Malaika Arora Trolled: ಬ್ರಾ ಧರಿಸದೆ ಮಲೈಕಾ ಮಾರ್ನಿಂಗ್ ವಾಕ್, ಕಾಲೆಳೆದ ನೆಟ್ಟಿಗರು

First Published | Jan 21, 2022, 4:06 PM IST

ಮಲೈಕಾ ಅರೋರ(Malaika Arora) ಯೋಗ ಕ್ಲಾಸ್, ವಾಕಿಂಗ್ ಬಂದಾಗೆಲ್ಲ ಪಾಪ್ಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ. ಈ ಬಾರಿ ನಟಿ ಬ್ರಾ ಹಾಕದೆ ಬಂದು ಟ್ರೋಲ್ ಆಗಿದ್ದಾರೆ.

ನಟಿ ಮಲೈಕಾ ಅರೋರಾ ಬಾಲಿವುಡ್‌ನಲ್ಲಿ(Bollywood) ಹೆಚ್ಚು ಬೇಡಿಕೆಯಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಚೈಂಯಾ ಚೈಂಯಾ ಚೆಲುವೆ ಅಂದಿನಿಂದ ಇಂದಿನವರೆಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಉನ್ನತ-ಮಟ್ಟದ ಫ್ಯಾಶನ್ ಗೋಲ್ಸ್(Fashiona Goals) ತೋರಿಸುವ ನಟಿ ಉತ್ಕಟವಾದ ಫಿಟ್‌ನೆಸ್ ಉತ್ಸಾಹಿ ಎನ್ನುವುದು ಎಲ್ಲರಿಗೂ ಗೊತ್ತು.

ತನ್ನ ಫಿಟ್‌ನೆಸ್(Fitness) ದಿನಚರಿಯೊಂದಿಗೆ ತನ್ನ ಫಾಲೋವರ್ಸ್‌ಗೆ ಮಲೈಕಾ ಸ್ಫೂರ್ತಿ ನೀಡುತ್ತಾರೆ. ತನ್ನ ಮಾರ್ನಿಂಗ್ ವಾಕ್ ಒಳಗೊಂಡಂತೆ ನಟಿ ಯಾವುದನ್ನೂ ಅಷ್ಟಾಗಿ ತಪ್ಪಿಸಿಕೊಳ್ಳುವುದಿಲ್ಲ. ನಟಿಯ ಮಾರ್ನಿಂಗ್ ವಾಕ್ ಆಗಾಗ ಟ್ರೋಲ್‌ಗೆ(Troll) ಒಳಗಾಗಲು ಕಾರಣವಾಗುತ್ತವೆ. ಏಕೆಂದರೆ ಕೆಲವೊಮ್ಮೆ ನಟಿಯ ನಡಿಗೆ ಶೈಲಿ ಮತ್ತು ಕೆಲವೊಮ್ಮೆ ಬಟ್ಟೆಗಳಿಗಾಗಿ ಟೀಕೆಗೆ ಒಳಗಾಗುತ್ತಾರೆ ಮಲೈಕಾ.

Tap to resize

ಈ ಬಾರಿಯೂ ಅಂತಹದ್ದೇ ಘಟನೆ ನಡೆದಿದೆ. ನಟಿ ತನ್ನ ಮುದ್ದಿನ ನಾಯಿ ಕ್ಯಾಸ್ಪರ್‌ನೊಂದಿಗೆ ಮಾರ್ನಿಂಗ್ ವಾಕ್ ಮಾಡಿದ್ದಾರೆ. ಒಂದು ಜೋಡಿ ಬೂದು ಬಣ್ಣದ ಟ್ರ್ಯಾಕ್‌ಗಳು ಮತ್ತು ಬಣ್ಣ-ಸಂಯೋಜಿತ ಸ್ವೆಟ್‌ಶರ್ಟ್ ಧರಿಸಿದ್ದರು ಮಲೈಕಾ. ಆದರೆ ನೆಟ್ಟಿಗರ ಗಮನವನ್ನು ಸೆಳೆದದ್ದು ನಟಿ ಬ್ರಾಲೆಸ್ ಆಗಿದ್ದು. ತನ್ನ ಆರಾಮದಾಯಕವಾದ ನೋಟಕ್ಕಾಗಿ ನಟಿ ಬ್ರಾಲೆಸ್ ಆಗಿದ್ದನ್ನು ಪಾಪ್ಪರಾಜಿಗಳು ಗಮನಿಸಿದ್ದಾರೆ.

ಈ ಕಾರಣದಿಂದ ನಟಿ ಟ್ರೋಲ್ ಆಗಿದ್ದಾರೆ. ಬಳಕೆದಾರರಲ್ಲಿ ಒಬ್ಬರು 'ಬ್ರಾ ಧರಿಸಲು ಇಷ್ಟವಿಲ್ಲವೇ?' ಎಂದು ಬರೆದರೆ, ಮತ್ತೊಬ್ಬರು 'ನಾಚಿಕೆಯಿಲ್ಲದ ಮಹಿಳೆ' ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬರು 'ಸಿಂಗಲ್ ಬ್ರಾ ಇಲ್ಲದೆ ಡಬಲ್ ಮಾಸ್ಕ್ ... ಎಂದಿದ್ದಾರೆ. ಆದರೆ, ಅವರ ಅನೇಕ ಅಭಿಮಾನಿಗಳು ನಟಿ ಬ್ರಾ ಲೆಸ್ ಆಗಿ ಹೋಗಿದ್ದಕ್ಕಾಗಿ ಸಮರ್ಥಿಸಿಕೊಂಡಿದ್ದಾರೆ.

ಬ್ರಾ ಧರಿಸುವುದು ಅಥವಾ ಧರಿಸದಿರುವುದು ನಮ್ಮ ಹಕ್ಕು. ಆರಾಮ ಮತ್ತು ಆತ್ಮವಿಶ್ವಾಸ ಮುಖ್ಯ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 'ಆಕೆ ಯಾವುದೇ ತಪ್ಪು ಮಾಡಿಲ್ಲ. ಬ್ರಾಗಳು ಅನೇಕರಿಗೆ ಧರಿಸಲು ಕಂಫರ್ಟ್ ಇರುವುದಿಲ್ಲ ಎಂದಿದ್ದಾರೆ.

ಮಲೈಕಾ ಹಾಗೂ ಅರ್ಜುನ್ ಕಪೂರ್(Arjun Kapoor) ಬ್ರೇಕಪ್ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಅವರ ಬ್ರೇಕಪ್ ಕುರಿತಾದ ಎಲ್ಲಾ ಊಹಾಪೋಹಗಳಿಗೆ ವಿರಾಮ ಹಾಕುವ ಸಂದರ್ಭದಲ್ಲಿ, ಅರ್ಜುನ್ ಕಪೂರ್ ನಟಿಯೊಂದಿಗೆ ಮಿರರ್ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ.

ಅದಕ್ಕೆ ಶೀರ್ಷಿಕೆ ನೀಡಿ, 'ವದಂತಿಗಳಿಗೆ ಸ್ಥಳವಿಲ್ಲ. ಸುರಕ್ಷಿತವಾಗಿರಿ. ಜನರಿಗೆ ಶುಭ ಹಾರೈಸಿದ್ದಾರೆ. ಮಲೈಕಾ ಪೋಸ್ಟ್‌ಗೆ ಹೃದಯದ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ.

Latest Videos

click me!