ಶಾರುಖ್‌ ಖಾನ್‌ ಓಂ ಶಾಂತಿ ಓಂ ಸಿನಿಮಾದ ಹಾಡಿನಲ್ಲಿ ಆಮೀರ್‌ ಖಾನ್‌ ನಟಿಸಲು ನಿರಾಕರಿಸಿದ್ದೇಕೆ?

ಫರಾ ಖಾನ್‌ (Farah Khan) ನಿರ್ದೇಶನದ ಓಂ ಶಾಂತಿ ಓಂ (Om Shanti Om) ಸಿನಿಮಾ ಬಾಲಿವುಡ್‌ನ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಒಂದು. ದೀಪಿಕಾ ಪಡುಕೋಣೆ  (Deepika Padukone) ಅವರು ಈ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದರು. ಚಿತ್ರಗದ ಹಾಡುಗಳು ಮತ್ತು ಶಾರುಖ್ ಖಾನ್  (Shah Rukh Khan) ಸಂಭಾಷಣೆಗಳು ವರ್ಷಗಳಿಂದ ನೆನಪಿನಲ್ಲಿ ಉಳಿಯುತ್ತವೆ. ಓಂ ಶಾಂತಿ ಓಂ ಹೊಂದಿರುವ ಮತ್ತೊಂದು ವಿಶೇಷತೆ ಎಂದರೆ ದಿವಾಂಗಿ ಹಾಡು. ಈ ಹಾಡು  ಉದ್ಯಮದ  ಹಲವು ದೊಡ್ಡ ತಾರೆಯರನ್ನು ಒಟ್ಟುಗೂಡಿಸಿತು. ಹಾಡಿನಲ್ಲಿ 31 ಸ್ಟಾರ್‌ಗಳಿದ್ದರು. ಆದರೆ ಆಮೀರ್ ಖಾನ್ (Aamir Khan)  ಮತ್ತು ಅಮಿತಾಬ್ ಬಚ್ಚನ್ (Amitabh Bachchan) ಹಾಡಿನಲ್ಲಿ ಕಾಣಿಸಿಕೊಳ್ಳಲಿಲ್ಲ. ಫರಾ ಖಾನ್‌ ಅವರು ಇದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಮನೀಶ್ ಪೌಲ್‌ ಅವರ ಪಾಡ್‌ಕಾಸ್ಟ್‌ನಲ್ಲಿ ಬಿಗ್ ಬಿ ಮತ್ತು ಆಮೀರ್ ಖಾನ್ ಅವರು ಓಂ ಶಾಂತಿ ಓಂ ಸಿನಿಮಾದ ದಿವಾಂಗಿ ಹಾಡಿನ ಭಾಗವಾಗದಿರುವ ನಿಜವಾದ ಕಾರಣವನ್ನು ಫರಾ ಬಹಿರಂಗಪಡಿಸಿದ್ದಾರೆ.

ಅದೇ ವಾರ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮದುವೆ ಇದ್ದ ಕಾರಣ ಬಚ್ಚನ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು  ಸಾಧ್ಯವಾಗಲಿಲ್ಲ ಎಂದು ನಿರ್ದೇಶಕರು ಹೇಳಿದರು. ಆದರೆ ಆಮೀರ್ ನೀಡಿದ ಕಾರಣ ತುಂಬಾ ತಮಾಷೆಯಾಗಿದೆ ಎಂದು ಫರಾ ಹೇಳಿದ್ದಾರೆ.


ಆ ವೇಳೆ ‘ತಾರೆ ಜಮೀನ್ ಪರ್’ ಎಡಿಟ್ ಮಾಡುತ್ತಿದ್ದೇನೆ ಹಾಗಾಗಿ ಬರಲು ಸಾಧ್ಯವಿಲ್ಲ ಎಂದು ಆಮೀರ್ ಹೇಳಿದ್ದಾಗಿ ಆಕೆ ಬಹಿರಂಗಪಡಿಸಿದ್ದಾರೆ.

ಎರಡು ಗಂಟೆಗಳಲ್ಲಿ ಚಿತ್ರೀಕರಣ ಮುಗಿಸುವುದಾಗಿ ಫರಾ ಅವರಿಗೆ ಮನವಿ ಮಾಡಿದರು. ಆದರೆ, ನಾನು ಎಡಿಟಿಂಗ್ ಬಿಟ್ಟು 2 ಗಂಟೆ ಬಂದರೆ ಚಿತ್ರ 6 ತಿಂಗಳು ವಿಳಂಬವಾಗುತ್ತದೆ  ಎಂದು ಆಮೀರ್ ಆಕೆಗೆ ಕರೆ ಮಾಡಿದರು.

ಬಹಳ ಸಮಯದ ನಂತರ ಫರಾ ಅವರು ಆಮೀರ್‌ ಖಾನ್‌ ಅವರಿಗೆ ಹಾಡಿನಲ್ಲಿ ಕಾಣಿಸಿಕೊಳ್ಳದ ಹಿಂದೆ ಇರುವ ನಿಜವಾದ ಕಾರಣ ಕೇಳಿದಾಗ ಆಮೀರ್ ಅವರು ಬರಲು ಬಯಸಲಿಲ್ಲ ಎಂದು ಹೇಳಿದರು.

ದಿಲೀಪ್ ಕುಮಾರ್ ಮತ್ತು ಸೈರಾಬಾನು ಅವರನ್ನು ಸಹ ಈ ಹಾಡಿನಲ್ಲಿ ಸೇರಿಸುವುದಾಗಿ ಶಾರುಖ್ ಖಾನ್ ಫರಾಗೆ ಭರವಸೆ ನೀಡಿದ್ದರು ಎಂದು ನಿರ್ದೇಶಕರು ಸಂದರ್ಶನವೊಂದರಲ್ಲಿ ಹೇಳಿದರು.

ಸಲ್ಮಾನ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರು ಧರ್ಮೇಂದ್ರ ನೃತ್ಯವನ್ನು ನೋಡಲು ಬಯಸಿದ್ದರು ಮತ್ತು ಆ ಪೂರ್ವಸಿದ್ಧತೆಯಿಲ್ಲದ ಕ್ಷಣವನ್ನು ಹಾಡಿನಲ್ಲಿ ಸುಂದರವಾಗಿ ಸೆರೆಹಿಡಿಯಲಾಗಿದೆ ಎಂದು ಫರಾ ಖಾನ್‌ ನೆನಪಿಸಿಕೊಂಡಿದ್ದಾರೆ. 

Latest Videos

click me!