್ಮಿ ಕನ್ನೆಗಂಟಿ. ಅವರಿಗೆ ರಾಜ ಗೌತಮ ಮತ್ತು ಸಿದ್ಧಾರ್ಥ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ರಾಜ ಗೌತಮ್ ಕೂಡ ಒಬ್ಬ ನಟ ಮತ್ತು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

click me!