ಆಮೀರ್ ಮಧ್ಯಪ್ರದೇಶದ ಪ್ರಸಿದ್ಧ ಚಂದೇರಿ ಸೀರೆಯನ್ನು ತಮ್ಮ ಸಹ-ನಟಿ ಕರೀನಾ ಕಪೂರ್‌ಗಾಗಿ ಖರೀದಿಸುತ್ತಿದ್ದಾರೆ. ಈ ವಿಡಿಯೋ ಆಮೀರ್ ಮತ್ತು ಕರೀನಾ ಕಪೂರ್ '3 ಈಡಿಯಟ್ಸ್' ಚಿತ್ರದ ಚಿತ್ರೀಕರಣದ ಸಮಯದ್ದಾಗಿದೆ.
ಕರೀನಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಆಮೀರ್ ಖಾನ್ ತನ್ನ ಸಹನಟಿ ಕರೀನಾ ಕಪೂರ್‌ಗೆ ಕೈಮಗ್ಗ ಕೆಲಸಗಾರರಿಂದ ಸೀರೆಯನ್ನು ಖರೀದಿಸುತ್ತಿರುವುದನ್ನು ಕಾಣಬಹುದು.
'ನಾನು ಈ ಸೀರೆಯನ್ನು ಖರೀದಿಸಬಹುದೇ? ಎಂದು ಆಮೀರ್ ಕೈಮಗ್ಗ ಕೆಲಸಗಾರರಿಗೆ ಕೇಳುತ್ತಾರೆ ಮತ್ತು ಅವರು ನೀವು ಅದನ್ನು ಖರೀದಿಸಬಹುದು' ಎಂದು ಹೇಳುತ್ತಾರೆ. ಇದರ ನಂತರ ಅಮೀರ್ ಖಾನ್ ನಂತರ 'ನಾನುಈ ಸೀರೆಯನ್ನು ಕರೀನಾ ಜಿಗಾಗಿ ಖರೀದಿಸುತ್ತೇನೆ. ಇದು ನನ್ನ ಕಡೆಯಿಂದ ಉಡುಗೊರೆಯಾಗಿದೆ' ಎಂದು ಹೇಳುತ್ತಾರೆ
ಆದರೆ ಈ ಸೀರೆಗೆ ನಾನು ನಿಮಗೆ 6ವರೆ ಸಾವಿರ ಅಲ್ಲ 25 ಸಾವಿರ ರೂಪಾಯಿ ಕೊಡುತ್ತೇನೆ. ಏಕೆಂದರೆ ಅದು ನಿಮ್ಮ ಮಾರುಕಟ್ಟೆ ಬೆಲೆ ಎಂದು ಆಮೀರ್ ಕೈಮಗ್ಗದವರಿಗೆ ಹೇಳುತ್ತಾರೆ. ವೀಡಿಯೊದಲ್ಲಿ ಈ ಸೀರೆ ತಯಾರಿಸಲು ಸುಮಾರು 15 ದಿನಗಳನ್ನು ತೆಗೆದುಕೊಂಡಿತು ಎಂದು ಅಂಗಡಿಯವ ಆಮೀರ್ ಖಾನ್ ಬಳಿ ಹೇಳುತ್ತಿರುವುದು ಕಂಡು ಬಂದಿದೆ.
ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಲಾಲ್ ಸಿಂಗ್ ಚಡ್ಡಾ ಸಿನಿಮಾಗೂ ಮೊದಲು ತಲಾಶ್ ಮತ್ತು 3 ಈಡಿಯಟ್ಸ್ ನಂತಹ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾವು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಯ ಕಥೆಯಾಗಿದ್ದು, ಅವನು ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುತ್ತಾನೆ.
ಈ ಚಿತ್ರದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ, 1984 ರ ಗಲಭೆ, ಆಪರೇಷನ್ ಬ್ಲೂ ಸ್ಟಾರ್, 1983 ರ ವಿಶ್ವಕಪ್ ಗೆಲುವು, ರಾಮಮಂದಿರ ಆಂದೋಲನ ಮತ್ತು ದೇಶದ ದಿಕ್ಕು ಮತ್ತು ಸ್ಥಿತಿಯನ್ನು ಬದಲಾಯಿಸಿದ ಇನ್ನೂ ಅನೇಕ ಘಟನೆಗಳು ಕಂಡುಬರುತ್ತವೆ.
ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಚಿತ್ರೀಕರಿಸಿರುವುದು ದಾಖಲೆಯಾಗಿದೆ. ಇದರೊಂದಿಗೆ ಈ ಸಿನಿಮಾದ ಶೂಟಿಂಗ್ 200 ದಿನ ಪೂರೈಸಿದೆ. ಇದು ಆಮೀರ್ ಖಾನ್ ಅವರ ಲಗಾನ್ ನಂತರ ಚಿತ್ರೀಕರಣಗೊಂಡ ಸುದೀರ್ಘ ಚಿತ್ರವಾಗಿದೆ.