ಶಾರುಖ್ ಖಾನ್ (Shahrukh Khan) ಅಭಿನಯದ 'ಜವಾನ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಜನರು ಚಿತ್ರವನ್ನು ತುಂಬಾ ಇಷ್ಟಪಡುತ್ತಾರೆ. ಅಟ್ಲೀ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ (Nayanthara) ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಯನತಾರಾ ದಕ್ಷಿಣ ಭಾರತದ ಜನಪ್ರಿಯ ನಟಿ, ಇವರನ್ನ ಲೇಡಿ ಸೂಪರ್ ಸ್ಟಾರ್ ಅಂತಾನೆ ಜನ ಗುರುತಿಸೋದು. ಇವರು ತನ್ನ ನಟನೆಯಿಂದ ಮಾತ್ರವಲ್ಲ, ಸೌಂದರ್ಯ ಮತ್ತು ಫಿಟ್ನೆಸ್ ಮೂಲಕವೂ ತುಂಬಾನೆ ಜನಪ್ರಿಯರಾಗಿದ್ದಾರೆ.
ನಯನತಾರ ಫಿಟ್ನೆಸ್ ಮತ್ತು ಸೌಂದರ್ಯವನ್ನು ನೋಡಿದರೆ, ಅವರಿಗೆ 38 ವರ್ಷ ವಯಸ್ಸಾಗಿದೆ ಮತ್ತು ಇಬ್ಬರು ಮಕ್ಕಳ ತಾಯಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಈ ವಯಸ್ಸಿನಲ್ಲಿ, ನಯನತಾರಾ ಟೀನೇಜ್ ಹುಡುಗಿಯರಿಗೆ ಟಕ್ಕರ್ ಕೊಡುವಂತಹ, ಸೌಂದರ್ಯ ಮತ್ತು ಫಿಟ್ನೆಸ್ ಹೊಂದಿದ್ದಾರೆ. ನಿಮಗೂ ಇವರ ಫಿಟ್ನೆಸ್ ಸೀಕ್ರೆಟ್ (fitness secret) ಬಗ್ಗೆ ತಿಳಿಯೋ ಕುತೂಹಲ ಇದ್ರೆ, ಇದನ್ನ ಓದಿ..
ಪ್ರತಿದಿನ ವರ್ಕೌಟ್ ಮಾಡ್ತಾರೆ
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಹುಡುಗಿಯರು ಬ್ಯುಸಿ ಲೈಫ್ ಸ್ಟೈಲ್ ನಿಂದಾಗಿ ಜಿಮ್ ಗೆ ಹೋಗೋದಿಲ್ಲ, ವರ್ಕೌಟ್ (workout), ಯೋಗ ಏನೂ ಸಹ ಮಾಡೋದಿಲ್ಲ. ಆದರೆ ನಯನತಾರಾ ತನ್ನ ಫಿಟ್ನೆಸ್ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ ಮತ್ತು ಇದಕ್ಕಾಗಿ ಪ್ರತಿದಿನ ವ್ಯಾಯಾಮ ಮಾಡುತ್ತಾರೆ.
ಡಯಟ್ ಮಾಡೋದಿಲ್ಲ
ನಯನತಾರಾ ಬ್ಯಾಲೆನ್ಸ್ ತೂಕವನ್ನು ಕಾಪಾಡಿಕೊಳ್ಳಲು ಅಥವಾ ಕಳೆದುಕೊಳ್ಳಲು ಕ್ರ್ಯಾಶ್ ಡಯಟ್ (crash diet) ಅನುಸರಿಸುವುದಿಲ್ಲ. ಸದೃಢವಾಗಿರಲು ಅವರು ಎಲ್ಲಾ ರೀತಿಯ ಆರೋಗ್ಯಕರ ಆಹಾರವನ್ನು ತಿನ್ನುತ್ತಾರೆ. ಹಣ್ಣುಗಳು, ತರಕಾರಿಗಳನ್ನು ಒಳಗೊಂಡಿರುವ ಅವರ ಆಹಾರವು ಬ್ಯಾಲೆನ್ಸ್ ಆಗಿರುತ್ತೆ. ಅಲ್ಲದೇ ತಮ್ಮ ಡಯಟ್ ನಲ್ಲಿ ಮಾಂಸ ಮತ್ತು ಮೊಟ್ಟೆಗಳನ್ನು ಸಹ ಸೇವಿಸುತ್ತಾರೆ.
nayanthara
ಎಳನೀರು ಅಂದ್ರೆ ಪ್ರೀತಿ
ನಯನತಾರಾಗೆ ಎಳನೀರು ಅಂದ್ರೆ ತುಂಬಾನೆ ಇಷ್ಟ. ಅವರ ಸೌಂದರ್ಯಕ್ಕೆ ಒಂದು ರೀತಿಯಲ್ಲಿ ಮುಖ್ಯ ಕಾರಣ ಕೂಡ ಇದು ಎನ್ನಲಾಗಿದೆ. ನಯನತಾರಾ ಬೆಳಗ್ಗೆ ಎಳನೀರು, ತೆಂಗಿನಕಾಯಿ ಸ್ಮೂಥಿಗಳನ್ನು ಮಿಸ್ ಮಾಡದೇ ತೆಗೆದುಕೊಳ್ಳುತ್ತಾರೆ. ಎಳನೀರಿನಲ್ಲಿ ವಿವಿಧ ಪೋಷಕಾಂಶಗಳು ಕಂಡುಬರುತ್ತವೆ ಮತ್ತು ಇದು ಬಹಳ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ.
ಸಂಸ್ಕರಿಸಿದ ಸಕ್ಕರೆಯಿಂದ ದೂರ ಇರ್ತಾರೆ
ಸಕ್ಕರೆ ಬೊಜ್ಜು ಅಥವಾ ಇತರ ಕಾಯಿಲೆಗಳ ಮೂಲವಾಗಿದೆ. ಸಕ್ಕರೆಯನ್ನು ಬಿಳಿ ವಿಷ ಎಂದು ಕರೆಯಲಾಗುತ್ತದೆ. ನಯನತಾರಾ ಅವರ ಫಿಟ್ನೆಸ್ನ ದೊಡ್ಡ ರಹಸ್ಯವೆಂದರೆ ಅವರು ಯಾವಾಗಲೂ ಸಕ್ಕರೆಯಿಂದ ದೂರವಿರುತ್ತಾರೆ.
ಹೈಡ್ರೇಟ್ ಆಗಿರುವುದು ಸಹ ಮುಖ್ಯ.
ದೇಹದ ಆರೋಗ್ಯಕರ ಮತ್ತು ಸದೃಢ ಮತ್ತು ಉತ್ತಮ ಕಾರ್ಯನಿರ್ವಹಣೆಗಾಗಿ ದೇಹವನ್ನು ಹೈಡ್ರೇಟ್ (Hydrate) ಆಗಿರಿಸುವುದು ಮುಖ್ಯ. ಇದಕ್ಕಾಗಿ, ನಯನತಾರಾ ತನ್ನ ಆಹಾರದಲ್ಲಿ ಎಳನೀರು ಮಾತ್ರವಲ್ಲದೆ ಹಣ್ಣಿನ ಜ್ಯೂಸ್ ಮತ್ತು ಸೂಪ್ ಸಹ ಸೇರಿಸುತ್ತಾರೆ.
ಯೋಗ
ಯೋಗವು ದೈಹಿಕ ಆರೋಗ್ಯವನ್ನು (Physical health) ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಉತ್ತೇಜಿಸುತ್ತದೆ. ನಯನತಾರಾ ನಿಯಮಿತವಾಗಿ ಯೋಗ ಮಾಡುತ್ತಾರೆ. ತೂಕವನ್ನು ನಿಯಂತ್ರಿಸಲು ಮತ್ತು ಉತ್ತಮ ಆರೋಗ್ಯಕ್ಕೆ ಬೇಕಾದ ಯೋಗ ಮಾಡುತ್ತಾರೆ.